ಬರ್ಲಿನ್‌ನಲ್ಲಿ ಟಿವಿಎಸ್‌ ಬೈಕ್ : ರಾಹುಲ್‌ ಗಾಂಧಿ ಭಾರಿ ಮೆಚ್ಚುಗೆ

KannadaprabhaNewsNetwork |  
Published : Dec 18, 2025, 03:00 AM IST
Rahul Gandhi

ಸಾರಾಂಶ

ಜರ್ಮನ್‌ ಪ್ರವಾಸದಲ್ಲಿರುವ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ಅಲ್ಲಿ ತಮಿಳುನಾಡಿನ ಹೊಸೂರು ಘಟಕದಿಂದ ನಿರ್ಮಾಣವಾಗಿರುವ ಟಿವಿಎಸ್‌ 450 ಸಿಸಿ ಬೈಕ್‌ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಲ್ಲಿ ಭಾರತದ ಧ್ವಜ ಹಾರುತ್ತಿರುವುದಕ್ಕೆ ಸಂತೋಷವಾಗಿದೆ ಎಂದು ಹರ್ಷಿಸಿದ್ದಾರೆ.

ಬರ್ಲಿನ್‌: ಜರ್ಮನ್‌ ಪ್ರವಾಸದಲ್ಲಿರುವ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ಅಲ್ಲಿ ತಮಿಳುನಾಡಿನ ಹೊಸೂರು ಘಟಕದಿಂದ ನಿರ್ಮಾಣವಾಗಿರುವ ಟಿವಿಎಸ್‌ 450 ಸಿಸಿ ಬೈಕ್‌ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಲ್ಲಿ ಭಾರತದ ಧ್ವಜ ಹಾರುತ್ತಿರುವುದಕ್ಕೆ ಸಂತೋಷವಾಗಿದೆ ಎಂದು ಹರ್ಷಿಸಿದ್ದಾರೆ.

ಬಿಎಂಡಬ್ಲ್ಯೂ ಸ್ಥಾವರಕ್ಕೆ ಭೇಟಿ

ರಾಹುಲ್‌ ಮ್ಯೂನಿಕ್‌ನಲ್ಲಿರುವ ಬಿಎಂಡಬ್ಲ್ಯೂ ಸ್ಥಾವರಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಅಲ್ಲಿ ಅವರು ತಮಿಳುನಾಡಿನ ಹೊಸೂರಿನ ಘಟಕದಲ್ಲಿ ಟಿವಿಎಸ್‌ ಸಹಯೋಗದೊಂದಿಗೆ ಸಿದ್ಧವಾಗಿರುವ ಬಿಎಂಡಬ್ಲ್ಯು ಜಿ450ಜಿಎಸ್‌ ಬೈಕ್‌ ಕಂಡು ಖುಷಿ ಪಟ್ಟಿದ್ದು, ತಾವು ಬೈಕ್‌ ಮೇಲೆ ಕುಳಿತು ಫೋಟೋಗಳನ್ನು ಕ್ಲಿಕ್ಕಿಸಿದರು. ಆದರೆ ಈ ಬೈಕ್‌ ಇನ್ನೂ ಭಾರತದಲ್ಲಿ ಬಿಡುಗಡೆಯಾಗಿಲ್ಲ.

ಇದಕ್ಕೆ ಸಂಬಂಧಿಸಿದ ಫೋಟೋ, ವಿಡಿಯೋಗಳನ್ನು ಜಾಲತಾಣದಲ್ಲಿ ಹಂಚಿಕೊಂಡಿರುವ ರಾಹುಲ್‌, ‘ಇದೊಂದು ಅದ್ಭುತ ಅನುಭವ. ಜರ್ಮನಿಯಲ್ಲಿ ಟಿವಿಎಸ್‌ನ 450 ಸಿಸಿ ಬೈಕ್‌ ನೋಡಿ ಖುಷಿಯಾಗಿದ್ದೇನೆ. ಇಲ್ಲಿ ಭಾರತದ ಧ್ವಜ ಹಾರುತ್ತಿರುವುದು ನೋಡಿ ಸಂತೋಷವಾಗಿದೆ. ದೇಶದ ಎಂಜಿನಿಯರ್‌ಗಳ ಕೌಶಲ್ಯಗಳನ್ನು ನೋಡಲು ಇದೊಂದು ಹೆಮ್ಮೆಯ ಕ್ಷಣ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇದೇ ವೇಳೆ, ಭಾರತದಲ್ಲಿ ವಾಹನ ಉತ್ಪಾದನೆ ಕುಂಠಿತವಾಗಿದೆ. ಅದನ್ನು ಹೆಚ್ಚಿಸಬೇಕು ಎಂದೂ ಹೇಳಿದರು.

ಪಿಎಂ ಲೈಬ್ರರಿಗೆ ನೆಹರು ಕಡತ ನೀಡದ ಸೋನಿಯಾ: ಕೇಂದ್ರ ಕಿಡಿ

ನವದೆಹಲಿ: ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಕಡತಗಳು ಇರುವ 51 ಪೆಟ್ಟಿಗೆಗಳನ್ನು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಈವರೆಗೂ ಸರ್ಕಾರಕ್ಕೆ ಹಸ್ತಾಂತರಿಸಿಲ್ಲ ಎಂದು ಕೇಂದ್ರ ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್‌ ಶೆಖಾವತ್‌ ಆರೋಪಿಸಿದ್ದಾರೆ.ಟ್ವೀಟ್ ಮಾಡಿರುವ ಅವರು, ‘ಪ್ರಧಾನ ಮಂತ್ರಿಗಳ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯಕ್ಕೆ (ಪಿಎಂಎಂಎಲ್) ಇವನ್ನು ಸೋನಿಯಾ ಹಿಂದಿರುಗಿಸಿದರೆ, ಈ ಐತಿಹಾಸಿಕ ದಾಖಲೆಗಳನ್ನು ವಿದ್ವಾಂಸರು, ಜನರು ನೋಡಬಹುದು. ಇವು ಸಾರ್ವಜನಿಕ ಆಸ್ತಿಯಾಗಿದ್ದು, ಮುಚ್ಚಿಡಬಾರದು’ ಎಂದಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಸಿದ್ದು ಆಪ್ತ 20 ಶಾಸಕರಿಗೆಜಾರಕಿಹೊಳಿ ಔತಣಕೂಟ : ಬೆಳಗಾವೀಲೂ ಗರಿಗೆದರಿದ ಬಣ ರಾಜಕೀಯ
ದಿಲ್ಲಿಯಲ್ಲಿ ಜ.1ರಿಂದ ಕೇಂದ್ರದ ಭಾರತ್‌ ಟ್ಯಾಕ್ಸಿ ಸಂಚಾರ