-43 ಗ್ರಾಹಕರ 110 ಖಾತೆಗಳಿಗೆ ಕನ್ನ
ಸಾಕ್ಷಿ ಗುಪ್ತಾ ಬಂಧಿತ ಬ್ಯಾಂಕ್ ಸಿಬ್ಬಂದಿ. 110 ಖಾತೆಗಳಿಗೆ ಕನ್ನ ಹಾಕಿದ ಈಕೆ ಹಣ ವರ್ಗಾವಣೆ ಸಂದೇಶವನ್ನು ತಪ್ಪಿಸುವುದಕ್ಕಾಗ ಆಯಾ ಖಾತೆಗೆ ಲಿಂಕ್ ಆಗಿದ್ದ ಮೊಬೈಲ್ ಸಂಖ್ಯೆ ಮತ್ತು ಪಿಐಎನ್ ಸಂಖ್ಯೆಗಳನ್ನು ಬದಲಿಸಿದ್ದಳು. ಡಿಜಿಟಲ್ ತಂತ್ರಜ್ಞಾನದ ಬಗ್ಗೆ ಹೆಚ್ಚು ತಿಳಿವಳಿಕೆಯಿಲ್ಲದ ವಯೋವೃದ್ಧರ ಖಾತೆಗಳನ್ನೇ ಗುರಿಯಾಗಿಸಿಕೊಂಡಿದ್ದಳು. ವೃದ್ಧೆಯೊಬ್ಬಳ ಖಾತೆಯ ಮೂಲಕ ಸುಮಾರು 3 ಕೋಟಿ ರು. ವರ್ಗಾವಣೆ ಮಾಡಿದ್ದಳು. 31 ಗ್ರಾಹಕರ ಸ್ಥಿರ ಠೇವಣಿಗಳನ್ನು ಅವಧಿಗೆ ಮುನ್ನವೇ ಮುಕ್ತಾಯಗೊಳಿಸಿದ್ದಳು. ಈ ಎಲ್ಲ ಮೊತ್ತವನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಅಲ್ಲಿ ಸಂಪೂರ್ಣ ಹಣ ಕಳೆದುಕೊಂಡಿದ್ದಾಳೆ. ವ್ಯಕ್ತಿಯೊಬ್ಬರು ತಮ್ಮ ಠೇವಣಿ ಕುರಿತು ವಿಚಾರಿಸಿದಾಗ ಈ ಸಂಗತಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು ಬಂಧಿಸಲಾಗಿದ್ದು, ಬ್ಯಾಂಕ್ ಉದ್ಯೊಗದಿಂದ ವಜಾಗೊಳಿಸಿದೆ.