ಅಡಿಸ್ ಅಬಾಬಾ: ಭಾರತ ಮತ್ತು ಇಥಿಯೋಪಿಯಾ ದೇಶಗಳು ಪ್ರಾದೇಶಿಕ ಶಾಂತಿ, ಭದ್ರತೆ, ಸಂಪರ್ಕದಲ್ಲಿ ಸ್ವಾಭಾವಿಕ ಪಾಲುದಾರರು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಬುಧವಾರ ಇಥಿಯೋಪಿಯಾ ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ ಅವರು, ಉಭಯ ದೇಶಗಳ ಪ್ರಾಮುಖ್ಯ ಒತ್ತಿ ಹೇಳಿದರು. ಮೋದಿ ಅವರು ವಿದೇಶಿ ಸಂಸತ್ತನ್ನು ಉದ್ದೇಶಿಸಿ ಮಾತನಾಡಿರುವುದು ಇದು 18ನೇ ಬಾರಿ.
‘ಇಥಿಯೋಪಿಯಾ ದೇಶವು ಆಫ್ರಿಕಾದ ಮಹತ್ವದ ಸ್ಥಾನದಲ್ಲಿದ್ದರೆ, ಭಾರತವು ಹಿಂದೂ ಮಹಾಸಾಗರದ ಹೃದಯಭಾಗದಲ್ಲಿದೆ. ಹೀಗೆ, ತಮ್ಮತಮ್ಮ ಖಂಡಗಳಲ್ಲಿ ಆಯಕಟ್ಟಿನ ಸ್ಥಳಗಳಲ್ಲಿರುವ ಎರಡೂ ದೇಶಗಳು ಪ್ರಾದೇಶಿಕ ಶಾಂತಿ, ಭದ್ರತೆ ಮತ್ತು ಸಂಪರ್ಕದಲ್ಲಿ ನೈಸರ್ಗಿಕ ಪಾಲುದಾರರು’ ಎಂದು ಹೇಳಿದ್ದಾರೆ.