ಧೋಲೇರಾ (ಗುಜರಾತ್): ಭಾರತ ಸೆಮಿಕಂಡಕ್ಟರ್ ವಲಯದಲ್ಲಿ ಮಹತ್ವದ ಪಾತ್ರ ವಹಿಸಲಿದ್ದು, ಕೆಲವೇ ದಿನಗಳಲ್ಲಿ ಈ ಕ್ಷೇತ್ರದಲ್ಲಿ ಭಾರತ ಜಾಗತಿಕ ನಾಯಕ ಆಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಗುಜರಾತ್‌ನಲ್ಲಿ 2 ಹಾಗೂ ಅಸ್ಸಾಂನಲ್ಲಿ 1 ಸೆಮಿಕಂಡಕ್ಟರ್ ತಯಾರಿಕಾ ಘಟಕಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ‘ಸೆಮಿಕಂಡಕ್ಟರ್ ಅಗತ್ಯತೆಯನ್ನು ಭಾರತವು 1960ರಲ್ಲೇ ಮನಗಂಡಿತ್ತು. ಆದರೆ ಅಂದಿನ ಸರ್ಕಾರ ಬಡತನವನ್ನು ಮುಂದಿಟ್ಟು ಯೋಜನೆಯನ್ನು ಜಾರಿ ಮಾಡಲೇ ಇಲ್ಲ. ನಾವು ಎರಡು ವರ್ಷಗಳ ಮುಂಚೆ ಸೆಮಿಕಂಡಕ್ಟರ್ ಮಿಷನ್ ಯೋಜನೆ ಸಂಕಲ್ಪಿಸಿದ ಮೇಲೆ ಕೆಲಸಗಳನ್ನು ಆರಂಭಿಸಿ ಇಂದು 1.25 ಲಕ್ಷ ಕೋಟಿ ಮೌಲ್ಯದ ತಯಾರಿಕಾ ಘಟಕಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದೇವೆ. ಈ ಮೂಲಕ ನಮ್ಮ ಸರ್ಕಾರ ಅಭಿವೃದ್ಧಿಯ ಸಂಕಲ್ಪ ತೊಟ್ಟಿದ್ದನ್ನು ಮಾಡಿ ತೋರಿಸಿದೆ. ಇನ್ನು ಮುಂದೆ ಸೆಮಿಕಂಡಕ್ಟರ್ ವಲಯದಲ್ಲಿ ಭಾರತ ಸ್ವಾವಲಂಬನೆಯನ್ನು ಸಾಧಿಸಲಿದ್ದು, ಜಾಗತಿಕವಾಗಿ ಕೆಲವೇ ವರ್ಷಗಳಲ್ಲಿ ಉನ್ನತ ಸ್ಥಾನಕ್ಕೇರಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಯುವಜನತೆಗೆ ಲಾಭ:
ಮೂರು ಕಾರ್ಖಾನೆಗಳು1. ಸೆಮಿಕಂಡಕ್ಟರ್ ಫ್ಯಾಬ್ರಿಕೇಷನ್ ಘಟಕ-ಧೋಲೇರಾ
2. ಔಟ್‌ಸೋರ್ಸ್ಡ್ ಸೆಮಿಕಂಡಕ್ಟರ್ ಅಸೆಂಬ್ಲಿ ಮತ್ತು ಟೆಸ್ಟ್ ಘಟಕ (ಒಎಸ್‌ಎಟಿ)- ಅಸ್ಸಾಂನ ಮೋರಿಗಾಂವ್ ಮತ್ತು ಗುಜರಾತ್‌ನ ಸಾನಂದ್