ಬೇಸಿಗೇಲಿ ಹೆಚ್ಚು ನೀರು ಕುಡೀರಿ : ಭಾರತೀಯರಿಗೆ ಮೋದಿ ಸಲಹೆ

KannadaprabhaNewsNetwork |  
Published : May 28, 2026, 01:45 AM IST
Narendra Modi

ಸಾರಾಂಶ

ದೇಶದಲ್ಲಿ ಬೇಸಿಗೆಯ ಬಿಸಿ ಹೆಚ್ಚಿ 48 ಡಿ.ಸೆ. ವರೆಗೂ ತಲುಪಿರುವ ನಡುವೆ, ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯರಿಗೆ ಸಲಹೆ ನೀಡಿದ್ದಾರೆ. ಈ ಬಗ್ಗೆ ಎಕ್ಸ್‌ನಲ್ಲಿ ಸರಣಿ ಪೋಸ್ಟ್‌ಗಳನ್ನು ಮಾಡಿರುವ ಅವರು, ಯಾವೆಲ್ಲಾ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು ಎಂಬ ಬಗ್ಗೆ ಸೂಚನೆಗಳನ್ನು ನೀಡಿದ್ದಾರೆ.

ನವದೆಹಲಿ: ದೇಶದಲ್ಲಿ ಬೇಸಿಗೆಯ ಬಿಸಿ ಹೆಚ್ಚಿ 48 ಡಿ.ಸೆ. ವರೆಗೂ ತಲುಪಿರುವ ನಡುವೆ, ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯರಿಗೆ ಸಲಹೆ ನೀಡಿದ್ದಾರೆ. ಈ ಬಗ್ಗೆ ಎಕ್ಸ್‌ನಲ್ಲಿ ಸರಣಿ ಪೋಸ್ಟ್‌ಗಳನ್ನು ಮಾಡಿರುವ ಅವರು, ಯಾವೆಲ್ಲಾ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು ಎಂಬ ಬಗ್ಗೆ ಸೂಚನೆಗಳನ್ನು ನೀಡಿದ್ದಾರೆ.

ಮೋದಿ ಹೇಳಿದ್ದೇನು?:

- ಜಾಸ್ತಿ ನೀರು ಕುಡಿಯಿರಿ. ಹೊರಗೆ ಹೋಗುವಾಗ ನೀರನ್ನು ತೆಗೆದುಕೊಂಡು ಹೋಗಿ

-ಅನ್ಯರಿಗೂ ನೀರನ್ನು ನೀಡಿ ದಯೆ ತೋರಿಸಿ

-ತಲೆತಿರುಗುವಿಕೆ, ವಾಕರಿಕೆ, ಆಯಾಸವನ್ನು ನಿರ್ಲಕ್ಷಿಸಬೇಡಿ

-ಯಾರಲ್ಲಾದರೂ ಇಂತಹ ಲಕ್ಷಣ ಕಂಡುಬಂದರೆ ತಕ್ಷಣ ಸಹಾಯ ಮಾಡಿ.

-ಮಕ್ಕಳು, ವೃದ್ಧರು ಮತ್ತು ಬಿಸಿಲಲ್ಲಿ ಕೆಲಸ ಮಾಡುವವರು ಬಿಸಿಲಾಘಾತದಿಂದ ಸುರಕ್ಷಿತವಾಗಿರಿ

-ವೃದ್ಧರ ಆರೋಗ್ಯದ ಬಗ್ಗೆ ಆಗಾಗ ಗಮನಹರಿಸಿ ಪರಿಶೀಲಿಸುತ್ತಿರಿ

-ಮಧ್ಯಾಹ್ನ ಸುಡುಬಿಸಿಲಿರುವಾಗ ಹೊರಬರಬೇಡಿ. ಸಾಧ್ಯವಾದಾಗೆಲ್ಲಾ ವಿಶ್ರಮಿಸಿ

-ಮನೆ, ಅಂಗಡಿ, ಕಚೇರಿಗಳ ಹೊರಗೆ ಪ್ರಾಣಿ, ಪಕ್ಷಿಗಳಿಗಾಗಿ ಕುಡಿಯುವ ನೀರು ಇಡಿ

ಹಣದುಬ್ಬರದಿಂದ ಜನ ಬೇಯುತ್ತಿದ್ದಾರೆ

ನಾವು ಬಿಸಿಲನ್ನು ಸಹಿಸಿಕೊಳ್ಳಬಲ್ಲೆವು, ಆದರೆ ಬಿಜೆಪಿ ಪ್ರಾಯೋಜಿತ ಹಣದುಬ್ಬರದ ಬೆಂಕಿಯಿಂದ ಸಾಮಾನ್ಯ ಜನರು ಬೆವರು ಸುರಿಸುತ್ತಿದ್ದಾರೆ. ಮೋದಿಯವರೇ, ನಿಮ್ಮ ಸ್ವಂತ ಸರ್ಕಾರದ ಲೂಟಿಯ ಬಗ್ಗೆ ನೀವು ಎಂದಿಗೂ ಏನನ್ನೂ ಏಕೆ ಹೇಳುವುದಿಲ್ಲ?

-ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್‌ ಅಧ್ಯಕ್ಷ

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

3 ಬಾರಿ ನೀಟ್‌ ಸೋರಿಕೆ ಆದ್ರೂ ಚರ್ಚೆಗೇಕೆ ತಡ? : ಕೇಂದ್ರದ ವಿರುದ್ಧ ಅಣ್ಣಾಮಲೈ ಆಕ್ರೋಶ
ನೀಟ್‌ ಕುರಿತು ಸಮಗ್ರ ಚರ್ಚೆಗೆ ಸಿದ್ಧ : ಸರ್ಕಾರ