ಅಮರಾವತಿ: ತಾವು ಮುಂಬರುವ ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹಬ್ಬಿದ ಸುದ್ದಿಯನ್ನು ತೆಲುಗಿನ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ತಳ್ಳಿಹಾಕಿದ್ದಾರೆ.
ನಟ ಪವನ್ ಕಲ್ಯಾಣ್ ವಿರುದ್ಧ ಪೀಠಾಪುರಂನಲ್ಲಿ ರಾಮ್ ಗೋಪಾಲ್ ಸ್ಪರ್ಧೆ ಮಾಡುತ್ತಾರೆ ಎಂಬ ಸುದ್ದಿಗೆ ಪ್ರತಿಕ್ರಿಯೆ ನೀಡಿದ ಅವರು,‘ನಾನು ಕೇವಲ ಕಿರು ಚಿತ್ರ ಮಹೋತ್ಸವದಲ್ಲಿ ಸ್ಪರ್ಧೆ ಮಾಡುತ್ತೇವೆ ಎಂದು ಹೇಳಿದ್ದೆ.
ಇದಲ್ಲದೇ ನನ್ನ ಇಡೀ ಟ್ವೀಟ್ ಸಂದೇಶದಲ್ಲಿ ನಾನು ಚುನಾವಣೆ ಹೆಸರನ್ನೇ ಪ್ರಸ್ತಾಪ ಮಾಡಿಲ್ಲ.
ಪೀಠಾಪುರಂನಲ್ಲಿ ನನ್ನ ಕಿರು ಚಿತ್ರ ಚಿತ್ರೀಕರಣ ನಡೆಸಿದ್ದ ಕಾರಣ ಪೀಠಾಪುರಂ ಹೆಸರು ಬಳಕೆ ಮಾಡಿದ್ದೆ.
ಇದನ್ನು ಮಾಧ್ಯಮದವರು ಅಪಾರ್ಥ ಮಾಡಿಕೊಂಡರೆ, ಅದು ನನ್ನ ತಪ್ಪಲ್ಲ’ ಎಂದು ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.