ನಿರ್ಮಲಾ ಸೀತಾರಾಮನ್‌ ಅವರು ಮಂಡಿಸಿದ ಬಜೆಟ್‌ ಕೇಂದ್ರದ ಕುರ್ಚಿ ಬಚಾವೋ ಬಜೆಟ್‌: ರಾಹುಲ್‌

KannadaprabhaNewsNetwork |  
Published : Jul 24, 2024, 12:20 AM ISTUpdated : Jul 24, 2024, 07:12 AM IST
ರಾಹುಲ್‌ | Kannada Prabha

ಸಾರಾಂಶ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸಿರುವ ಬಜೆಟ್‌ಗೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಪ್ರತಿಕ್ರಿಯಿಸಿದ್ದು, ಇದು ಕುರ್ಚಿ ಉಳಿಸಿಕೊಳ್ಳುವ ಬಜೆಟ್‌ ಎಂದು ಕೊಂಕಾಡಿದ್ದಾರೆ.

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸಿರುವ ಬಜೆಟ್‌ಗೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಪ್ರತಿಕ್ರಿಯಿಸಿದ್ದು, ಇದು ಕುರ್ಚಿ ಉಳಿಸಿಕೊಳ್ಳುವ ಬಜೆಟ್‌ ಎಂದು ಕೊಂಕಾಡಿದ್ದಾರೆ. ಜೊತೆಗೆ ಆಪ್ತಮಿತ್ರರು, ಮೈತ್ರಿ ಪಕ್ಷಗಳನ್ನು ಓಲೈಕೆ ಮಾಡುವುದಕ್ಕಾಗಿ ಮಂಡನೆ ಮಾಡಲಾಗಿದೆ ಎಂದು ಟೀಕಿಸಿದರು.

ಈ ಬಗ್ಗೆ ಟ್ವೀಟ್‌ ಮಾಡಿರುವ ರಾಹುಲ್‌,‘ ಇದು ಖುರ್ಚಿ ಬಚಾವ್‌ ಬಜೆಟ್‌. ಮಿತ್ರರ ಕಣ್ಣೊರೆಸುವಿಕೆ. ಅನ್ಯರಾಜಗಳಿಗೆ ಧೋಖಾ ಮಾಡುವ ಮೂಲಕ ಅವರಿಗೆ ಪೊಳ್ಳು ಭರವಸೆಯನ್ನು ನೀಡಿದೆ’ ಎಂದರು.

ಆಪ್ತಮಿತ್ರರ ಓಲೈಕೆ: ಸಾಮಾನ್ಯ ಜನರಿಗೆ ಯಾವುದೇ ನೆರವು ನೀಡದೆ, ‘ಎಎ’ಗಳಿಗೆ (ಅಂಬಾನಿ ಅದಾನಿ) ವಿಶೇಷ ನೆರವು ನೀಡಲಾಗಿದೆ. 

ಕಾಪಿ ಪೇಸ್ಟ್‌: ಕಾಂಗ್ರೆಸ್‌ ಪ್ರಣಾಳಿಕೆ ಹಾಗೂ ಕಳೆದ ಬಜೆಟ್‌ಗಳ ಕಾಪಿ ಪೇಸ್ಟ್‌ ಆಗಿದೆ’ ಎಂದು ಟ್ವೀಟ್‌ನಲ್ಲಿ ಹೇಳಿಕೊಂಡಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕ್ಯಾನ್ಸರ್‌ ಅಂಶದ ಆತಂಕ: ದೇಶವ್ಯಾಪಿ ಮೊಟ್ಟೆ ಟೆಸ್ಟ್‌
ವೈದ್ಯೆಯ ಹಿಜಾಬ್‌ ಎಳೆದ ಸಿಎಂ ನಿತೀಶ್‌: ವಿವಾದ