ದೀಪ್ಕೆ ಸೇರಿ ಜಂತರ್‌ಮಂತರ್‌ದಂಡೇ ಇಂದು ಬೆಂಗಳೂರಿಗೆ!- ಸಿಇಸಿ ವಿರುದ್ಧ ಬೃಹತ್‌ ಪ್ರತಿಭಟನೆ

KannadaprabhaNewsNetwork |  
Published : Oct 08, 2026, 02:45 AM ISTUpdated : Oct 08, 2026, 04:55 AM IST
abhijeet dipke jail bharo aandolan

ಸಾರಾಂಶ

ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶ್‌ ಕುಮಾರ್ ಅವರನ್ನು ವಜಾಗೊಳಿಸಿ ಎಸ್‌ಐಆರ್ ಪ್ರಕ್ರಿಯೆ ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ವತಿಯಿಂದ ಗುರುವಾರ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

 ಬೆಂಗಳೂರು : ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶ್‌ ಕುಮಾರ್ ಅವರನ್ನು ವಜಾಗೊಳಿಸಿ ಎಸ್‌ಐಆರ್ ಪ್ರಕ್ರಿಯೆ ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ವತಿಯಿಂದ ಗುರುವಾರ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ಸಿಜೆಪಿ ಸಂಸ್ಥಾಪಕ ಅಭಿಜಿತ್‌ ದೀಪ್ಕೆ ಕೂಡಾ ಭಾಗಿ

ಈ ಪ್ರತಿಭಟನೆಯಲ್ಲಿ ಸಿಜೆಪಿ ಸಂಸ್ಥಾಪಕ ಅಭಿಜಿತ್‌ ದೀಪ್ಕೆ ಕೂಡಾ ಭಾಗಿಯಾಗುತ್ತಿದ್ದಾರೆ. ಅವರು ಬೆಂಗಳೂರಿನ ಹೋರಾಟದ ಕಣದಲ್ಲಿ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲು. ಇದರ ಜೊತೆಗೆ ಎನ್‌ಡಿಎ ಸರ್ಕಾರದ ಕಟು ಟೀಕಾಕಾರರಲ್ಲಿ ಒಬ್ಬರಾದ ಖ್ಯಾತ ಯುಟ್ಯೂಬರ್‌ ಧ್ರುವ್‌ ರಾಠಿ ಇದೇ ಮೊದಲ ಬಾರಿಗೆ ಸಿಜೆಪಿ ಹೋರಾಟಕ್ಕೆ ನೇರವಾಗಿ ಧಮುಕುತ್ತಿದ್ದು, ಅದಕ್ಕೆ ಕರ್ನಾಟಕವನ್ನೇ ವೇದಿಕೆ ಮಾಡಿಕೊಂಡಿರುವುದು ಭಾರೀ ಕುತೂಹಲ ಮೂಡಿಸಿದೆ.

10.30ಕ್ಕೆ ಆರಂಭವಾಗಲಿರುವ ಈ ಪ್ರತಿಭಟನೆ

ಬೆಳಗ್ಗೆ 10.30ಕ್ಕೆ ಆರಂಭವಾಗಲಿರುವ ಈ ಪ್ರತಿಭಟನೆಯಲ್ಲಿ ಪಕ್ಷದ ಮುಖಂಡರಾದ ಅಭಿಜಿತ್‌ ದೀಪ್ಕೆ, ಸೌರವ್ ದಾಸ್, ಅಶುತೋಷ್ ರಾಂಕಾ, ನಟರಾದ ಪ್ರಕಾಶ್ ರಾಜ್, ಕಿಶೋರ್ ಕುಮಾರ್, ಆರ್ಥಿಕ ತಜ್ಞ ಪರಕಾಲ ಪ್ರಭಾಕ‌ರ್ ಸೇರಿ ಹಲವು ಚಿಂತಕರು, ಕಲಾವಿದರು, ಸಾಹಿತಿಗಳು ಪಾಲ್ಗೊಳ್ಳಲಿದ್ದಾರೆ. ಜತೆಗೆ ಯೂಟ್ಯೂಬರ್ ಧ್ರುವ್ ರಾಠಿ ಭಾಗಿಯಾಗಲಿದ್ದಾರೆ ಎಂದು ನಟ ಪ್ರಕಾಶ್ ರಾಜ್ ಸಾಮಾಜಿಕ ಜಾಲತಾಣದ ಮೂಲಕ ಮಾಹಿತಿ ನೀಡಿದ್ದಾರೆ.

ಪ್ರತಿಭಟನೆ ಅಂಗವಾಗಿ ಜನತಾ ನ್ಯಾಯಾಲಯ ನಡೆಯಲಿದ್ದು, ಸುಪ್ರೀಂಕೋರ್ಟ್‌ನ ಮೂವರು ನಿವೃತ್ತ ನ್ಯಾಯಮೂರ್ತಿಗಳು ಪಾಲ್ಗೊಂಡು ಎಸ್‌ಐಆ‌ರ್ ಪ್ರಕ್ರಿಯೆಯಿಂದ ನೊಂದ ಸಂತ್ರಸ್ತರ ಆರೋಪಗಳನ್ನು ಆಲಿಸಿ ತೀರ್ಪು ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

2ನೇ ದಿನವೂ ಸಿಇಸಿ ವಿರುದ್ಧ ಇಂಡಿಯಾ ಕೂಟದ ದಂಗಲ್‌
ಬೆಂಗಳೂರಿನಲ್ಲಿ ಅಗ್ರಿಕಾನ್ – ಹಾರ್ಟಿಕನೆಕ್ಟ್ ಇಂಡಿಯಾಗೆ ಸಿಎಂ ಚಾಲನೆ