ಪೇಟಿಎಂ ಖರೀದಿಗೆ ಅದಾನಿ ಸಜ್ಜು?

KannadaprabhaNewsNetwork |  
Published : May 30, 2024, 12:58 AM ISTUpdated : May 30, 2024, 05:19 AM IST
ಪೇಟಿಎಂ | Kannada Prabha

ಸಾರಾಂಶ

‘ನಷ್ಟದಲ್ಲಿರುವ ಪೇಟಿಎಂ ಪೇಮೆಂಟ್‌ ಆ್ಯಪ್‌ನ ಮಾತೃಸಂಸ್ಥೆಯಾದ ಒನ್ 97 ಕಮ್ಯುನಿಕೇಷನ್ಸ್‌ನಲ್ಲಿ ಷೇರು ಖರೀದಿಸಲು ಅದಾನಿ ಗ್ರೂಪ್ ಅಧ್ಯಕ್ಷ ಹಾಗೂ ದೇಶದ ನಂ.1 ಶ್ರೀಮಂತ ಉದ್ಯಮಿ ಗೌತಮ್ ಅದಾನಿ ಅವರು ಮುಂದಾಗಿದ್ದಾರೆ.

ಮುಂಬೈ: ‘ನಷ್ಟದಲ್ಲಿರುವ ಪೇಟಿಎಂ ಪೇಮೆಂಟ್‌ ಆ್ಯಪ್‌ನ ಮಾತೃ ಸಂಸ್ಥೆಯಾದ ಒನ್ 97 ಕಮ್ಯುನಿಕೇಷನ್ಸ್‌ನಲ್ಲಿ ಷೇರು ಖರೀದಿಸಲು ಅದಾನಿ ಗ್ರೂಪ್ ಅಧ್ಯಕ್ಷ ಹಾಗೂ ದೇಶದ ನಂ.1 ಶ್ರೀಮಂತ ಉದ್ಯಮಿ ಗೌತಮ್ ಅದಾನಿ ಅವರು ಮುಂದಾಗಿದ್ದಾರೆ. ಈ ಸಂಬಂಧದ ಪೇಟಿಎಂ ಸಂಸ್ಥಾಪಕ ಮತ್ತು ಸಿಇಒ ವಿಜಯ್ ಶೇಖರ್ ಶರ್ಮಾ ಅವರ ಜತೆ ಮಾತುಕತೆ ನಡೆಸಿದ್ದಾರೆ’ ಎಂದು ವರದಿಗಳು ಹೇಳಿವೆ.

ಮಂಗಳವಾರ ಅಹಮದಾಬಾದ್‌ನಲ್ಲಿರುವ ತಮ್ಮ ಕಚೇರಿಯಲ್ಲಿ ಅದಾನಿ ಅವರು ಶರ್ಮಾರನ್ನು ಭೇಟಿ ಮಾಡಿದರು. ಈ ವೇಳೆ ಒಪ್ಪಂದದ ಸ್ವೂಪದ ಬಗ್ಗೆ ಮಾತುಕತೆ ನಡೆಯತು ಎಂದು ಮೂಲಗಳು ಹೇಳಿವೆ.

ಷೇರು ಶೇ.5ರಷ್ಟು ಏರಿಕೆ:

ಈ ವರದಿ ಪ್ರಕಟಗೊಂಡ ಬೆನ್ನಲ್ಲೇ ಬುಧವಾರ ಷೇರುಪೇಟೆಯಲ್ಲಿ ಪೇಟಿಎಂ ಷೇರುಗಳು ಶೇ.5ರಷ್ಟು ಜಿಗಿತ ಕಂಡಿವೆ. ಅದಾನಿಯಂಥ ದೊಡ್ಡ ಉದ್ಯಮಿ ಪೇಟಿಎಂ ಖರೀದಿಗೆ ಯತ್ನ ನಡೆಸಿದ್ದಾರೆ ಎಂಬ ವರದಿಗಳು, ಷೇರುಪೇಟೆಯಲ್ಲಿ ನಷ್ಟದಲ್ಲಿರುವ ಕಂಪನಿಗೆ ಟಾನಿಕ್‌ ನೀಡಿದೆ.

ಅದಾನಿ, ಪೇಟಿಎಂ ನಕಾರ:

ಈ ವರದಿಗಳ ಬೆನ್ನಲ್ಲೇ ಅದಾನಿ ಹಾಗೂ ಪೇಟಿಎಂ ಕಂಪನಿಗಳು ಪ್ರತ್ಯೇಕ ಹೇಳಿಕೆ ನೀಡಿ, ‘ಇವು ಕೇವಲ ಊಹಾಪೋಹದ ವರದಿಗಳು. ಉಭಯ ಕಂಪನಿಗಳ ಮುಖ್ಯಸ್ಥರ ನಡುವೆ ಪಾಲು ಖರೀದಿ ಅಥವಾ ಮಾರಾಟದ ಬಗ್ಗೆ ಯಾವುದೇ ಮಾತುಕತೆ ನಡದಿಲ್ಲ’ ಎಂದಿವೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಏನಾಗಬೇಕೋ ಸೂಕ್ತ ಟೈಮಲ್ಲಿ ಆಗುತ್ತೆ : ಡಿಕೆ ಶಿವಕುಮಾರ್‌
ಬನಿಯನ್‌ ಪ್ರೊಟೆಸ್ಟ್‌ಗೆ ನೇಪಾಳಜೆನ್‌-ಝೀ ಪ್ರೇರಣೆ : ಪೊಲೀಸ್‌!