ನಾವಿಕರ ಸುರಕ್ಷತೆ ಬಗ್ಗೆ ಟ್ರಂಪ್‌ ಬಳಿ ಮೋದಿ ಕಳವಳ

Published : Jun 18, 2026, 11:24 AM IST
 pm modi paris visit g7 summit trump india support hormuz crisis vivatech 2026

ಸಾರಾಂಶ

ಜಿ7 ಶೃಂಗಸಭೆಯಲ್ಲಿ ಭಾಗಿಯಾಗಲೆಂದು ಫ್ರಾನ್ಸ್‌ಗೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನು ಪ್ರತ್ಯೇಕವಾಗಿ ಭೇಟಿಯಾಗಿ ನಡೆಸಿದ ಮಾತುಕತೆ ವೇಳೆ ನಾವಿಕರ ಸುರಕ್ಷತೆಯ ಬಗ್ಗೆ ಪ್ರಸ್ತಾಪಿಸಿದ್ದಾರೆ.

ಎವಿಯನ್-ಲೆಸ್-ಬೈನ್ಸ್ (ಫ್ರಾನ್ಸ್): ಜಿ7 ಶೃಂಗಸಭೆಯಲ್ಲಿ ಭಾಗಿಯಾಗಲೆಂದು ಫ್ರಾನ್ಸ್‌ಗೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನು ಪ್ರತ್ಯೇಕವಾಗಿ ಭೇಟಿಯಾಗಿ ನಡೆಸಿದ ಮಾತುಕತೆ ವೇಳೆ ನಾವಿಕರ ಸುರಕ್ಷತೆಯ ಬಗ್ಗೆ ಪ್ರಸ್ತಾಪಿಸಿದ್ದಾರೆ.

ಇತ್ತೀಚೆಗೆ ಒಮಾನ್‌ ಸಮುದ್ರದಲ್ಲಿದ್ದ ನೌಕೆಗಳ ಮೇಲೆ ಅಮೆರಿಕ ಸೇನೆ ಮಾಡಿದ್ದ ದಾಳಿ

ಇತ್ತೀಚೆಗೆ ಒಮಾನ್‌ ಸಮುದ್ರದಲ್ಲಿದ್ದ ನೌಕೆಗಳ ಮೇಲೆ ಅಮೆರಿಕ ಸೇನೆ ಮಾಡಿದ್ದ ದಾಳಿಯಿಂದಾಗಿ 3 ಭಾರತೀಯ ನಾವಿಕರು ಪ್ರಾಣ ಕಳೆದುಕೊಂಡಿದ್ದರು. ಅದಾದ ಕೆಲ ದಿನಗಳ ಬಳಿಕ ಒದಗಿಬಂದಿರುವ ಈ ಸಂದರ್ಭದಲ್ಲಿ ಮೋದಿ, ‘ಸಮುದ್ರಮಾರ್ಗದಲ್ಲಿ ಸಂಚರಿಸುವ ಸ್ವಾತಂತ್ರ್ಯ ಇರಬೇಕು ಎಂದು ನಾವು ಪ್ರತಿಪಾದಿಸಿಕೊಂಡೇ ಬಂದಿದ್ದೇವೆ. ಲಕ್ಷಾಂತರ ಭಾರತೀಯರ ನಾವಿಕರು ಕಡಲ ವ್ಯಾಪಾರದಲ್ಲಿ ತೊಡಗಿದ್ದಾರೆ. ಅವರ ಸುರಕ್ಷತೆಯೂ ಮುಖ್ಯ ಎಂದು ನಾವು ನಂಬಿದ್ದೇವೆ’ ಎಂದು ಟ್ರಂಪ್‌ ಅವರೆದುರು ಹೇಳಿದ್ದಾರೆ. ಜತೆಗೆ, ಇರಾನ್‌ ಜತೆ ಅಮೆರಿಕ ಮಾಡಿಕೊಂಡಿರುವ ಒಪ್ಪಂದವು ನಾವಿಕರ ಭದ್ರತೆಯನ್ನೂ ಖಚಿತಪಡಿಸುತ್ತದೆ ಎಂದು ನಂಬಿರುವುದಾಗಿ ತಿಳಿಸಿದ್ದಾರೆ.

ಸ್ಪಂದನೆ:  

ಮೋದಿ ಕಳವಳದ ಬಗ್ಗೆ ಪ್ರತಿಕ್ರಿಯೆ ನೀಡಿದ ಟ್ರಂಪ್‌, ‘ಕಡಲ ವ್ಯಾಪಾರದಲ್ಲಿ ತೊಡಗಿರುವ ಎಲ್ಲರನ್ನು ನಾನು ಪ್ರೀತಿಸುತ್ತೇನೆ. ಭಾರತೀಯ ನಾವಿಕರ ಬಗ್ಗೆಯೂ ನಾನು ಕೇಳ್ಪಟ್ಟೆ. ಅವರದ್ದು ತುಂಬಾ ಕಷ್ಟದ ಕೆಲಸ. ಅವರ ಮೇಲಾಗುತ್ತಿರುವ ದಾಳಿಗೆ ಸಂಬಂಧಿಸಿದಂತೆ ನಾವು(ಭಾರತದ ಜತೆ) ಒಟ್ಟಿಗೆ ಕೆಲಸ ಮಾಡುತ್ತೇವೆ’ ಎಂದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಅಡ್ಡ ಮತ ಭೀತಿ: ಜೆಡಿಎಸ್‌ ಶಾಸಕರು ರೆಸಾರ್ಟ್‌ಗೆ
22ರವರೆಗೆ ದೇಶದಲ್ಲಿ ‘ಟೆಲಿಗ್ರಾಂ’ಗೆ ನಿರ್ಬಂಧ