ನವದೆಹಲಿ: ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಲು ಸಜ್ಜಾಗಿದ್ದಾರೆ ಎಂಬ ವರದಿಗಳ, ಅವರ ಮನವೊಲಿಸುವಲ್ಲಿ ಪಕ್ಷದ ಹಿರಿಯರು ಯಶಸ್ವಿಯಾಗಿದ್ದು ಸದ್ಯಕ್ಕೆ ಅವರು ಪಕ್ಷ ಬಿಡುವ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದಕ್ಕೆ ಪೂರಕವೆಂಬಂತೆ ಭಾನುವಾರ ಕಮಲ್‌ನಾಥ್ ಮನೆಯ ಮೇಲೆ ಹಾರಾಡುತ್ತಿದ್ದ ಜೈಶ್ರೀರಾಮ್ ಎಂಬ ಬರಹವಿದ್ದ ಕೇಸರಿ ಬಾವುಟ ಸೋಮವಾರ ನಾಪತ್ತೆಯಾಗಿದೆ.
ಆದರೆ ಅವರ ಪುತ್ರ ನಕುಲ್ ಈಗಲೂ ಬಿಜೆಪಿ ನಾಯಕರ ಸಂಪರ್ಕದಲ್ಲಿದ್ದು, ಅವರು ಬಿಜೆಪಿ ಸೇರುವ ಸಾಧ್ಯತೆ ತಳ್ಳಿಹಾಕುವಂತಿಲ್ಲ ಎನ್ನಲಾಗಿದೆ.