ಮಣಿಪುರದಲ್ಲಿ ಆತಂಕ : ತರಬೇತಿ ಪಡೆದ 900 ತರಬೇತಿ ಪಡೆದ ಕುಕಿ ಉಗ್ರಗಾಮಿಗಳ ಒಳನುಸುಳುವಿಕೆ!

KannadaprabhaNewsNetwork |  
Published : Sep 22, 2024, 01:48 AM ISTUpdated : Sep 22, 2024, 05:11 AM IST
ಕುಕಿ ಉಗ್ರರು | Kannada Prabha

ಸಾರಾಂಶ

ಮಣಿಪುರದಲ್ಲಿ ಕುಕಿ ಮತ್ತು ಮೈತೇಯಿ ಸಮುದಾಯಗಳ ನಡುವಿನ ಹಿಂಸಾಚಾರದ ನಡುವೆ, ಜಂಗಲ್ ವಾರ್‌ಫೇರ್‌ನಲ್ಲಿ ತರಬೇತಿ ಪಡೆದ 900 ಕುಕಿ ಉಗ್ರಗಾಮಿಗಳು ಮ್ಯಾನ್ಮಾರ್‌ನಿಂದ ಮಣಿಪುರಕ್ಕೆ ಅಕ್ರಮವಾಗಿ ನುಸುಳಿದ್ದಾರೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.

ಇಂಫಾಲ: ಮಣಿಪುರದಲ್ಲಿ ಕುಕಿ ಮತ್ತು ಮೈತೇಯಿ ಸಮುದಾಯಗಳ ನಡುವೆ ಹಿಂಸಾಚಾರ ಭುಗಿಲೆದ್ದಿರುವ ಬೆನ್ನಲ್ಲೇ ಜಂಗಲ್‌ ವಾರ್‌ಫೇರ್‌ನಲ್ಲಿ ತರಬೇತಿ ಪಡೆದ 900 ಕುಕಿ ಉಗ್ರಗಾಮಿಗಳು ಮ್ಯಾನ್ಮಾರ್‌ನಿಂದ ಮಣಿಪುರಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದಾರೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.

ಈ ಕುರಿತು ಮಾಹಿತಿ ನೀಡಿರುವ ಮಣಿಪುರ ಸರ್ಕಾರದ ಭದ್ರತಾ ಸಲಹೆಗಾರ ಕುಲದೀಪ್ ಸಿಂಗ್, ‘ಜಂಗಲ್‌ ವಾರ್‌ಫೇರ್‌ನಲ್ಲಿ ತರಬೇತಿ 900 ಕುಕಿ ಉಗ್ರಗಾಮಿಗಳು ಅಕ್ರಮವಾಗಿ ಭಾರತ ಪ್ರವೇಶಿಸಿದ್ದಾರೆ. ಇವರೆಲ್ಲಾ ಡ್ರೋನ್ ಬಾಂಬ್, ರಾಕೆಟ್‌, ಕ್ಷಿಪಣಿಗಳನ್ನು ಹಾರಿಸುವ ತರಬೇತಿ ಪಡೆದು ಬಂದಿದ್ದಾರೆ. ಇವರೆಲ್ಲಾ ತಂಡ ತಂಡಗಳಾಗಿ ರಾಜ್ಯವ್ಯಾಪಿ ಹಂಚಿಹೋಗಿದೆ. ಇವರೆಲ್ಲಾ ಮೈತೇಯಿ ಸಮುದಾಯಗಳು ವಾಸಿಸುವ ಗ್ರಾಮದಲ್ಲಿ ಈ ತಿಂಗಳ ಅಂತ್ಯದೊಳಗೆ ದಾಳಿಗಳನ್ನು ನಡೆಸಬಹುದು’ ಎಂದಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮೈಸೂರು ಸ್ಯಾಂಡಲ್ ಸೋಪು ಉತ್ಪನ್ನ : ದಾಖಲೆ ಬರೆದ ಕೆಎಸ್‌ಡಿಎಲ್‌
ಮೇಘಾಲಯ ಮೇಲಿಲ್ಲ ಬಾಂಗ್ಲಾ ಸಂಘರ್ಷ ಪರಿಣಾಮ : ವಿಜಯ್‌