ಮೋದಿ ಫೇಸ್‌ಬುಕ್ ಪೋಸ್ಟ್‌ ಡಿಲೀಟ್

KannadaprabhaNewsNetwork |  
Published : Jul 29, 2026, 01:45 AM IST
ಮೋದಿ | Kannada Prabha

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ದೇಶದ ಯುವಜನರನ್ನು ಉದ್ದೇಶಿಸಿ ಮಾಡಿದ ಫೇಸ್‌ಬುಕ್ ಪೋಸ್ಟ್ ಅನ್ನು ಕೆಲಕಾಲ ತೆಗೆದುಹಾಕಿದ ಪ್ರಸಂಗ ಮಂಗಳವಾರ ಮುಂಜಾನೆ ನಡೆದಿದೆ. ಇದು ವಿವಾದಕ್ಕೀಡಾಗುತ್ತಿದ್ದಂತೆಯೇ ಇದು ತಾಂತ್ರಿಕ ಸಮಸ್ಯೆಯಿಂದ ಆಗಿದ್ದು ಎಂದು ಸ್ಪಷ್ಟಪಡಿಸಿದೆ.

- ಯುವಕರಿಗೆ ಕರೆ ನೀಡಿದ್ದ ವಿಡಿಯೋ ಕೆಲಕಾಲ ಕಣ್ಮರೆ

- ಭಾರಿ ಜನಾಕ್ರೋಶ । ಬಳಿಕ ವಿಡಿಯೋ ಮರುಸ್ಥಾಪನೆ

- ತಾಂತ್ರಿಕ ದೋಷದಿಂದ ಪ್ರಮಾದ: ಮೆಟಾ ಸ್ಪಷ್ಟನೆ

- ಸೂಕ್ತ ವಿವರಣೆ ನೀಡುವಂತೆ ಮೆಟಾಗೆ ಕೇಂದ್ರ ಸಮನ್ಸ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ದೇಶದ ಯುವಜನರನ್ನು ಉದ್ದೇಶಿಸಿ ಮಾಡಿದ ಫೇಸ್‌ಬುಕ್ ಪೋಸ್ಟ್ ಅನ್ನು ಕೆಲಕಾಲ ತೆಗೆದುಹಾಕಿದ ಪ್ರಸಂಗ ಮಂಗಳವಾರ ಮುಂಜಾನೆ ನಡೆದಿದೆ. ಇದು ವಿವಾದಕ್ಕೀಡಾಗುತ್ತಿದ್ದಂತೆಯೇ ಇದು ತಾಂತ್ರಿಕ ಸಮಸ್ಯೆಯಿಂದ ಆಗಿದ್ದು ಎಂದು ಸ್ಪಷ್ಟಪಡಿಸಿದೆ.

ಆದರೆ ಮೆಟಾ ಸ್ಪಷ್ಟನೆ ತೃಪ್ತಿಕರವಾಗಿಲ್ ಎಂದಿರುವ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಮೆಟಾದ ಜಾಗತಿಕ ಸಾರ್ವಜನಿಕ ನೀತಿ ವಿಭಾಗದ ಮುಖ್ಯಸ್ಥರಿಗೆ ಸ್ಪಷ್ಟನೆ ನೀಡುವಂತೆ ಸಮನ್ಸ್‌ ಜಾರಿ ಮಾಡಿದೆ.

ಮೂಲಗಳ ಪ್ರಕಾರ, ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಆಯೋಜಿಸಿದ್ದ ವಿದ್ಯಾರ್ಥಿಗಳ ಪ್ರತಿಭಟನೆಯ ಸಂದರ್ಭದಲ್ಲಿ ಜುಲೈ 23ರಂದು ಪ್ರಧಾನಿ ಮೋದಿ ಇನ್‌ಸ್ಟಾಗ್ರಾಂನಲ್ಲಿ ಯುವಕರಿಗೆ ಕರೆಯೊಂದನ್ನು ನೀಡಿದ್ದರು. ಅದನ್ನು ನಂತರ ಫೇಸ್‌ಬುಕ್‌ನಲ್ಲೂ ಹಾಕಿದ್ದರು. ಆದರೆ ಮಂಗಳವಾರ ನಸುಕಿನಲ್ಲಿ ಕೆಲಕಾಲ ಅದು ಕಣ್ಮರೆಯಾಗಿತ್ತು. ಆ ಪೋಸ್ಟ್‌ನ ಜಾಗದಲ್ಲಿ, ‘ಕಾನೂನು ವಿನಂತಿ (ಲೀಗಲ್‌ ಡಿಮ್ಯಾಂಡ್) ಕಾರಣ ಅದನ್ನು ತಡೆಹಿಡಿಯಲಾಗಿದೆ’ ಎಂದು ಬರೆಯಲಾಗಿತ್ತು.

ಇದರ ಸ್ಕ್ರೀನ್‌ಶಾಟ್‌ ಹಾಕಿದ ಬಳಕೆದಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಬಳಿಕ ವಿಡಿಯೋವನ್ನು ಕೆಲವೇ ಗಂಟೆಗಳಲ್ಲಿ ಮರುಸ್ಥಾಪಿಸಲಾಯಿತು, ಅದರ ನಂತರ ಮೆಟಾ ಸ್ಪಷ್ಟಪಡಿಸಿದ್ದು, ಆಂತರಿಕ ತಾಂತ್ರಿಕ ದೋಷದಿಂದ ಹೀಗಾಗಿದೆ ಮತ್ತು ಯಾವುದೇ ಸರ್ಕಾರಿ ನಿರ್ದೇಶನದ ಅನುಸಾರ ಅಲ್ಲ ಎಂದು ಸ್ಪಷ್ಟಪಡಿಸಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕಾವೇರಿ ವಿವಾದ : ತ.ನಾಡು ಸಿಎಂ ಸಭೆ ಬಗ್ಗೆ ಕುತೂಹಲ
ಮಂಗ್ಳೂರು ಪಬ್ಬಲ್ಲಿ ಮಹಿಳೆ ಮೇಲೆ ಹಲ್ಲೆ ಮಾಡಿದವನಿಗೆ ಜೋಶಿ ಮಣೆ: ಪ್ರಿಯಾಂಕಾ