ಎಸ್ಸಿ-ಎಸ್ಟಿಗೆ ನೆರವಾಗುವ ಪಿಎಂ ಸೂರಜ್‌ ಪೋರ್ಟಲ್‌ ಲೋಕಾರ್ಪಣೆ

KannadaprabhaNewsNetwork |  
Published : Mar 14, 2024, 02:05 AM IST
ಪ್ರಧಾನಿ ಮೋದಿ | Kannada Prabha

ಸಾರಾಂಶ

ಹಿಂದುಳಿದವರಿಗೆ ಆರ್ಥಿಕ ಸಹಾಯ, ಉದ್ಯೋಗಕ್ಕೆ ಉತ್ತೇಜನ ನೀಡುವ ಪ್ರಧಾನಮಂತ್ರಿ ಸಾಮಾಜಿಕ ಉನ್ನತಿ ಮತ್ತು ಉದ್ಯೋಗ ಆಧಾರಿತ ಜನಕಲ್ಯಾಣ ಪೋರ್ಟಲ್‌(ಪಿಎಂ ಸೂರಜ್‌)ಗೆ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ

ನವದೆಹಲಿ: ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ಜನಾಂಗ ಮತ್ತು ಸಫಾಯಿ ಕರ್ಮಚಾರಿಗಳಿಗೆ ಆರ್ಥಿಕ ಸಹಾಯ ಮತ್ತು ಉದ್ಯೋಗಕ್ಕೆ ನೆರವಾಗಲು ಸಹಾಯಕವಾಗುವಮತೆ ಪಿಎಂ ಸೂರಜ್‌ ಪೋರ್ಟಲ್‌ನ್ನು ಪ್ರಧಾನಿ ಮೋದಿ ಲೋಕಾರ್ಪಣೆ ಮಾಡಿದರು.ಈ ವೇಳೆ ಮಾತನಾಡಿದ ಅವರು, ‘ಪರಿಶಿಷ್ಟ ಜಾತಿ ಮತ್ತು ಪಂಗಡಗಳೇ ಸರ್ಕಾರದ ಅತಿದೊಡ್ಡ ಫಲಾನುಭವಿಗಳಾಗಿದ್ದು, ಅವರಿಗೆ ಸೌಲಭ್ಯ ಕಲ್ಪಿಸುವ ಸಲುವಾಗಿ ಕೇಂದ್ರ ಸರ್ಕಾರ ಪಿಎಂ ಸೂರಜ್‌ ಪೋರ್ಟಲ್‌ ಲೋಕಾರ್ಪಣೆ ಮಾಡಿದೆ. ಇದರ ಮೂಲಕ ಸಫಾಯಿ ಕರ್ಮಚಾರಿಗಳೂ ಸೇರಿದಂತೆ ಶೋಷಿತ ಸಮುದಾಯಗಳಿಗೆ ಸರ್ಕಾರದ ಆರ್ಥಿಕ ಸಹಾಯಗಳು ಮತ್ತು ಉದ್ಯೋಗಾವಕಾಶಗಳ ಕುರಿತು ಮಾಹಿತಿ ನೀಡಲಾಗುತ್ತದೆ’ ಎಂದು ತಿಳಿಸಿದರು.

ಅಲ್ಲದೆ ಇಲ್ಲಿಯವರೆಗೂ ಶೋಷಿತ ಸಮುದಾಯದ 1 ಲಕ್ಷ ಮಂದಿ ಸರ್ಕಾರದಿಂದ 720 ಕೋಟಿ ರು. ಸಹಾಯಧನ ಪಡೆದುಕೊಂಡಿದ್ದಾರೆ ಎಂದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ನುಡಿದಂತೆ ನಡೆದಿದ್ದಕ್ಕೆಭಾರತಕ್ಕೆ ತೈಲ ಖರೀದಿಅನುಮತಿ: ಅಮೆರಿಕ
ಕೇರಳದಲ್ಲೂ ಕಾಂಗ್ರೆಸ್‌ನಿಂದಪಂಚಗ್ಯಾರಂಟಿ ಸ್ಕೀಂ ಭರವಸೆ