ಭಾರತದಲ್ಲಿ ನವೆಂಬರ್‌-ಡಿಸೆಂಬರ್‌ನಲ್ಲಿ 35 ಲಕ್ಷ ವಿವಾಹಗಳು ನೆರವೇರುವ ನಿರೀಕ್ಷೆ : ₹4.25 ಲಕ್ಷ ಕೋಟಿ ವೆಚ್ಚ!

KannadaprabhaNewsNetwork |  
Published : Sep 22, 2024, 01:45 AM ISTUpdated : Sep 22, 2024, 05:18 AM IST
ಮದುವೆ | Kannada Prabha

ಸಾರಾಂಶ

ಭಾರತದಲ್ಲಿ ನವೆಂಬರ್‌-ಡಿಸೆಂಬರ್‌ನಲ್ಲಿ 35 ಲಕ್ಷ ವಿವಾಹಗಳು ನೆರವೇರುವ ನಿರೀಕ್ಷೆಯಿದೆ. ಇದಕ್ಕಾಗಿ 4.25 ಲಕ್ಷ ಕೋಟಿ ರು.ನಷ್ಟು ವೆಚ್ಚ ಆಗುವ ಸಾಧ್ಯತೆ ಇದೆ

ನವದೆಹಲಿ: ಭಾರತದಲ್ಲಿ ನವೆಂಬರ್‌-ಡಿಸೆಂಬರ್‌ನಲ್ಲಿ 35 ಲಕ್ಷ ವಿವಾಹಗಳು ನೆರವೇರುವ ನಿರೀಕ್ಷೆಯಿದೆ. ಇದಕ್ಕಾಗಿ 4.25 ಲಕ್ಷ ಕೋಟಿ ರು.ನಷ್ಟು ವೆಚ್ಚ ಆಗುವ ಸಾಧ್ಯತೆ ಇದೆ ಎಂದು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟದ (ಸಿಎಐಟಿ) ವರದಿ ಹೇಳಿದೆ.ಇದಕ್ಕೂ ಮುನ್ನ ಈ ವರ್ಷ ಜನವರಿ 15 ಮತ್ತು ಜುಲೈ15 ರ ನಡುವೆ 42 ಲಕ್ಷಕ್ಕೂ ಹೆಚ್ಚು ವಿವಾಹಗಳು ನಡೆದಿವೆ. 

ಇದು ಅಂದಾಜು ₹5.5 ಲಕ್ಷ ಕೋಟಿ ವೆಚ್ಚವನ್ನು ಸೃಷ್ಟಿಸಿದೆ ಎಂದೂ ಸಮೀಕ್ಷೆ ಹೇಳಿದೆ.2023-24ರಲ್ಲಿ 60 ಮುಹೂರ್ತದ ದಿನಗಳಿದ್ದವು. ಆದರೆ 24-25ರ ಅವಧಿಯಲ್ಲಿ ಅದಕ್ಕಿಂತ ಕಮ್ಮಿ (49) ಮುಹೂರ್ತಗಳಿವೆ. ಕಳೆದ ಸಾಲಿಗಿಂತ 11ರಷ್ಟು ಕಡಿಮೆ ಮುಹೂರ್ತಗಳಿದ್ದರೂ ಮದುವೆ ವೆಚ್ಚ ಮಾತ್ರ ಕಡಿಮೆ ಆಗಿಲ್ಲ ಎಂದು ವರದಿ ಹೇಳಿದೆ.

ಭಾರತದಲ್ಲಿ ವರ್ಷಕ್ಕೆ ಸುಮಾರು 1 ಕೋಟಿ ಮದುವೆ ಸಮಾರಂಭಗಳು ನಡೆಯುತ್ತವೆ. ದೇಶವು ಮದುವೆ ಮಾರುಕಟ್ಟೆಯಲ್ಲಿ ವಿಶ್ವದ 2ನೇ ಅತಿದೊಡ್ಡ ರಾಷ್ಟ್ರವಾಗಿದೆ.

ವೆಚ್ಚ ಏಕೆ ಹೆಚ್ಚಳ?:ಇತ್ತೀಚಿನ ದಿನಗಳಲ್ಲಿ ಮದುವೆಯ ವೆಚ್ಚ ಹೆಚ್ಚಳಕ್ಕೆ, ಬದಲಾಗಿರುವ ಜನರ ಆದ್ಯತೆ/ಅಭಿರುಚಿಗಳು ಕಾರಣವಾಗಿವೆ. ಬಹುಖಾದ್ಯದ ಫುಡ್‌ ಕೌಂಟರ್‌ಗಳು, ಡ್ರೋನ್‌ ಮೂಲಕ ಮದುವೆಯ ಚಿತ್ರೀಕರಣ, ಪ್ರಿ-ವೆಡ್ಡಿಂಗ್‌ ಫೋಟೋ ಶೂಟ್‌, ಆಡಿಯೋ ಮೂಲಕ ಆಮಂತ್ರಣ ಕಳಿಸುವುದು, ಆರ್ಕೆಸ್ಟ್ರಾ ಏರ್ಪಡಿಸುವುದು, ಅತಿಥಿಗಳಿಗೆ ವಿಶಿಷ್ಟ ಕಾಣಿಕೆ ನೀಡುವುದು, ಮದುವೆ ಮಂಟಪವನ್ನು ಅತ್ಯಾಧುನಿಕ 3ಡಿ ತಂತ್ರಜ್ಞಾನ ಬಳಸಿ ಸಿಂಗರಿಸುವುದು- ಇವು ಹೊಸ ನಮೂನೆಯ ವೆಚ್ಚಗಳಾಗಿವೆ. ಹೀಗಾಗಿಯೇ ಮದುವೆ ವಚ್ಚ ಏರಿಕೆ ಆಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಈಗ ಖರ್ಗೆ ಹೆಗಲಿಗೆ ನಿರ್ಧಾರ ಯಾರು ಆಗ್ತಾರೆ ಕೇರಳಂ ಸಿಎಂ?
ಪಶ್ಚಿಮ ಬಂಗಾಳ ವಿಧಾನಸಭೆ ವಿರ್ಸಜನೆ ಗೌರ್‍ನರ್‌ ಗೇಟ್‌ ಪಾಸ್‌ : ದೀದಿ ಈಗ ಬೀದಿಗೆ!