ಲಕ್‌ಪತಿ ದೀದಿಗೆ ಬಜೆಟ್‌ನಲ್ಲಿ ಮತ್ತಷ್ಟು ಬಲ

KannadaprabhaNewsNetwork |  
Published : Feb 02, 2024, 01:01 AM ISTUpdated : Feb 02, 2024, 07:48 AM IST
Womens Reservation Bill

ಸಾರಾಂಶ

ಮಹಿಳೆಯರು 1 ಲಕ್ಷ ರು. ಗಳಿಸುವ ಲಕ್‌ಪತಿ ದೀದಿ ಯೋಜನೆಗೆ ಬಜೆಟ್‌ನಲ್ಲಿ ಪ್ರೋತ್ಸಾಹಕಗಳನ್ನು ಘೋಷಿಸಲಾಗಿದೆ.

ಗ್ರಾಮೀಣ ಭಾರತದ ಸಾಮಾಜಿಕ ಮತ್ತು ಆರ್ಥಿಕತೆಯನ್ನು ಮಾರ್ಪಡಿಸುತ್ತಿರುವ ಸ್ವಸಹಾಯ ಗುಂಪುಗಳ ಮಹಿಳೆಯರ ಮತ್ತಷ್ಟು ಅಭಿವೃದ್ಧಿಗಾಗಿ ಪೂರಕ ವ್ಯವಸ್ಥೆ ರೂಪಿಸುವ ಘೋಷಣೆಯನ್ನು ಮಾಡಲಾಗಿದೆ. 

ಸ್ವಸಹಾಯ ಗುಂಪುಗಳಲ್ಲಿರುವ ಮಹಿಳೆಯರು ವಾರ್ಷಿಕ ಕನಿಷ್ಠ 1 ಲಕ್ಷ ರು. ಗಳಿಕೆ ಮಾಡುವ ಅವಕಾಶ ಒದಗಿಸಲು ತೀರ್ಮಾನಿಸಲಾಗಿದೆ.

83 ಲಕ್ಷ ಸ್ವಸಹಾಯ ಗುಂಪುಗಳಿಂದ ಸುಮಾರು 9 ಕೋಟಿ ಮಹಿಳೆಯರು ಗ್ರಾಮೀಣ ಭಾರತದ ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆಯನ್ನು ಸ್ವ ಉದ್ಯೋಗದ ಮೂಲಕ ಮಾರ್ಪಡಿಸುತ್ತಿದ್ದಾರೆ. 

ಈಗಾಗಲೇ 1 ಕೋಟಿ ಮಹಿಳೆಯರು ‘ಲಕ್‌ಪತಿ ದೀದಿ’ಗಳಾಗಿದ್ದು, ಇವರು ಇತರರಿಗೆ ಸ್ಫೂರ್ತಿಯಾಗಿದ್ದಾರೆ. ಇವರ ಸಂಖ್ಯೆಯನ್ನು 2ರಿಂದ 3 ಕೋಟಿಗೆ ಹೆಚ್ಚಿಸಲು ಯೋಜನೆ ರೂಪಿಸಲಾಗಿದೆ.

ಕಳೆದ ವರ್ಷ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ‘ಲಕ್‌ಪತಿ ದೀದಿ’ ಯೋಜನೆಯನ್ನು ಘೋಷಣೆ ಮಾಡಿದ್ದರು. 

ಇದು ದೇಶದ ಗ್ರಾಮೀಣ ಪ್ರದೇಶದಲ್ಲಿರುವ 2 ಕೋಟಿ ಮಹಿಳೆಯರಿಗೆ ಉದ್ಯೋಗ ಮಾಡಲು ಬೇಕಾದ ಕೌಶಲ್ಯಗಳನ್ನು ಕಲಿಸಲಾಗುತ್ತದೆ. 

ಪ್ಲಂಬಿಗ್‌, ಎಲ್‌ಇಡಿ ಬಲ್ಬ್‌ ತಯಾರಿಕೆ ಮತ್ತು ಡ್ರೋನ್‌ ನಿರ್ವಹಣೆ ಮತ್ತು ರಿಪೇರಿಯನ್ನು ಕಲಿಸಲಾಗುತ್ತದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಚರ್ಚೆಯೇ ನಡೆಯದ ಸಂಸತ್‌ನ ಮುಂಗಾರು ಅಧಿವೇಶನ ಅಂತ್ಯ!
ಖರ್ಗೆ ಭಾಷಣ ಮಾಡಿದ ಸ್ಥಳದಲ್ಲಿ ಹೋಮ ಮಾಡಿ ಶುದ್ಧೀಕರಣ!