2 ಕೋಟಿ ಹಿಂಬಾಲಕರನ್ನು ಹೊಂದಿರುವ ಮೊದಲ ಜಾಗತಿಕ ನಾಯಕ ಎಂಬ ಹಿರಿಮೆಗೆ ಭಾರತದ ಪ್ರಧಾನಿ ಮೋದಿ ಪಾತ್ರರಾಗಿದ್ದಾರೆ.
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕೃತ ಯೂಟ್ಯೂಬ್ ವಾಹಿನಿ ಹಿಂಬಾಲಕರ ಸಂಖ್ಯೆ ಸೋಮವಾರ 2 ಕೋಟಿ ದಾಟಿದೆ. ಜಾಗತಿಕ ನಾಯಕನೊಬ್ಬ 2 ಕೋಟಿ ಹಿಂಬಾಲಕರ ಗಡಿ ದಾಟಿದ್ದು ಇದೇ ಮೊದಲು. ಈ ಮೂಲಕ ಅಧಿಕ ಯೂಟ್ಯೂಬ್ ಹಿಂಬಾಲಕರುಳ್ಳ ಜಾಗತಿಕ ರಾಜಕೀಯ ನಾಯಕರ ಪಟ್ಟಿಯಲ್ಲಿ ಮೋದಿ ಅವರ ಸ್ಥಾನ ಅಬಾಧಿತವಾಗಿ ನಂ.1 ಸ್ಥಾನದಲ್ಲೇ ಮುಂದುವರಿದಿದೆ.ಇದರ ಜೊತೆಗೆ ಮೋದಿಯವರ ಯೂಟ್ಯೂಬ್ ಚಾನಲ್‌ನಲ್ಲಿ ಹಾಕಲಾಗುವ ದೃಶ್ಯಾವಳಿಗಳೂ ಮೋದಿ 450 ಕೋಟಿ ವೀಕ್ಷಣೆ ಪಡೆದು, ಇದರಲ್ಲೂ ಅಗ್ರಸ್ಥಾನಿಯಾಗಿ ಹೊರಹೊಮ್ಮಿದ್ದಾರೆ.
‘ಈ ಮೂಲಕ, ನರೇಂದ್ರ ಮೋದಿಯವರ ಪ್ರಸಿದ್ಧಿ ಹೆಚ್ಚಿರುವುದಷ್ಟೇ ಅಲ್ಲದೆ ಆಧುನಿಕ ಜಗತ್ತಿನಲ್ಲಿ ನಾಯಕರು ಮತ್ತು ಸಾರ್ವಜನಿಕರ ನಡುವೆ ಕಂದಕವನ್ನೂ ಕಡಿಮೆ ಮಾಡುವಲ್ಲಿ ಸಾಮಾಜಿಕ ಮಾಧ್ಯಮಗಳು ಯಶಸ್ವಿಯಾಗಿವೆ ಎಂಬುದನ್ನು ಇದು ಸೂಚಿಸುತ್ತದೆ’ ಎಂಬುದಾಗಿ ಯೂಟ್ಯೂಬ್ ಸಂಸ್ಥೆ ತಿಳಿಸಿದೆ.ಅಧಿಕ ಹಿಂಬಾಲಕರ ಪಟ್ಟಿಯಲ್ಲಿರುವ ಜಾಗತಿಕ ನಾಯಕರಲ್ಲಿ ನರೇಂದ್ರ ಮೋದಿ ನಂತರ ಕ್ರಮವಾಗಿ ಬ್ರೆಜಿ಼ಲ್ ಪ್ರಧಾನಿ ಜೈರ್ ಬೊಲ್ಸೊನಾರೋ (64 ಲಕ್ಷ) ಮತ್ತು ಉಕ್ರೇನ್ ಅಧ್ಯಕ್ಷ ವ್ಲಾಡಿಮಿರ್ ಝೆಲೆನ್ಸ್ಕಿ(11 ಲಕ್ಷ) ಎರಡು ಮತ್ತು ಮೂರನೇ ಸ್ಥಾನ ಗಳಿಸಿದ್ದಾರೆ. ಇನ್ನು ಅಧಿಕ ದೃಶ್ಯಾವಳಿ ವೀಕ್ಷಣೆ ಪಡೆದವರ ಪಟ್ಟಿಯಲಲ್ಲಿ ಝೆಲೆನ್ಸ್ಕಿ(22.4 ಕೋಟಿ ವೀಕ್ಷಣೆ) ಎರಡನೇ ಸ್ಥಾನ ಗಳಿಸಿದ್ದಾರೆ.ಕಾಂಗ್ರೆಸ್, ಆಪ್, ರಾಹುಲ್ ಮೀರಿಸಿದ ಮೋದಿ:ಈ ನಡುವೆ ವೀಕ್ಷಣೆಗಳ ಸಂಖ್ಯೆಯಲ್ಲಿ ನರೇಂದ್ರ ಮೋದಿಯವರ ಯೂಟ್ಯೂಬ್ ಚಾನಲ್, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (35 ಲಕ್ಷ ಹಿಂಬಾಲಕರು), ಕಾಂಗ್ರೆಸ್ ಮತ್ತು ಆಪ್ ಪಕ್ಷಗಳ ಯೂಟ್ಯೂಬ್ ಚಾನಲ್‌ಗಳ ವೈಯಕ್ತಿಕ ವೀಕ್ಷಣೆಗಳಿಗಿಂತ 4 ಪಟ್ಟು ಹೆಚ್ಚು ವೀಕ್ಷಣೆ ಗಳಿಸಿದೆ.
ಮೋದಿ ಅವರ ‘ಯೋಗ ವಿಥ್ ಮೋದಿ’ ಅವರ ಯೂಟ್ಯೂಬ್ ಚಾನೆಲ್‌ಗೂ 73 ಸಾವಿರ ಹಿಂಬಾಲಕರಿದ್ದಾರೆ.
ಹೀಗಾಗಿ ನರೇಂದ್ರ ಮೋದಿ ಯೂಟ್ಯೂಬ್ ವೀಕ್ಷಣೆ ಮತ್ತು ಹಿಂಬಾಲಕರ ಪಟ್ಟಿಯಲ್ಲಿ ತಮ್ಮ ಸಹವರ್ತಿಗಳಿಗಿಂತ ಭಾರಿ ಮುಂದಿದ್ದಾರೆ ಎಂದು ವಿಶ್ಲೇಷಕರು ಹೇಳಿದ್ದಾರೆ.ಯೂಟ್ಯೂಬ್ ಟಾಪ್-5 ಜಾಗತಿಕ ನಾಯಕರು
1.ನರೇಂದ್ರ ಮೋದಿ, ಭಾರತದ ಪ್ರಧಾನಿ-2 ಕೋಟಿ2. ಜೈರ್ ಬೊಲ್ಸೊನಾರೋ, ಬ್ರೆಜಿ಼ಲ್ ಪ್ರಧಾನಿ- 64 ಲಕ್ಷ3. ವ್ಲಾಡಿಮಿರ್ ಝೆಲೆನ್ಸ್ಕಿ, ಉಕ್ರೇನ್ ಅಧ್ಯಕ್ಷ- 11 ಲಕ್ಷ
4. ಜೋ ಬೈಡೆನ್, ಅಮೆರಿಕ ಅಧ್ಯಕ್ಷ- 7.89 ಲಕ್ಷ5. ಎರ್ಡೋಗನ್,ಟರ್ಕಿ ಅಧ್ಯಕ್ಷ- 3.16 ಲಕ್ಷ