ಈವರೆಗೆ ದೇಶದ ಅತಿ ಹಿರಿಯ ಸಿಎಂ ಪಟ್ಟ ವಿಜಯನ್ (82) ಅವರಿಗಿತ್ತು
ಇತ್ತೀಚೆಗೆ ಕರ್ನಾಟಕದ ದೀರ್ಘ ಅವಧಿಯ ಸಿಎಂ ದಾಖಲೆಗೂ ಸಿದ್ದು ಪಾತ್ರ
ಅರುಣಾಚಲ ಪ್ರದೇಶ ಪೇಮಾ ಖಂಡು (46) ಅತಿ ಕಿರಿಯ ಸಿಎಂ ಆಗಿದ್ದಾರೆತ.ನಾಡು ಮಾಜಿ ಸಿಎಂ ದಿ.ಕರುಣಾನಿಧಿಗೆ (92) ರಾಜ್ಯ ಆಳಿದ ಅತಿ ಹಿರಿಯನವದೆಹಲಿ: ಇತ್ತೀಚೆಗಷ್ಟೇ ‘ಕರ್ನಾಟಕದಲ್ಲಿ ಸುದೀರ್ಘಾವಧಿ ಮುಖ್ಯಮಂತ್ರಿ’ ಎಂಬ ಪಟ್ಟವನ್ನು ಪಡೆದಿದ್ದ ಸಿದ್ದರಾಮಯ್ಯ(77) ಅವರು ಇದೀಗ ದೇಶದ ಅತಿ ಹಿರಿಯ ಸಿಎಂ ಆಗಿ ಹೊರಹೊಮ್ಮಿದ್ದಾರೆ. ಕೇರಳ ಸಿಎಂ ಆಗಿದ್ದ 82 ವರ್ಷದ ಪಿಣರಾಯಿ ವಿಜಯನ್ ರಾಜೀನಾಮೆಯಿಂದಾಗಿ ಅವರ ನಂತರದಲ್ಲಿದ್ದ ಸಿದ್ದರಾಮಯ್ಯ ಮೊದಲ ಸ್ಥಾನಕ್ಕೇರಿದ್ದಾರೆ.
2ನೇ ಬಾರಿಗೆ ಕರ್ನಾಟಕದ ಮುಖ್ಯಮಂತ್ರಿಯಾಗಿರುವ ಇವರು 2026ರ ಜ.6ರಂದು 2,792 ದಿನಗಳ ಕಾಲ ಸಿಎಂ ಆಗಿದ್ದ ದೇವರಾಜ ಅರಸ್ ಅವರನ್ನು ಸರಿಗಟ್ಟಿದ್ದರು ಹಾಗೂ ಅದನ್ನು ಮೀರುವ ಮೂಲಕ ರಾಜ್ಯದಲ್ಲಿ ಸುದೀರ್ಘಾವಧಿ ಆಳ್ವಿಕೆ ನಡೆಸಿದವರು ಎಂಬ ಖ್ಯಾತಿಗೆ ಪಾತ್ರರಾಗಿದ್ದರು.