₹1 ಕೋಟಿ ಫ್ಲ್ಯಾಟ್‌, ಆಡಿ ಕಾರು ಹೊಂದಿದ್ದ ಕಳ್ಳ ಸೆರೆ!

KannadaprabhaNewsNetwork |  
Published : Jul 07, 2024, 01:21 AM ISTUpdated : Jul 07, 2024, 05:48 AM IST
ಕಳ್ಳ | Kannada Prabha

ಸಾರಾಂಶ

ಗುಜರಾತ್‌ ಪೊಲೀಸರು ಇತ್ತೀಚೆಗೆ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ಪೊಲೀಸರು ಬಂಧಿಸಿರುವ ವ್ಯಕ್ತಿಯ ಹಿನ್ನೆಲೆ ಎಲ್ಲರೂ ಹೌಹಾರುವಂತಿದೆ.  

ಅಹಮದಾಬಾದ್‌: ಗುಜರಾತ್‌ ಪೊಲೀಸರು ಇತ್ತೀಚೆಗೆ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ಪೊಲೀಸರು ಬಂಧಿಸಿರುವ ವ್ಯಕ್ತಿಯ ಹಿನ್ನೆಲೆ ಎಲ್ಲರೂ ಹೌಹಾರುವಂತಿದೆ. ಏಕೆಂದರೆ, ಕಳ್ಳತನ ಮಾಡುತ್ತಿದ್ದ ಈತ ವಾಸಕ್ಕೆ 1 ಕೋಟಿ ರು. ಮೌಲ್ಯದ ಮನೆ ಹೊಂದಿದ್ದ. ಓಡಾಡಲು ದುಬಾರಿ ಬೆಲೆಯ ‘ಆಡಿ’ ಕಾರು ಹೊಂದಿ ವಿಲಾಸಿ ಜೀವನ ನಡೆಸುತ್ತಿದ್ದ.

ಗುಜರಾತ್‌ನ ಲ್ಲಿ 1 ಲಕ್ಷ ರು. ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ರೋಹಿತ್ ಕನುಭಾಯ್‌ ಸೋಲಂಕಿ ಎಂಬಾತನನ್ನು ಬಂಧಿಸಿದ್ದರು. ಹೊರ ರಾಜ್ಯಗಳಲ್ಲಿಯೂ ಹಲವು ವರ್ಷಗಳಿಂದ ಕಳ್ಳತನದಲ್ಲಿ ತೊಡಗಿಕೊಂಡಿದ್ದ ಈತ 19 ಕಳವು ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ಒಪ್ಪಿಕೊಂಡಿದ್ದ. ಈ ಮಧ್ಯೆ ಪೊಲೀಸರ ವಿಚಾರಣೆ ವೇಳೆ ಆತ ನಡೆಸುತ್ತಿದ್ದ ಐಷಾರಾಮಿ ಜೀವನ ಶೈಲಿ ಬಯಲಾಗಿದೆ.

ಸೋಲಂಕಿ ಮುಂಬೈನ ಮುಂಬ್ರಾ ಪ್ರದೇಶದಲ್ಲಿ 1 ಕೋಟಿ ರು. ಬೆಲೆಬಾಳುವ ಐಷಾರಾಮಿ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದ. ಅಲ್ಲದೇ ಆಡಿ ಕಾರ್‌ನಲ್ಲಿ ಓಡಾಡುತ್ತಿದ್ದ. ಕಳ್ಳತನ ಮಾಡಲು ಐಷಾರಾಮಿ ಹೋಟೆಲ್‌ಗಳಲ್ಲಿ ತಂಗುತ್ತಿದ್ದ. ವಿಮಾನಗಳಲ್ಲಿ ಓಡಾಡುತ್ತಿದ್ದ ಮತ್ತು ಹಗಲಿನಲ್ಲಿ ಕಳ್ಳತನಕ್ಕೆ ಸಂಚು ರೂಪಿಸುವುದಕ್ಕೆ ಹೋಟೆಲ್‌ ಕಾರ್‌ಗಳನ್ನು ಬುಕ್ ಮಾಡಿ ಓಡಾಡುತ್ತಿದ್ದ ಎನ್ನುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.

ಮುಂಬೈನ ಹೈಫೈ ಬಾರ್, ನೈಟ್‌ಕ್ಲಬ್‌ಗಳಲ್ಲಿ ಮಜಾ ಮಾಡುತ್ತಿದ್ದ. ಮಾದಕ ವ್ಯಸನಿಯಾಗಿದ್ದ ಈತ ಅದಕ್ಕಂತಲೇ ತಿಂಗಳಿಗೆ ₹1.50 ಲಕ್ಷ ಹಣವನ್ನು ಖರ್ಚು ಮಾಡುತ್ತಿದ್ದ ಎನ್ನುವ ವಿಚಾರವೂ ಬೆಳಕಿಗೆ ಬಂದಿದೆ. ಈತ ಆಂಧ್ರ ಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಮತ್ತು ಗುಜರಾತ್‌ನ ಹಲವು ಕಡೆಗಳಲ್ಲಿ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ. ಅಲ್ಲದೇ ಮುಸ್ಲಿಂ ಮಹಿಳೆಯನ್ನು ವಿವಾಹವಾಗಿದ್ದು, ತನ್ನ ಹೆಸರನ್ನು ಅರ್ಹಾನ್ ಎಂದು ಬದಲಿಸಿಕೊಂಡಿರುವುದು ಕೂಡ ತನಿಖೆ ವೇಳೆ ಬಯಲಾಗಿದೆ.

PREV

Recommended Stories

15 ವರ್ಷ ಬಳಿಕ ಗುಜರಿ ವ್ಯಾಪ್ತಿಗೆಎಲೆಕ್ಟ್ರಿಕ್‌ ವಾಹನಗಳು ಬರಲ್ಲ?
ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ