ಭಾರತ-ಇಟಲಿ ಸಂಬಂಧ ಮತ್ತಷ್ಟು ಗಟ್ಟಿ : ಮೋದಿ

KannadaprabhaNewsNetwork |  
Published : May 21, 2026, 02:00 AM IST
Narendra Modi

ಸಾರಾಂಶ

ಭಾರತ-ಇಟಲಿ ಸಂಬಂಧಗಳನ್ನು ಬಲಪಡಿಸುವ ಬಗ್ಗೆ ನಾವು ವ್ಯಾಪಕವಾಗಿ ಚರ್ಚೆ ನಡೆಸಿದ್ದೇವೆ. ಉಭಯ ದೇಶಗಳ ಸಂಬಂಧಗಳನ್ನು ವಿಶೇಷ ಕಾರ್ಯತಂತ್ರದ (ವ್ಯೂಹಾತ್ಮಕ) ಪಾಲುದಾರಿಕೆಗೆ ಏರಿಸಲು ಮತ್ತು ವ್ಯಾಪಾರ, ಹೂಡಿಕೆ, ಹೊಸ ತಂತ್ರಜ್ಞಾನಗಳ ಕ್ಷೇತ್ರಗಳಲ್ಲಿ ಸಹಕಾರವನ್ನು ಹೆಚ್ಚಿಸಲು ನಿರ್ಧರಿಸಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ತಿಳಿಸಿದ್ದಾರೆ.

 ರೋಮ್‌: ಭಾರತ-ಇಟಲಿ ಸಂಬಂಧಗಳನ್ನು ಬಲಪಡಿಸುವ ಬಗ್ಗೆ ನಾವು ವ್ಯಾಪಕವಾಗಿ ಚರ್ಚೆ ನಡೆಸಿದ್ದೇವೆ. ಉಭಯ ದೇಶಗಳ ಸಂಬಂಧಗಳನ್ನು ವಿಶೇಷ ಕಾರ್ಯತಂತ್ರದ (ವ್ಯೂಹಾತ್ಮಕ) ಪಾಲುದಾರಿಕೆಗೆ ಏರಿಸಲು ಮತ್ತು ವ್ಯಾಪಾರ, ಹೂಡಿಕೆ, ಹೊಸ ತಂತ್ರಜ್ಞಾನಗಳ ಕ್ಷೇತ್ರಗಳಲ್ಲಿ ಸಹಕಾರವನ್ನು ಹೆಚ್ಚಿಸಲು ನಿರ್ಧರಿಸಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ತಿಳಿಸಿದ್ದಾರೆ.

ಯುದ್ಧ ಸಲಕರಣೆಗಳ ವಿನಿಮಯ

ವ್ಯೂಹಾತ್ಮಕ ಪಾಲುದಾರಿಕೆ ಸಂಬಂಧದ ಮೂಲಕ ಯುದ್ಧ ಸಲಕರಣೆಗಳ ವಿನಿಮಯಕ್ಕೆ ಉಭಯ ದೇಶಗಳಿಗೆ ಅವಕಾಶ ಸಿಗಲಿದೆ.5 ದೇಶಗಳ ಪ್ರವಾಸ ಕೈಗೊಂಡಿರುವ ಅವರು ಮಂಗಳವಾರ ರಾತ್ರಿ ಕೊನೆಯ ದೇಶ ಇಟಲಿಗೆ ಆಗಮಿಸಿದರು. ಬುಧವಾರ ಇಟಲಿ ಅಧ್ಯಕ್ಷ ಸೆರ್ಗಿಯೊ ಮಟ್ಟರೆಲ್ಲಾ ಅವರನ್ನು ಭೇಟಿ ಮಾಡಿ ವ್ಯಾಪಾರ, ಹೂಡಿಕೆ ಮತ್ತು ಸಾಂಸ್ಕೃತಿಕ ಸಂಪರ್ಕಗಳು ಸೇರಿದಂತೆ ಭಾರತ-ಇಟಲಿ ಸ್ನೇಹಕ್ಕೆ ಸಂಬಂಧಿಸಿದ ವಿವಿಧ ಅಂಶಗಳನ್ನು ಚರ್ಚಿಸಿದರು. ಕೃತಕ ಬುದ್ಧಿಮತ್ತೆ, ನಿರ್ಣಾಯಕ ಖನಿಜಗಳು, ಬಾಹ್ಯಾಕಾಶ ಮತ್ತು ಪರಮಾಣು ಇಂಧನದಂತಹ ಕ್ಷೇತ್ರಗಳಲ್ಲಿ ಸಹಯೋಗದ ಬಗ್ಗೆಯೂ ಚರ್ಚೆ ನಡೆಸಿದರು.

ಜಾರ್ಜಿಯಾ ಮೆಲೋನಿ ಜತೆ ದ್ವಿಪಕ್ಷೀಯ ಮಾತುಕತೆ

ಆ ಬಳಿಕ ಪ್ರಧಾನಿ ಜಾರ್ಜಿಯಾ ಮೆಲೋನಿ ಜತೆ ದ್ವಿಪಕ್ಷೀಯ ಮಾತುಕತೆ ನಡೆಸಿ, ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಈ ಕುರಿತು ಟ್ವೀಟ್‌ ಮಾಡಿರುವ ಮೋದಿ, ‘ಪ್ರಧಾನಿ ಮೆಲೋನಿ ಅವರೊಂದಿಗಿನ ಮಾತುಕತೆಗಳು ಅತ್ಯುತ್ತಮವಾಗಿದ್ದವು. ಭಾರತ-ಇಟಲಿ ಸ್ನೇಹವನ್ನು ಮತ್ತಷ್ಟು ಹೆಚ್ಚಿಸುವ ಅವರ ಬದ್ಧತೆ ಶ್ಲಾಘನೀಯ. ನಮ್ಮ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳು ವ್ಯಾಪಾರ, ಬಾಹ್ಯಾಕಾಶ, ತಂತ್ರಜ್ಞಾನ ಮತ್ತು ಇತರ ಕ್ಷೇತ್ರಗಳಲ್ಲಿ ಗಮನಾರ್ಹವಾಗಿ ಮುಂದುವರಿದಿವೆ. ಸಂಪರ್ಕಗಳನ್ನು ಮತ್ತಷ್ಟು ಗಟ್ಟಿಗೊಳಿಸುವ ಸಲುವಾಗಿ, ನಾವು ನಮ್ಮ ಸಂಬಂಧಗಳನ್ನು ವಿಶೇಷ ಕಾರ್ಯತಂತ್ರದ ಪಾಲುದಾರಿಕೆಗೆ ಏರಿಸಿದ್ದೇವೆ’ ಎಂದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

9,911 ಹೊಸ ಎಂಬಿಬಿಎಸ್‌ ಸೀಟು ಘೋಷಣೆ
ವಾಂಗ್ಚುಕ್‌ಗೆ 2 ದಿನದಲ್ಲಿ ಸಾವಿನ ಅಪಾಯ : ಹೈಕೋರ್ಟ್‌ಗೆ ಅರ್ಜಿ