ಜೈಪುರ: ನೀಟ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ 18 ವರ್ಷದ ಯುವಕನೊಬ್ಬ ರಾಜಸ್ಥಾನದ ಸಿಕಾರ್ ಜಿಲ್ಲೆಯ ಖಾಸಗಿ ಹಾಸ್ಟಲ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶನಿವಾರ ನಡೆದಿದೆ. ಮೂರು ದಿನಗಳ ಅಂತರದಲ್ಲಿ ಸಿಕಾರ್‌ನಲ್ಲಿ ನಡೆದ ಎರಡನೇ ನೀಟ್ ಆಕಾಂಕ್ಷಿಯ ಆತ್ಮಹತ್ಯೆ ಪ್ರಕರಣ ಇದಾಗಿದೆ. ಕಳೆದ ಜೂನ್‌ನಲ್ಲಿ ಸಿಕಾರ್‌ಗೆ ಬಂದು ಕೋಚಿಂಗ್ ಸೆಂಟರ್‌ನಲ್ಲಿ ಅಧ್ಯಯನ ನಡೆಸುತ್ತಿದ್ದ ಭರತ್‌ಪುರ ಜಿಲ್ಲೆ ಮೂಲದ ನಿತಿನ್ ಫೌಜ್ದಾರ್ ಎಂಬ ಯುವಕ ಹಾಸ್ಟಲ್‌ನಲ್ಲಿರುವ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಇದಕ್ಕೂ ಮುನ್ನ ಓದಿನ ಒತ್ತಡದಿಂದ ರಾಜಸ್ಥಾನದ ಕೋಟಾದಲ್ಲಿ ಒಂದೇ ವರ್ಷದಲ್ಲಿ 23 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರು.