ಸಂಪುಟ ಪುನಾರಚನೆ ಗುಸುಗುಸು ನಡುವೆ ಇಂದು ಮೋದಿ ಮಂತ್ರಿಮಂಡಲ ಸಭೆ

KannadaprabhaNewsNetwork |  
Published : May 21, 2026, 02:00 AM ISTUpdated : May 21, 2026, 04:59 AM IST
PM Modi

ಸಾರಾಂಶ

ದೇಶದಲ್ಲಿ ಪಂಚ ರಾಜ್ಯ ಚುನಾವಣೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಪಂಚ ರಾಷ್ಟ್ರ ಭೇಟಿ ಸಂಪನ್ನವಾದ ಬೆನ್ನಲ್ಲೇ ಗುರುವಾರ ಅವರ ನೇತೃತ್ವದಲ್ಲಿ ಮಹತ್ವದ ಮಂತ್ರಿಮಂಡಲ ಸಭೆ ನಡೆಯಲಿದೆ.

 ನವದೆಹಲಿ: ದೇಶದಲ್ಲಿ ಪಂಚರಾಜ್ಯ ಚುನಾವಣೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಪಂಚರಾಷ್ಟ್ರ ಭೇಟಿ ಸಂಪನ್ನವಾದ ಬೆನ್ನಲ್ಲೇ ಗುರುವಾರ ಅವರ ನೇತೃತ್ವದಲ್ಲಿ ಮಹತ್ವದ ಮಂತ್ರಿಮಂಡಲ ಸಭೆ ನಡೆಯಲಿದೆ. ಇದರಲ್ಲಿ ಎಲ್ಲಾ ಸಂಪುಟ ಸಚಿವರು, ಸ್ವತಂತ್ರ ಉಸ್ತುವಾರಿ ಹೊಂದಿರುವ ರಾಜ್ಯ ಸಚಿವರು ಮತ್ತು ಇತರೆ ರಾಜ್ಯ ಸಚಿವರು ಭಾಗಿಯಾಗಲಿದ್ದಾರೆ.

ಇದು ಈ ವರ್ಷದ ಇಂಥ ಮೊದಲ ಸಭೆಯಾಗಿದೆ. ಸಂಪುಟ ಪುನಾರಚನೆಯ ಚರ್ಚೆ ನಡೆಯುತ್ತಿರುವ ಹೊತ್ತಿನಲ್ಲೇ ಏರ್ಪಡಿಸಲಾಗಿರುವುದು ಗಮನಾರ್ಹ.

ಏನೇನು ಚರ್ಚೆ?:

ಮೂಲಗಳ ಪ್ರಕಾರ, ಈ ಸಭೆಯಲ್ಲಿ ಎಲ್ಲಾ ಸಚಿವಾಲಯಗಳ ಕಾರ್ಯನಿರ್ವಹಣೆ, ತೆಗೆದುಕೊಳ್ಳಲಾಗಿರುವ ಪ್ರಮುಖ ನಿರ್ಧಾರಗಳು, ಅದರ ಫಲಿತಾಂಶ, ಮುಂದಿನ ಯೋಜನೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚೆಯಾಗಲಿದೆ. ಜತೆಗೆ, ಸರ್ಕಾರದ ವಿವಿಧ ಯೋಜನೆಗಳು ಮತ್ತು ಕಾರ್ಯಕ್ರಮಗಳು, ಗರಿಷ್ಠ ಯಶಸ್ಸು ಲಭಿಸುವಂತೆ ಅವುಗಳ ಅನುಷ್ಠಾನದ ಬಗ್ಗೆಯೂ ವಿಮರ್ಶೆಗಳು ನಡೆಯುವ ಸಾಧ್ಯತೆಯಿದೆ.

ಯುದ್ಧದ ಬಗ್ಗೆಯೂ ಪ್ರಸ್ತಾಪ:

ಸದ್ಯ ಸ್ಥಗಿತವಾಗಿದ್ದರೂ ಆರ್ಥಿಕ ಅಸ್ಥಿರತೆಗೆ ಕಾರಣವಾಗಿರುವ ಮಧ್ಯಪ್ರಾಚ್ಯ ಸಂಘರ್ಷವೂ ಸಂಪುಟ ಸಭೆಯಲ್ಲಿ ಪ್ರಸ್ತಾಪವಾಗಲಿದ್ದು, ಜನರಿಗೆ ಹೆಚ್ಚು ಸಮಸ್ಯೆಯಾಗದಂತೆ ಪರಿಸ್ಥಿತಿಯನ್ನು ನಿಭಾಯಿಸುವ ರೀತಿಯ ಬಗ್ಗೆ ಪ್ರಧಾನಿ ಮೋದಿಯವರು ಸಚಿವಾಲಯಗಳು ಮತ್ತು ಇಲಾಖೆಗಳಿಗೆ ನಿರ್ದೇಶನ ಕೊಡುವ ನಿರೀಕ್ಷೆಯಿದ್ದು, ಇಂಧನ, ಕೃಷಿ, ರಸಗೊಬ್ಬರ, ವಿಮಾನಯಾನ, ಹಡಗುಗಳ ಸಂಚಾರ, ಸರಕು ಸಾಗಣೆಯಂತಹ ಪ್ರಮುಖ ಕ್ಷೇತ್ರಗಳಿಗೆ ಒತ್ತು ಕೊಡುವ ಸಾಧ್ಯತೆಯಿದೆ.

ಸುಧಾರಣಾ ಎಕ್ಸ್‌ಪ್ರೆಸ್‌:

ತಮ್ಮ ಸರ್ಕಾರದ ‘ಸುಧಾರಣಾ ಎಕ್ಸ್‌ಪ್ರೆಸ್’ ಕ್ರಮದಿಂದಾಗಿ ಜನಸಾಮಾನ್ಯರಿಗೆ ಪ್ರಯೋಜನವಾಗಿದೆ ಎಂದು ಈ ಹಿಂದಿನ ಸಂಪುಟ ಸಭೆಗಳಲ್ಲಿ ಪ್ರಸ್ತಾಪಿಸಿದ್ದ ಪ್ರಧಾನಿ ಮೋದಿ, ಮುಂದಿನ 10 ವರ್ಷಗಳ ಸುಧಾರಣಾ ಆದ್ಯತೆಗಳನ್ನು ವಿವರಿಸಿದ್ದರು. ಇದರ ಜಾರಿ ಬಗ್ಗೆಯೂ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಗಬಹುದು.

ಪುನಾರಚನೆ ಗುಸುಗುಗು ಏಕೆ?

ಬಹುತೇಕ ರಾಜ್ಯಗಳಲ್ಲಿ ಬಿಜೆಪಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಈಗಾಗಲೇ ಪೂರ್ಣ

ಹೀಗಾಗಿ ರಾಷ್ಟ್ರೀಯ ಮಟ್ಟದಲ್ಲಿ ಪಕ್ಷದ ಸಂಘಟನೆಯಲ್ಲಿ ಬದಲಾವಣೆಗೆ ಮುಹೂರ್ತ

ಜೊತೆಗೆ 2027ರ ವಿಧಾನಸಭಾ ಚುನಾವಣೆಗಳ ಹಿನ್ನೆಲೆಯಲ್ಲಿ ಬದಲಾವಣೆ ಸಂಭವ

ಕೆಲ ಸಚಿವರು ಪಕ್ಷ ಸಂಘಟನೆಗೆ, ಹೊಸ, ಅನುಭವಿಗಳಿಗೆ ಸಂಪುಟದಲ್ಲಿ ಅವಕಾಶ ನಿರೀಕ್ಷೆ

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

9,911 ಹೊಸ ಎಂಬಿಬಿಎಸ್‌ ಸೀಟು ಘೋಷಣೆ
ವಾಂಗ್ಚುಕ್‌ಗೆ 2 ದಿನದಲ್ಲಿ ಸಾವಿನ ಅಪಾಯ : ಹೈಕೋರ್ಟ್‌ಗೆ ಅರ್ಜಿ