ನಿಮಗಿಂತ ಜೆನ್‌ಝೀ ಕೊಡುಗೆ ಹೆಚ್ಚು: ದಾಸ್
ಆದರೆ ಇದಕ್ಕೆ ಜಿರಳೆ ಪಕ್ಷದ ನಾಯಕ ಸೌರವ್ ದಾಸ್ ತಿರುಗೇಟು ನೀಡಿದ್ದು, ‘ನಿಮಗಿಂತ ಜೆನ್‌ಝೀಗಳು ದೇಶಕ್ಕೆ ಹೆಚ್ಚು ಕೊಡುಗೆ ನೀಡಿದ್ದಾರೆ. ನೀವೇನು ಕೊಡುಗೆ ನೀಡಿದ್ದೀರಿ ಎಂಬುದು ನೀವು ಸಂಸದರಾಗಿರುವ ಹಿಮಾಚಲ ಪ್ರದೇಶದ ಜನರಿಗೆ ಗೊತ್ತಿದೆ’ ಎಂದು ಕಂಗನಾರನ್ನು ಒಮ್ಮೆ ಜನ ತರಾಟೆಗೆ ತೆಗೆದುಕೊಂಡ ಪ್ರಸಂಗ ಉಲ್ಲೇಖಿಸ ಚಾಟಿ ಬೀಸಿದ್ದಾರೆ.
ಕಂಗನಾ ಹೇಳಿದ್ದೇನು?:ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆ ವಿಡಿಯೋಗಳು ಜಾಲತಾಣದಲ್ಲಿ ವೈರಲ್ ಆಗಿದ್ದವು. ಇದರಲ್ಲಿ ಕೆಲ ವಿಡಿಯೋಗಳಿಗೆ ಆಕ್ಷೇಪಿಸಿರುವ ಕಂಗನಾ ಜಾಲತಾಣದಲ್ಲಿ ಈ ಕುರಿತು ಬರೆದುಕೊಂಡಿದ್ದಾರೆ. ‘ಒಂದೇ ಸ್ಥಳದಲ್ಲಿ ಇಷ್ಟೊಂದು ಮಟ್ಟಿಗಿನ ಕೊಳಕನ್ನು ನನ್ನ ಜೀವನದಲ್ಲಿ ಇದುವರೆಗೆ ನೋಡಿಲ್ಲ. ಅವರು ಮಾತಾಡುವ ರೀತಿ, ಅವರು ಬಳಸುತ್ತಿರುವ ಭಾಷೆ ಎಲ್ಲವೂ ಪ್ರತಿಯೊಂದು ಫ್ರೇಮ್‌ನಲ್ಲಿಯೂ ಅಸಹ್ಯಕರವಾಗಿದೆ. ಛೇ ಯಾರು ಇವರಿಗೆ ಜನ್ಮ ನೀಡಿ ಬೆಳೆಸುತ್ತಿದ್ದಾರೆ?’ ಎಂದು ಪಶ್ನಿಸಿದ್ದಾರೆ.