ಕಳೆದ ವಾರವಷ್ಟೆ ‘ಗುಜರಾತ್ ಮಾದರಿ’ ಎಂದರೆ ಪ್ರಜಾಸತ್ತಾತ್ಮಕ ರೀತಿ ಆಯ್ಕೆ ಆದ ರಾಜ್ಯ ಸರ್ಕಾರಗಳನ್ನು ಅಸ್ಥಿರಗೊಳಿಸುವ ಮಾದರಿ ಎಂದು ಕಿಡಿಕಾರಿದ್ದ ತೆಲಂಗಾಣ ಕಾಂಗ್ರೆಸ್ ಮುಖ್ಯಮಂತ್ರಿ ರೇವಂತ್ ರೆಡ್ಡಿ, ಈಗ ರಾಗ ಬದಲಿಸಿದ್ದಾರೆ.
ಹೈದರಾಬಾದ್: ಕಳೆದ ವಾರವಷ್ಟೆ ‘ಗುಜರಾತ್ ಮಾದರಿ’ ಎಂದರೆ ಪ್ರಜಾಸತ್ತಾತ್ಮಕ ರೀತಿ ಆಯ್ಕೆ ಆದ ರಾಜ್ಯ ಸರ್ಕಾರಗಳನ್ನು ಅಸ್ಥಿರಗೊಳಿಸುವ ಮಾದರಿ ಎಂದು ಕಿಡಿಕಾರಿದ್ದ ತೆಲಂಗಾಣ ಕಾಂಗ್ರೆಸ್ ಮುಖ್ಯಮಂತ್ರಿ ರೇವಂತ್ ರೆಡ್ಡಿ, ಈಗ ರಾಗ ಬದಲಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ಅಣ್ಣ’ ಎಂದು ಹಾಡಿ ಹೊಗಳಿರುವ ಅವರು, ತೆಲಂಗಾಣದ ಅಭಿವೃದ್ಧಿಗೆ ಅವರ ಸಹಕಾರ ಕೋರಿದ್ದಾರೆ.
ಆದಿಲಾಬಾದ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 56 ಸಾವಿರ ಕೋಟಿ ರು.ಗಳ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು. ಈ ವೇಳೆ ಮೋದಿ ಸಮ್ಮುಖ ಮಾತನಾಡಿದ ರೇವಂತ್, ‘ಮೋದಿ ನನ್ನ ಹಿರಿಯಣ್ಣ ಇದ್ದಂತೆ.
ಅವರ ಸಹಾಯವಿದ್ದರೆ ಮಾತ್ರ ಮುಖ್ಯಮಂತ್ರಿಗಳು ತಮ್ಮ ರಾಜ್ಯವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಬಹುದು’ ಎಂದರು.‘ನಾವು 5 ಲಕ್ಷ ಕೋಟಿ ರು. ಆರ್ಥಿಕತೆ ಸ್ಥಾಪಿಸುವ ಗುರಿಯಲ್ಲಿ ಭಾಗೀದಾರರಾಗಲಿದ್ದೇವೆ.
ಗುಜರಾತ್ ಮಾದರಿಯಲ್ಲೇ ತೆಲಂಗಾಣ ಕೂಡ ಅಭಿವೃದ್ಧಿ ಹೊಂದಲು ಬಯಸುತ್ತದೆ’ ಎಂದರು. ಈ ನಡುವೆ, ಮೋದಿ ಜತೆ ರೇವಂತ್ ವೇದಿಕೆಯಲ್ಲೇ ಆತ್ಮೀಯವಾಗಿ ಮಾತನಾಡಿ ಸನ್ಮಾನಿಸಿದರು.
ಈ ಹಿಂದೆ ಬಿಆರ್‌ಎಸ್ ನಾಯಕ ಕೆ.ಚಂದ್ರಶೇಖರರಾವ್ ತೆಲಂಗಾಣ ಮುಖ್ಯಮಂತ್ರಿ ಆಗಿದ್ದಾಗ ಮೋದಿ ಜತೆ ಸಂಬಂಧ ಕೆಡಿಸಿಕೊಂಡಿದ್ದರು. ಮೋದಿ ತೆಲಂಗಾಣಕ್ಕೆ ಯಾವುದೇ ಸಭೆಗೆ ಬಂದರೂ ಕೆಸಿಆರ್ ಹೋಗುತ್ತಿರಲಿಲ್ಲ.