;Resize=(412,232))
ವಾಷಿಂಗ್ಟನ್: ವಲಸಿಗರು ಅಮೆರಿಕನ್ನರ ಕನಸುಗಳನ್ನು ಕಸಿಯುತ್ತಿದ್ದಾರೆ ಎಂದಾದಲ್ಲಿ ಮೊದಲಿಗೆ, ವಲಸಿಗರಾಗಿರುವ ನಿಮ್ಮ ಪತ್ನಿ ಉಷಾರನ್ನು ಭಾರತಕ್ಕೆ ಕಳಿಸಿ ಎಂದು ಅಮೆರಿಕ ಅಧ್ಯಕ್ಷ ಜೆ.ಡಿ.ವ್ಯಾನ್ಸ್ ಬಗ್ಗೆ ಅಮೆರಿಕದ ವಲಸಿಗ ಸಮುದಾಯ ತಿರುಗೇಟು ನೀಡಿದೆ.
ಇತ್ತೀಚೆಗೆ ವ್ಯಾನ್ಸ್, ಅಮೆರಿಕದಲ್ಲಿ ವಲಸಿಗರು ಮೂಲ ನಿವಾಸಿಗಳ ಕನಸುಗಳನ್ನು ಕಸಿಯುತ್ತಿದ್ದಾರೆ ಎಂದು ತೋರಿಸಲು ‘ಸ್ಥಳೀಯ ಕಾರ್ಮಿಕ’ನ ವಿಡಿಯೋ ಹಂಚಿಕೊಂಡಿದ್ದರು. ಜೊತೆಗೆ ವಲಸೆಯು ದೇಶಕ್ಕೆ ಮಾರಕ ಎಂದು ಹೇಳಿದ್ದರು.
ಇದಕ್ಕೆ ಜನರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದು, ‘ಊರಿಗೆಲ್ಲ ಬುದ್ಧಿವಾದ ಹೇಳುವ ಮುನ್ನ, ನೀವೇ ನಿಮ್ಮ ಭಾರತ ಮೂಲದ ಹೆಂಡತಿಯನ್ನು ಬಿಟ್ಟು, ಎಲ್ಲರಿಗೂ ಮಾದರಿಯಾಗಿ’ ಎಂದು ಬರೆದು ಆಗ್ರಹಿಸಿದ್ದಾರೆ.
ಓರ್ವ ಬಳಕೆದಾರ, ‘ವ್ಯಾನ್ಸ್ ತಮ್ಮ ಭಾರತ ಮೂಲದ ಪತ್ನಿ ಮತ್ತು ಮಕ್ಕಳಿಗೆ ಎಂದು ವಿಮಾನ ಟಿಕೆಟ್ ಬುಕ್ ಮಾಡುವರೆಂದು ಕಾಯುತ್ತಿದ್ದೇನೆ’ ಎಂದು ಬರೆದರೆ, ಮತ್ತೋರ್ವ, ‘ನಿಮ್ಮ ಪತ್ನಿ ಭಾರತದವರಲ್ಲವೇ? ಹಾಗಿದ್ದರೆ, ಅವರೂ ಸಹ ಅಮೆರಿಕದ ಕನಸು ಕದಿಯುತ್ತಿಲ್ಲವೇ?’ ಎಂದು ಪ್ರಶ್ನಿಸಿದ್ದಾರೆ.