ಏರ್‌ ಇಂಡಿಯಾ ಅಪಘಾತಕ್ಕೆ ಪೈಲಟ್‌ ಹೊಣೆಯಲ್ಲ: ಸುಪ್ರೀಂ

KannadaprabhaNewsNetwork |  
Published : Nov 08, 2025, 01:45 AM IST
Air India

ಸಾರಾಂಶ

ಜೂನ್‌ನಲ್ಲಿ ಅಹಮದಾಬಾದ್‌ನಲ್ಲಿ ಸಂಭವಿಸಿದ ಏರ್‌ ಇಂಡಿಯಾ ವಿಮಾನ ದುರಂತಕ್ಕೆ ಪೈಲಟ್‌ಗಳು ಕಾರಣರಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಜೊತೆಗೆ ಪೈಲಟ್‌ ಸುಮಿತ್‌ ಸಬರ್ವಾಲ್‌ ಅವರ ತಂದೆ 91 ವರ್ಷದ ಪುಷ್ಕರಾಜ್‌ ಅವರಿಗೆ, ದೂಷಣೆಯ ಭಾರವನ್ನು ನೀವು ಹೊರಬೇಡಿ ಎಂದು ಸಾಂತ್ವನ ಹೇಳಿದೆ.

  ನವದೆಹಲಿ :  ಜೂನ್‌ನಲ್ಲಿ ಅಹಮದಾಬಾದ್‌ನಲ್ಲಿ ಸಂಭವಿಸಿದ ಏರ್‌ ಇಂಡಿಯಾ ವಿಮಾನ ದುರಂತಕ್ಕೆ ಪೈಲಟ್‌ಗಳು ಕಾರಣರಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಜೊತೆಗೆ ಪೈಲಟ್‌ ಸುಮಿತ್‌ ಸಬರ್ವಾಲ್‌ ಅವರ ತಂದೆ 91 ವರ್ಷದ ಪುಷ್ಕರಾಜ್‌ ಸಭರ್ವಾಲ್‌ ಅವರಿಗೆ, ದೂಷಣೆಯ ಭಾರವನ್ನು ನೀವು ಹೊರಬೇಡಿ ಎಂದು ಸಾಂತ್ವನ ಹೇಳಿದೆ.

ಸಾಂತ್ವನ ಏಕೆ?:

ದುರಂತ ಬಳಿಕ ಪ್ರಾಥಮಿಕ ತನಿಖಾ ವರದಿಯನ್ನು ಆಧರಿಸಿ ಅಮೆರಿಕದ ವಾಲ್‌ ಸ್ಟ್ರೀಟ್‌ ಜರ್ನಲ್‌ ಪತ್ರಿಕೆಯು ಅಪಘಾತಕ್ಕೆ ಪೈಲಟ್‌ ಕಾರಣ ಎಂದು ವರದಿ ಪ್ರಕಟಿಸಿದ್ದನ್ನು ಸುಮೀತ್‌ ಅವರ ತಂದೆ ಸುಪ್ರೀಂ ಗಮನಕ್ಕೆ ತಂದರು.

ಅಮೆರಿಕದ ವರದಿ ಭಾರತದ ವಿರುದ್ಧ ಪೂರ್ವಗ್ರಹಪೀಡಿತ

ಇದಕ್ಕೆ ಪ್ರತಿಕ್ರಿಯಿಸಿದ ದ್ವಿಸದಸ್ಯ ಪೀಠ, ‘ಅಮೆರಿಕದ ವರದಿ ಭಾರತದ ವಿರುದ್ಧ ಪೂರ್ವಗ್ರಹಪೀಡಿತವಾಗಿದೆ. ಎಎಐಬಿ ನಡೆಸಿದ ತನಿಖೆಯಲ್ಲಿ ಪೈಲಟ್‌ ಕಾರಣ ಎಂದು ಎಲ್ಲಿಯೂ ಹೇಳಿಲ್ಲ. ಅಲ್ಲದೇ ಅಲ್ಲಿ ಪೈಲಟ್‌ಗಳ ಸಂಭಾಷಣೆಯನ್ನು ಮಾತ್ರವೇ ತಿಳಿಸಿದೆ. ಅಲ್ಲದೇ ಇದೊಂದು ಅಪಘಾತ. ಇದು ಉದ್ದೇಶಪೂರ್ವಕ ಕೃತ್ಯವಲ್ಲ. ಪೈಲಟ್‌ಗಳು ಕಾರಣರಲ್ಲ, ಇದರ ದೂಷನೆಯನ್ನು ನೀವು ಹೊರಬೇಡಿ’ ಎಂದು ಸಮಾಧಾನ ಮಾಡಿತು. ಜೊತೆಗೆ ಕೇಂದ್ರ ಸರ್ಕಾರ, ಡಿಜಿಸಿಎ ಮತ್ತು ಎಎಐಬಿಗೆ ನೋಟಿಸ್‌ ನೀಡಿತು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಇಸ್ರೋ ಹೊಸ ಮೈಲುಗಲ್ಲು-6100 ಕೆಜಿ ತೂಕದ ಉಪಗ್ರಹ 15 ನಿಮಿಷದಲ್ಲಿ ಕಕ್ಷೆಗೆ
ಶತ್ರು- ಮಿತ್ರರಿಗೆ ಮಹಾ ಸಹೋದರರ ಸವಾಲ್‌!