ನಂಗೂ ಮೋದಿಗೂ ಹೆಂಡತಿ ಸಮಸ್ಯೆ ಇಲ್ಲ : ರಾಗಾ ಚಟಾಕಿ

KannadaprabhaNewsNetwork |  
Published : Apr 18, 2026, 01:45 AM ISTUpdated : Apr 18, 2026, 06:00 AM IST
Rahul Gandhi

ಸಾರಾಂಶ

ಸದನದಲ್ಲಿರುವ ನಾವೆಲ್ಲರೂ ಮಹಿಳೆಯರಿಂದ ಬಹಳಷ್ಟು ಪ್ರಭಾವಿತರಾಗಿದ್ದೇವೆ. ತಾಯಂದಿರು, ಸೋದರಿಯರು, ಪತ್ನಿಯರು, ಎಲ್ಲರಿಂದಲೂ ಬಹಳಷ್ಟು ಕಲಿತಿದ್ದೇವೆ. ಆದರೆ ಪ್ರಧಾನಿ ಮೋದಿ ಮತ್ತು ನನಗೆ ಪತ್ನಿ ಸಮಸ್ಯೆ ಇಲ್ಲ ಎಂದು ವಿಪಕ್ಷ ನಾಯಕ ರಾಹುಲ್‌ ಗಾಂಧಿ ಶುಕ್ರವಾರ ಹಾಸ್ಯ ಚಟಾಕಿ ಹಾರಿಸಿದರು.  

 ನವದೆಹಲಿ :  ಸದನದಲ್ಲಿರುವ ನಾವೆಲ್ಲರೂ ಮಹಿಳೆಯರಿಂದ ಬಹಳಷ್ಟು ಪ್ರಭಾವಿತರಾಗಿದ್ದೇವೆ. ತಾಯಂದಿರು, ಸೋದರಿಯರು, ಪತ್ನಿಯರು, ಎಲ್ಲರಿಂದಲೂ ಬಹಳಷ್ಟು ಕಲಿತಿದ್ದೇವೆ. ಆದರೆ ಪ್ರಧಾನಿ ಮೋದಿ ಮತ್ತು ನನಗೆ ಪತ್ನಿ ಸಮಸ್ಯೆ ಇಲ್ಲ ಎಂದು ವಿಪಕ್ಷ ನಾಯಕ ರಾಹುಲ್‌ ಗಾಂಧಿ ಶುಕ್ರವಾರ ಹಾಸ್ಯ ಚಟಾಕಿ ಹಾರಿಸಿದರು.  

ಮಹಿಳಾ ಮೀಸಲು ಮಸೂದೆ ಮೇಲಿನ ಚರ್ಚೆ

ಇದರಿಂದ ಸದನದಲ್ಲಿ ನಗುವಿನ ಅಲೆ ಎದ್ದಿತು. ಮಹಿಳಾ ಮೀಸಲು ಮಸೂದೆ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ ಅವರು, ‘ಈ ಸದನದಲ್ಲಿರುವ ನಾವೆಲ್ಲರೂ ನಮ್ಮ ಜೀವನದಲ್ಲಿ ಮಹಿಳೆಯರಿಂದ ಬಹಳಷ್ಟು ಪ್ರಭಾವಿತರಾಗಿದ್ದೇವೆ ಮತ್ತು ಕಲಿತಿದ್ದೇವೆ. ನಮ್ಮ ತಾಯಂದಿರು, ಸೋದರಿಯರು, ಪತ್ನಿಯರಿಂದ ಬಹಳಷ್ಟು ತಿಳಿದುಕೊಂಡಿದ್ದೇವೆ. 

ತಾಯಂದಿರು ಮತ್ತು ಸೋದರಿಯರು ಇದ್ದಾರೆ

 ಆದರೆ ಪ್ರಧಾನಿ ಮತ್ತು ನನಗೆ ಪತ್ನಿ ಸಮಸ್ಯೆ ಇಲ್ಲ. ಆದ್ದರಿಂದ ಆ ಇನ್‌ಪುಟ್ (ಅನುಭವ) ನಮಗೆ ಸಿಗುವುದಿಲ್ಲ. ಆದರೆ ನಮಗೆ ತಾಯಂದಿರು ಮತ್ತು ಸೋದರಿಯರು ಇದ್ದಾರೆ’ ಹಾಸ್ಯ ಮಾಡಿದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಮೋದಿ ಸರ್ಕಾರದ ಮೊದಲ ಮಸೂದೆ ಮಹಿಳಾ ಮೀಸಲಿಗೆ ಸೋಲು
ಹೋರ್ಮುಜ್‌ ಸಂಪೂರ್ಣ ಮುಕ್ತ : ಇರಾನ್‌ ಘೋಷಣೆ