ಬೆಂಗಳೂರು: ಇಸ್ರೋ ಇತ್ತೀಚೆಗೆ ಹಾರಿಬಿಟ್ಟಿದ್ದ ಭೂ ಸರ್ವೇಕ್ಷಣಾ ಉಪಗ್ರಹವಾದ ಇನ್ಸಾಟ್ -3ಡಿಎಸ್ ಆಗಸದಲ್ಲಿ ತನ್ನ ಕಾರ್ಯಾಚರಣೆ ಆರಂಭಿಸಿದೆ. ಉಪಗ್ರಹವು ತಾವು ಇತ್ತೀಚೆಗೆ ತೆಗೆದ ಭೂಮಿಯ ಮೊದಲ ಫೋಟೋಗಳನ್ನು ಭೂಮಿಗೆ ರವಾನಿಸಿದೆ. ಅದನ್ನು ಕರ್ನಾಟಕದ ಹಾಸನದಲ್ಲಿರುವ ಇಸ್ರೋದ ಮಾಸ್ಟರ್ ಕಂಟ್ರೋಲ್ ಕೇಂದ್ರದಲ್ಲಿ ಸಂಸ್ಕರಣೆ ಮಾಡಿ ಬಿಡುಗಡೆ ಮಾಡಲಾಗಿದೆ.
ಉಪಗ್ರಹದಲ್ಲಿನ ಚಾನೆಲ್ 6 ಇಮೇಜರ್, ಭೂಮಿಯ ಮೇಲ್ಮೈ, ವಾತಾವರಣ ವಿವಿಧ ಮಾದರಿಯಲ್ಲಿ ಸೆರೆಹಿಡಿಯುತ್ತದೆ. ಇದು ಮೋಡ, ಭೂಮಿಯ ಮೇಲ್ಪದರದ ಉಷ್ಣಾಂಶ, ನೀರಿನ ಆವಿಯ ಹಂಚಿಕೆ ಮೊದಲಾದ ವಿಷಯಗಳನ್ನು ಖಚಿತವಾಗಿ ಅರಿಯಲು ನೆರವು ನೀಡುತ್ತದೆ ಎಂದು ಇಸ್ರೋ ಮಾಹಿತಿ ನೀಡಿದೆ.