ಮೋದಿಯ ಅತಿ ಆತ್ಮವಿಶ್ವಾಸ, ದೇಶಕ್ಕೆ ಒಳ್ಳೆಯದಲ್ಲ: ಖರ್ಗೆ

KannadaprabhaNewsNetwork |  
Published : Apr 17, 2024, 01:21 AM IST
ಮಲ್ಲಿಕಾರ್ಜುನ ಖರ್ಗೆ | Kannada Prabha

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಮುಂದಿನ ಐದು ವರ್ಷಗಳ ಅವಧಿಗೆ ಮಾಡಬೇಕು ಎಂದಿರುವ ಕಾರ್ಯ ಯೋಜನೆಗಳ ಪಟ್ಟಿ ಸಿದ್ಧ ಪಡಿಸಿಕೊಂಡು, ಈ ಬಗ್ಗೆ ಕಾರ್ಯದರ್ಶಿಗಳಿಗೆ ಕೂಡ ವಿವರಣೆ ನೀಡುತ್ತಿದ್ದಾರೆ.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಮುಂದಿನ ಐದು ವರ್ಷಗಳ ಅವಧಿಗೆ ಮಾಡಬೇಕು ಎಂದಿರುವ ಕಾರ್ಯ ಯೋಜನೆಗಳ ಪಟ್ಟಿ ಸಿದ್ಧ ಪಡಿಸಿಕೊಂಡು, ಈ ಬಗ್ಗೆ ಕಾರ್ಯದರ್ಶಿಗಳಿಗೆ ಕೂಡ ವಿವರಣೆ ನೀಡುತ್ತಿದ್ದಾರೆ. ಈ ರೀತಿಯ ಅತಿಯಾದ ಆತ್ಮ ವಿಶ್ವಾಸ ಮತ್ತು ದುರಂಹಕಾರ ದೇಶಕ್ಕೆ ಮತ್ತು ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪಿಟಿಐ ಸಂದರ್ಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.ಇದೇ ಸಂದರ್ಭದಲ್ಲಿ ಈ ಸಲದ ಲೋಕಸಭಾ ಚುನಾವಣೆಯಲ್ಲಿ ನಾವು 400 ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ ಎನ್ನುವ ಮೋದಿ ಮಾತಿಗೆ ಖರ್ಗೆ ವ್ಯಂಗ್ಯವಾಡಿದ್ದು, ‘ ಅದೃಷ್ಟವಶಾತ್ ಅಬ್ ಕೀ ಬಾರ್ 600 ಪಾರ್ ’ ಎಂದು ಹೇಳಿಲ್ಲ. ಅಹಂಕಾರದ ಪ್ರಚಾರ , ಪ್ರತಿಪಕ್ಷಗಳನ್ನು ದುರ್ಬಲಗೊಳಿಸುವುದು , ಎಲ್ಲವೂ ನಾನೇ ಎನ್ನುವ ಮೋದಿ ನಡೆ ದುರದೃಷ್ಟಕರ ’ ಎಂದಿದ್ದಾರೆ.

ಇದೇ ಸಂದರ್ಭದಲ್ಲಿ ಮಹಾಮೈತ್ರಿ ಕೂಟದ ಪ್ರಧಾನಿ ಅಭ್ಯರ್ಥಿ ಯಾರು ಎನ್ನುವ ಪ್ರಶ್ನೆಗೂ ಉತ್ತರ ನೀಡಿರುವ ಖರ್ಗೆ ‘ ಇಂಡಿಯಾ ಮೈತ್ರಿ ಕೂಟದ ಪ್ರಧಾನಿ ಅಭ್ಯರ್ಥಿ ಯಾರು ಎನ್ನುವುದು ಫಲಿತಾಂಶದ ಬಳಿಕವೇ ನಿರ್ಧಾರವಾಗುತ್ತದೆ. ಎಲ್ಲದಕ್ಕೂ ಮೊದಲು ನಾವು ಚುನಾವಣೆಯನ್ನು ಗೆಲ್ಲಬೇಕು’ ಎಂದಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಸ್ವಾತಂತ್ರ್ಯ ಬಳಿಕ ಮೊದಲ ಬಾರಿಪಾಕ್‌ ವಿವಿಯಲ್ಲಿ ಸಂಸ್ಕೃತ ಕಲಿಕೆ!
ಅಂಡಮಾನ್‌ ದ್ವೀಪದಲ್ಲಿ ಸಾವರ್ಕರ್ ಪ್ರತಿಮೆ ಅನಾವರಣ