- ಪಿಎಂ ಕಚೇರಿ ಸೇವಾ ತೀರ್ಥ ಎಂದು ಮರುನಾಮಕರಣ- ಸಂಸ್ಕೃತಿ, ಮೌಲ್ಯ ಗಮನದಲ್ಲಿಟ್ಟು ಹೆಸರು ಬದಲಾವಣೆ
ಹೆಸರು ಬದಲಾವಣೆ ಪರ್ವ
ಈ ಮೊದಲು ರಾಜಪಥವನ್ನು ಕರ್ತವ್ಯಪಥ ಬದಲಾಯಿಸಿದ್ದ ಸರ್ಕಾರಇತ್ತೀಚೆಗೆ ರಾಜ್ಯಪಾಲರ ಕಚೇರಿ ಹೆಸರು ಲೋಕಭವನ ಎಂದು ಬದಲು
ಹೊಸದಾಗಿ ನಿರ್ಮಾಣವಾಗುತ್ತಿರುವ ಪಿಎಂಒ ಕಟ್ಟಡಕ್ಕೆ ಈ ಹೊಸ ಹೆಸರು
ಆಡಳಿತ ಜತೆ ಸಂಸ್ಕೃತಿ, ಮೌಲ್ಯ ಗಮನದಲ್ಲಿಟ್ಟುಕೊಂಡು ಬದಲಾವಣೆ
ಇತ್ತೀಚೆಗಷ್ಟೇ ರಾಜ್ಯಪಾಲರ ನಿವಾಸವಾದ ‘ರಾಜಭವನ’ವನ್ನು ‘ಲೋಕಭವನ’ವಾಗಿ ಮರುನಾಮಕರಣ ಮಾಡುವಂತೆ ಆದೇಶಿಸಿದ್ದ ಕೇಂದ್ರ ಸರ್ಕಾರ, ಇದೀಗ ಪ್ರಧಾನ ಮಂತ್ರಿಗಳ ಕಚೇರಿಯನ್ನು (ಪಿಎಂಒ) ‘ಸೇವಾ ತೀರ್ಥ’ ಎಂದು ಹೆಸರಿಸಲು ನಿರ್ಧರಿಸಿದೆ. ಇದುವರೆಗೆ ಪಿಎಂಒವನ್ನು ‘ಎಕ್ಸಿಕ್ಯುಟಿವ್ ಎನ್‌ಕ್ಲೇವ್’ ಎಂದು ಕರೆಯಲಾಗುತ್ತಿತ್ತು.
‘ಸತ್ತೆಯಿಂದ (ಅಧಿಕಾರ) ಸೇವೆಯೆಡೆಗೆ, ಆಡಳಿತದಿಂದ ಜವಾಬ್ದಾರಿಯೆಡೆಗೆ ಮುನ್ನಡೆಯುವುದು ಸರ್ಕಾರದ ಉದ್ದೇಶ. ಹಾಗಾಗಿ ಆಡಳಿತಾತ್ಮಕವಾಗಿ ಮಾತ್ರವಲ್ಲದೆ, ಸಂಸ್ಕೃತಿ ಮತ್ತು ಮೌಲ್ಯಗಳನ್ನು ಗಮನದಲ್ಲಿಟ್ಟುಕೊಂಡು ಪಿಎಂಒಗೆ ಸೇವಾ ತೀರ್ಥವೆಂದು ಹೆಸರು ಬದಲಿಸಿದ್ದೇವೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.