;Resize=(412,232))
ನವದೆಹಲಿ : ಹಿಂಗಾರು ಅವಧಿಯ ಸೂರ್ಯಕಾಂತಿ, ಕಡಲೆ, ಬಾರ್ಲಿ, ಚನ್ನಂಗಿ ಬೇಳೆ (ಮಸೂರ್ ದಾಲ್), ಸಾಸಿವೆ ಮತ್ತು ಗೋದಿ ಬೆಳೆಯ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸಿ ಕೇಂದ್ರ ಸಚಿವ ಸಂಪುಟ ಸಭೆ ಬುಧವಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.
ಬಾರ್ಲಿ ಮೇಲಿನ ಕನಿಷ್ಠ ಬೆಂಬಲ ಬೆಲೆಯನ್ನು ಕ್ವಿಂಟಲ್‌ಗೆ 136 ರು.ನಷ್ಟು ಹೆಚ್ಚಿಸಿದ್ದು, ಇದರಿಂದ ಬಾರ್ಲಿ ಕನಿಷ್ಠ ಬೆಂಬಲ ಬೆಲೆ 2,286 ರು.ಗೆ ತಲುಪಿದಂತಾಗಿದೆ. ಅದೇ ರೀತಿ ಕಡಲೆ ಬೆಂಬಲ ಬೆಲೆಯನ್ನು 83 ರು. (ಕ್ವಿಂಟಲ್ ಕಡಲೆ ಬೆಂಬಲ ಬೆಲೆ ಇನ್ನು 5,958 ರು.ಗೆ ನಿಗದಿ) ಹಾಗೂ ಚನ್ನಂಗಿ ಬೇಳೆ ಮೇಲಿನ ಕನಿಷ್ಠ ಬೆಂಬಲ ಬೆಲೆಯನ್ನು ಕ್ವಿಂಟಲ್‌ಗೆ 390 ರು. (ಕ್ವಿಟಲ್‌ಗೆ ಇನ್ನು 7,390 ರು.) ಹೆಚ್ಚಿಸಿದೆ. ಗೋದಿ ಮೇಲಿನ ಬೆಂಬಲ ಬೆಲೆಯನ್ನು ಕ್ವಿಂಟಲ್‌ಗೆ 25ರು. (ಕ್ವಿಂಟಲ್‌ಗೆ ಇನ್ನು 2,610) ನಷ್ಟು ಹೆಚ್ಚಿಸಲಾಗಿದೆ.
ಎಣ್ಣೆಕಾಳುಗಳಾದ ಸಾಸಿವೆಯ ಬೆಂಬಲ ಬೆಲೆಯನ್ನು ಕ್ವಿಂಟಲ್‌ಗೆ 413 ರು. (ಕ್ವಿಂಟಲ್‌ಗೆ ಇನ್ನು 6,613 ರು.) ಹಾಗೂ ಸೂರ್ಯಕಾಂತಿ ಮೇಲಿನ ಬೆಂಬಲ ಬೆಲೆಯನ್ನು ಕ್ವಿಂಟಲ್‌ಗೆ 675 ರು.ನಷ್ಟು ಏರಿಸಲಾಗಿದೆ. ಇದರಿಂದ ಸೂರ್ಯಕಾಂತಿ ಮೇಲೆ ಕನಿಷ್ಠ ಬೆಂಬಲ ಬೆಲೆ 6,540 ರು.ಗೆ ಹೆಚ್ಚಳವಾದಂತಾಗಿದೆ. ಈ ಮೂಲಕ ಒಟ್ಟಾರೆಯಾಗಿ ಬೆಂಬಲ ಬೆಲೆಗಾಗಿ ಸರ್ಕಾರವು 90,962 ರು.ನಷ್ಟು ಹಣ ವಿನಿಯೋಗಿಸುವ ನಿರೀಕ್ಷೆ ಇಟ್ಟುಕೊಂಡಿದೆ.