ಭಾರತ ಚುನಾವಣೆಯಲ್ಲಿ ಇಸ್ರೇಲಿ ಸಂಸ್ಥೆ ಹಸ್ತಕ್ಷೇಪ

KannadaprabhaNewsNetwork |  
Published : Jun 01, 2024, 01:45 AM ISTUpdated : Jun 01, 2024, 05:08 AM IST
lok-sabha-election-2024-madhya-pradesh-4th-phase-voting-updates

ಸಾರಾಂಶ

ಇಸ್ರೇಲಿ ಸಂಸ್ಥೆ ಸ್ಟಾಯ್ಕ್‌ ಭಾರತೀಯ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡಿರುವ ಆರೋಪ ಕೇಳಿಬಂದಿದ್ದು, ವಿವಿಧ ಸಾಮಾಜಿಕ ಜಾಲತಾಣ ವೇದಿಕೆಗಳಲ್ಲಿ ಬಿಜೆಪಿ ವಿರೋಧಿ ಬರಹಗಳನ್ನು ಪ್ರಕಟ ಮಾಡಿದ್ದನ್ನು ತೆಗೆದು ಹಾಕಿರುವುದಾಗಿ ಕೃತಕ ಬುದ್ಧಿಮತ್ತೆ ಸಂಸ್ಥೆ ಓಪನ್‌ ಎಐ ತಿಳಿಸಿದೆ.

ನವದೆಹಲಿ: ಇಸ್ರೇಲಿ ಸಂಸ್ಥೆ ಸ್ಟಾಯ್ಕ್‌ ಭಾರತೀಯ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡಿರುವ ಆರೋಪ ಕೇಳಿಬಂದಿದ್ದು, ವಿವಿಧ ಸಾಮಾಜಿಕ ಜಾಲತಾಣ ವೇದಿಕೆಗಳಲ್ಲಿ ಬಿಜೆಪಿ ವಿರೋಧಿ ಬರಹಗಳನ್ನು ಪ್ರಕಟ ಮಾಡಿದ್ದನ್ನು ತೆಗೆದು ಹಾಕಿರುವುದಾಗಿ ಕೃತಕ ಬುದ್ಧಿಮತ್ತೆ ಸಂಸ್ಥೆ ಓಪನ್‌ ಎಐ ತಿಳಿಸಿದೆ.

ಸ್ಟಾಯ್ಕ್‌ ಕಂಪನಿಯು ಪ್ರಪಂಚದಲ್ಲಿ ನಡೆಯುತ್ತಿರುವ ಪ್ರಚಲಿತ ವಿದ್ಯಮಾನಗಳ ಕುರಿತು ಮಾಹಿತಿ ರಚಿಸಿಕೊಡುವ ಕೆಲಸ ಮಾಡುತ್ತಿದ್ದು, ಬಿಜೆಪಿ ವಿರೋಧಿ ಹಾಗೂ ಕಾಂಗ್ರೆಸ್‌ ಪರ ಕೆಲವು ಆಕ್ಷೇಪಾರ್ಹ ಬರಹಗಳನ್ನು ಬರೆದು ತನ್ನ ಟೆಲಿಗ್ರಾಂ, ಎಕ್ಸ್‌, ಇನ್ಸ್‌ಟಾಗ್ರಾಂ ಹಾಗೂ ಇತರ ಸಾಮಾಜಿಕ ಜಾಲತಾಣಗಳ ವೇದಿಕೆಯಲ್ಲಿ ಪ್ರಕಟಿಸಿತ್ತು. ಅದರಲ್ಲಿ ಕೃತಕ ಬುದ್ಧಿಮತ್ತೆ ಬಳಸಿ ತನ್ನ ಸ್ವಂತ ಅಭಿಪ್ರಾಯಗಳನ್ನು ರಚಿಸಿರುವಂತೆ ತೋರಿಸಲಾಗಿತ್ತು. ಅಲ್ಲದೆ ತನ್ನದೇ ಕೆಲವು ನಕಲಿ ಅಕೌಂಟ್‌ಗಳನ್ನು ಸೃಷ್ಟಿಸಿ ಬಿಜೆಪಿ ವಿರೋಧಿ ಅಭಿಪ್ರಾಯ ಬರೆದು ಅದನ್ನು ಪ್ರಕಟಿಸಿತ್ತು. ಈ ಹಿನ್ನೆಲೆಯಲ್ಲಿ ಅವುಗಳನ್ನು ಅಳಿಸಿ ಹಾಕಿರುವುದಾಗಿ ಸಹಯೋಗ ಸಂಸ್ಥೆ ಓಪನ್‌ ಎಐ ತಿಳಿಸಿದೆ.

ಇದಕ್ಕೂ ಮೊದಲು ಹಮಾಸ್‌ ಪರ ಬರಹಗಳನ್ನು ಪ್ರಕಟಿಸಿ ತನ್ನದೇ ದೇಶದಲ್ಲಿ ಸ್ಟಾಯ್ಕ್‌ ಟೀಕೆಗೆ ಗುರಿಯಾಗಿತ್ತು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

₹1.1 ಕೋಟಿ ಇನಾಮು ಇದ್ದ ಟಾಪ್ ನಕ್ಸಲ್‌ ಹತ್ಯೆ
3500 ಕಿ.ಮೀ ಸಾಗಬಲ್ಲ ಕೆ - 4ಬ್ಯಾಲಿಸ್ಟಿಕ್‌ ಕ್ಷಿಪಣಿ ಯಶಸ್ವಿ