ಅಂಗವೈಕಲ್ಯ ಕೋಟಾದಡಿ ವೈದ್ಯ ಸೀಟು ಪಡೆಯಲು ಪಾದ ತುಂಡರಿಸಿಕೊಂಡ!

KannadaprabhaNewsNetwork |  
Published : Jan 25, 2026, 03:15 AM IST
ಸೂರಜ್‌ | Kannada Prabha

ಸಾರಾಂಶ

ಅಂಗವೈಕಲ್ಯದಡಿ ಕೋಟಾದಡಿ ಎಂಬಿಬಿಎಸ್‌ ಸೀಟು ಪಡೆಯಲು ವಿದ್ಯಾರ್ಥಿಯೊಬ್ಬ ತನ್ನ ಪಾದದ ಒಂದಿಷ್ಟು ಭಾಗವನ್ನೇ ಕತ್ತರಿಸಿಕೊಂಡ ಆಘಾತಕಾರಿ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಮೊದಲಿಗೆ ಕೊಲೆ ಯತ್ನದಡಿ ಕಾಲು ಕಟ್‌ ಆಗಿದೆ ಎಂದು ಕೇಸು ದಾಖಲಿಸಿದ್ದ ಪೊಲೀಸರಿಗೆ ಇದೀಗ ಸ್ವತಃ ಸೂರಜ್‌ ಭಾಸ್ಕರ್‌ ಎಂಬ ವಿದ್ಯಾರ್ಥಿಯೇ ಕೃತ್ಯ ಎಸಗಿದ ವಿಷಯ ಬೆಳಕಿಗೆ ಬಂದಿದೆ.

ಗೆಳತಿ ವಿಚಾರಣೆಯಿಂದ ಬೆಳಕಿಗೆ

ವಾರಾಣಸಿ: ಅಂಗವೈಕಲ್ಯದಡಿ ಕೋಟಾದಡಿ ಎಂಬಿಬಿಎಸ್‌ ಸೀಟು ಪಡೆಯಲು ವಿದ್ಯಾರ್ಥಿಯೊಬ್ಬ ತನ್ನ ಪಾದದ ಒಂದಿಷ್ಟು ಭಾಗವನ್ನೇ ಕತ್ತರಿಸಿಕೊಂಡ ಆಘಾತಕಾರಿ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಮೊದಲಿಗೆ ಕೊಲೆ ಯತ್ನದಡಿ ಕಾಲು ಕಟ್‌ ಆಗಿದೆ ಎಂದು ಕೇಸು ದಾಖಲಿಸಿದ್ದ ಪೊಲೀಸರಿಗೆ ಇದೀಗ ಸ್ವತಃ ಸೂರಜ್‌ ಭಾಸ್ಕರ್‌ ಎಂಬ ವಿದ್ಯಾರ್ಥಿಯೇ ಕೃತ್ಯ ಎಸಗಿದ ವಿಷಯ ಬೆಳಕಿಗೆ ಬಂದಿದೆ.

ಪಾದಕ್ಕೆ ಕತ್ತರಿ:

ಜ.14ರಂದು ಸೂರಜ್ ಮೇಲೆ ದಾಳಿಯಾಗಿದೆ ಎಂಬ ಸುದ್ದಿ ಪೊಲೀಸರಿಗೆ ತಲುಪಿ ಅವರು ಸ್ಥಳಕ್ಕೆ ಆಗಮಿಸಿದ್ದರು. ಈ ವೇಳೆ ಆತ ನೀಡಿದ ಮಾಹಿತಿ ಆಧರಿಸಿ ಇಬ್ಬರು ಅನಾಮಿಕ ವ್ಯಕ್ತಿಗಳ ವಿರುದ್ಧ ಕೊಲೆ ಯತ್ನದ ಕೇಸು ದಾಖಲಿಸಿದ್ದರು.

ಬಯಲಾಗಿದ್ದು ಹೇಗೆ?:

ಈ ನಡುವೆ ತನಿಖೆ ವೇಳೆ ಸೂರಜ್‌ ಒಮ್ಮೊಮ್ಮೆ ಒಂದೊಂದು ರೀತಿ ಹೇಳಿಕೆ ನೀಡಿದ್ದ. ಜೊತೆಗೆ ಆತನ ಮನೆ ಸುತ್ತಮುತ್ತ ಪರಿಶೀಲನೆ ವೇಳೆ ಅಲ್ಲಿಗೆ ಯಾರು ಬಂದಿದ್ದ ಬಗ್ಗೆಯಾಗಲೀ, ಫೋನ್‌ನಲ್ಲಿ ಯಾರೊಂದಿಗೆ ಚರ್ಚಿಸಿದ ವಿಷಯವಾಗಲೀ ಕಂಡುಬಂದಿರಲಿಲ್ಲ. ಆದರೆ ಅರವಳಿಕೆ ಚುಚ್ಚುಮದ್ದಿನ ಬಾಟಲ್‌ ಸಿಕ್ಕಿತ್ತು. ಜೊತೆಗೆ ಆತನ ಪ್ರಿಯತಮೆ ವಿಚಾರಣೆ ವೇಳೆ ಸೂರಜ್‌ಗೆ 2026ರಲ್ಲಿ ಹೇಗಾದರೂ ನೀಟ್‌ ಸೀಟು ಪಡೆಯಲೇ ಬೇಕೆಂಬ ಹಠ ಇತ್ತು. ಇದಕ್ಕಾಗಿ ಬಿಎಚ್‌ಯು ವಿವಿಯಿಂದ ಅಂಗವಿಕಲ ಕೋಟಾದ ಪ್ರಮಾಣ ಪತ್ರ ಪಡೆಯಲು ಯತ್ನಿಸಿ ವಿಫಲನಾಗಿದ್ದ ಎಂಬ ವಿಷಯ ಬೆಳಕಿಗೆ ಬಂದಿತ್ತು.

ಜೊತೆಗೆ ಸೂರಜ್‌, ತನ್ನೆಲ್ಲಾ ಗುರಿ ಕುರಿತು ಡೈರಿ ಬರೆಸುವ ಅಭ್ಯಾಸ ಇತ್ತು. ಅದನ್ನು ಪರಿಶೀಲಿಸಿದಾಗ 2026ರಲ್ಲಿ ಎಂಬಿಬಿಎಸ್‌ ಸೀಟು ಪಡೆವ ಬಗ್ಗೆ ಬರೆದಿದ್ದ. ಜೊತೆಗೆ ವಿವಾಹ ನೋಂದಣಿಗೆ ಫಾರ್ಮ್ ಅನ್ನೂ ತಂದಿಟ್ಟಿದ್ದು ಕಂಡುಬಂದಿತ್ತು.

ವಿಚಾರಣೆ ವೇಳೆ ಡಿ-ಫಾರ್ಮಾ ಮುಗಿಸಿದ್ದ ಸೂರಜ್‌, ಅರವಳಿಕೆ ಇಂಜೆಕ್ಷನ್‌ ಅನ್ನು ಸ್ವತಃ ತೆಗೆದುಕೊಂಡು ಬಳಿಕ ಪಾದದ ಭಾಗ ಕತ್ತರಿಸಿಕೊಂಡಿದ್ದ ಎಂಬ ವಿಷಯ ಬೆಳಕಿಗೆ ಬಂದಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ತೆಲಂಗಾಣ: ಮತ್ತೆ 300 ಬೀದಿ ನಾಯಿಗಳ ಹತ್ಯೆ
18ನೇ ಉದ್ಯೋಗ ಮೇಳ:61000 ಜನರಿಗೆ ಪ್ರಧಾನಿನೇಮಕಾತಿ ಪತ್ರ ವಿತರಣೆ