ಭಾರತದ ದಾಳಿಗೆ ಬಲಿಯಾದ ಉಗ್ರ ಅಜರ್‌ ಕುಟುಂಬಕ್ಕೆ ಪಾಕ್‌ 14 ಕೋಟಿ ಪರಿಹಾರ

ಭಾರತದ ಆಪರೇಷನ್ ಸಿಂದೂರ ಕಾರ್ಯಾಚರಣೆಯಲ್ಲಿ ಹತರಾದ ಜೈಷ್‌ ಎ ಮೊಹಮ್ಮದ್‌ ಉಗ್ರ ಮಸೂದ್ ಅಜರ್ ಕುಟುಂಬದ 14 ಜನರಿಗೆ ಒಟ್ಟು 14 ಕೋಟಿ ರು. ಪರಿಹಾರ

Follow Us

 ನವದೆಹಲಿ: ಭಾರತದ ಆಪರೇಷನ್ ಸಿಂದೂರ ಕಾರ್ಯಾಚರಣೆಯಲ್ಲಿ ಹತರಾದ ಜೈಷ್‌ ಎ ಮೊಹಮ್ಮದ್‌ ಉಗ್ರ ಮಸೂದ್ ಅಜರ್ ಕುಟುಂಬದ 14 ಜನರಿಗೆ ಒಟ್ಟು 14 ಕೋಟಿ ರು. ಪರಿಹಾರ ನೀಡಲು ಪಾಕಿಸ್ತಾನ ಸರ್ಕಾರ ನಿರ್ಧರಿಸಿದೆ. ಈ ಮೂಲಕ ತಾನು ಉಗ್ರಪೋಷಿತ ರಾಷ್ಟ್ರ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಪಡಿಸಿದೆ.

ಭಾರತದ ದಾಳಿಗೆ ಬಲಿಯಾದವರ ಕುಟುಂಬಕ್ಕೆ ಪಾಕಿಸ್ತಾನದ ಪ್ರಧಾನಿ ಶೆಹಬಾಜ್‌ ಷರೀಫ್‌ ತಲಾ 1 ಕೋಟಿ ರು, ಪರಿಹಾರ ಘೋಷಿಸಿದ್ದಾರೆ. ಅಜರ್ ಕುಟುಂಬದ 14 ಮಂದಿ ಸತ್ತಿದ್ದು, ಆತನೇ 14 ಕೋಟಿ ರು, ಪರಿಹಾರ ಪಡೆಯುವ ಸಾಧ್ಯತೆಯಿದೆ ಎಂದು ವರದಿಗಳು ಹೇಳಿವೆ. ಭಾರತದ ದಾಳಿಯಲ್ಲಿ ಅಜರ್‌ನ ಸಹೋದರಿ, ಭಾವ , ಅಳಿಯ ಮಕ್ಕಳು, ಆಪ್ತರು ಸೇರಿದಂತೆ 14 ಮಂದಿ ಸಾವನ್ನಪ್ಪಿದ್ದರು.