ಲಖನೌ: ಭಾರತ್ ಜೋಡೋ ನ್ಯಾಯ್ ಯಾತ್ರೆಯಲ್ಲಿ ಭಾಗಿಯಾಗಿರುವ ರಾಹುಲ್ ಗಾಂಧಿ ಅವರು ಉತ್ತರ ಪ್ರದೇಶದ ಯುವಕರು ‘ಕುಡುಕರು’ ಎಂದು ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದಾರೆ.
ವಾರಾಣಸಿಯಲ್ಲಿ ಮೆರವಣಿಗೆಯಲ್ಲಿ ಮಾತನಾಡಿದ ರಾಹುಲ್,‘ ವಾರಾಣಸಿಯಲ್ಲಿ ಯುವಕರು ಕುಡಿದು ರಸ್ತೆ ಬದಿಯಲ್ಲಿ ಮಲಗಿದ್ದರು. ರಾತ್ರೋರಾತ್ರಿ ಕುಣಿದಾಡುತ್ತಿದ್ದರು.
ಇದನ್ನು ಕಂಡ ನನಗೆ ಉತ್ತರ ಪ್ರದೇಶದ ಯುವಕರ ಭವಿಷ್ಯ ಕಲ್ಮಶವಾಗಿದೆ ಎಂದೆನೆಸಿತು. ಇವರು ದಿಕ್ಕುದೆಸೆಯಿಲ್ಲದವರು’ ಎಂದು ಹೇಳಿದ್ದು, ಇದು ವಿವಾದಕ್ಕೆ ಕಾರಣವಾಗಿದೆ.
ವಾರಾಣಸಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಲೋಕಸಭೆ ಪ್ರತಿನಿಧಿಸುವ ಕ್ಷೇತ್ರ ಎಂಬುದು ವಿಶೇಷ.