ಅಯೋಧ್ಯೆಯ ಶ್ರೀರಾಮಮಂದಿರ‘ಆತ್ಮನಿರ್ಭರ’ ದೇಗುಲ ಸಂಕೀರ್ಣ: ಚಂಪತ್ ರಾಯ್‌

KannadaprabhaNewsNetwork |  
Published : Dec 27, 2023, 01:32 AM ISTUpdated : Dec 27, 2023, 11:58 AM IST
ಅಯೋಧ್ಯೆಯಲ್ಲಿ ಲೇಸರ್‌ ಶೋ | Kannada Prabha

ಸಾರಾಂಶ

ಒಳಚರಂಡಿ ನೀರು ಶುದ್ಧೀಕರಣ, ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆ ಮಾಡುವ ಜೊತೆಗೆ ಎಲ್ಲ ಸ್ವದೇಶಿ ವಸ್ತುಗಳಿಂದ ರಾಮಮಂದಿರವನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ಶ್ರೀರಾಮ ಮಂದಿರ ಟ್ರಸ್ಟ್‌ ಸದಸ್ಯರಾದ ಚಂಪತ್‌ ರಾಯ್‌ ತಿಳಿಸಿದ್ದಾರೆ.

ಪಿಟಿಐ ಅಯೋಧ್ಯೆ: ಜ.22ರಂದು ಅಯೋಧ್ಯೆಯಲ್ಲಿ ಲೋಕಾರ್ಪಣೆಯಾಗಲಿರುವ ಭವ್ಯ ಶ್ರೀರಾಮಮಂದಿರ ಆತ್ಮನಿರ್ಭರ ದೇಗುಲ ಸಂಕೀರ್ಣವಾಗಿದೆ. ಒಳಚರಂಡಿ ಹಾಗೂ ನೀರು ಶುದ್ಧೀಕರಣ ಘಟಕಗಳನ್ನು ಹೊಂದಿದೆ. ಅಲ್ಲದೆ ವೃದ್ಧರು ಹಾಗೂ ಅಂಗವಿಕಲರ ಸುಗಮ ಓಡಾಟಕ್ಕೂ ಇಲ್ಲಿ ಅವಕಾಶವಿರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ದೇಗುಲ ಸಮುಚ್ಚಯ ನಿರ್ಮಾಣವಾಗುತ್ತಿರುವ 70 ಎಕರೆ ಪ್ರದೇಶದ ಪೈಕಿ ಶೇ.70ರಷ್ಟು ಭೂಭಾಗ ಹಸಿರಿನಿಂದ ಆವೃತ್ತವಾಗಿರುತ್ತದೆ. 2 ಎಸ್‌ಟಿಪಿ (ಒಳಚರಂಡಿ ನೀರು ಶುದ್ಧೀಕರಣ ಘಟಕ), ಒಂದು ಡಬ್ಲ್ಯುಟಿಪಿ (ನೀರು ಶುದ್ಧೀಕರಣ ಘಟಕ)ಯನ್ನು ಹೊಂದಿರುತ್ತದೆ. ವಿದ್ಯುತ್‌ ಘಟಕದಿಂದ ಪ್ರತ್ಯೇಕವಾದ ಮಾರ್ಗ ದೇಗುಲಕ್ಕೆ ಇರುತ್ತದೆ. ಅಗ್ನಿ ಅನಾಹುತಗಳನ್ನು ಎದುರಿಸಲು ಅಗ್ನಿಶಾಮಕ ವಿಭಾಗವನ್ನೂ ದೇಗುಲ ಹೊಂದಿರುತ್ತದೆ. ಅದಕ್ಕೆ ನೀರು ಒದಗಿಸಲು ಭೂಗತ ಜಲಾಶಯ ನಿರ್ಮಿಸಲಾಗುತ್ತದೆ ಎಂದು ರಾಮಮಂದಿರ ಟ್ರಸ್ಟ್‌ ಪ್ರಧಾನ ಕಾರ್ಯದರ್ಶಿ ಚಂಪತ್‌ ರಾಯ್‌ ತಿಳಿಸಿದ್ದಾರೆ. ರಾಮಮಂದಿರದಲ್ಲಿ ವೃದ್ಧರು, ಅಂಗವಿಕಲರಿಗಾಗಿ ಲಿಫ್ಟ್‌ ಹಾಗೂ ರ್‍ಯಾಂಪ್‌ ಸೌಕರ್ಯ ಇರುತ್ತದೆ ಎಂದಿದ್ದಾರೆ.ಜಟಾಯು ಪ್ರತಿಮೆ ಸ್ಥಾಪನೆಅಯೋಧ್ಯೆಯ ಕುಬೇರ್‌ ತಿಲಾದಲ್ಲಿ ಜಟಾಯು ಪ್ರತಿಮೆಯನ್ನು ನಿರ್ಮಾಣ ಮಾಡಲಾಗುತ್ತದೆ ಎಂದು ಚಂಪತ್ ರಾಯ್‌ ಅವರು ಮಾಹಿತಿ ನೀಡಿದ್ದಾರೆ.ಅಯೋಧ್ಯೆಗೆ ಉ.ಪ್ರ. ಡಿಸಿಎಂ ಭೇಟಿ: ಪರಿಶೀಲನೆ

ಅಯೋಧ್ಯೆ: ಜ.22ರಂದು ರಾಮಮಂದಿರ ಉದ್ಘಾಟನೆಗಾಗಿ ಹಾಗೂ ಡಿ.30ರಂದು ಏರ್‌ಪೋರ್ಟ್‌ ಮತ್ತು ವಿವಿಧ ಕಾಮಗಾರಿಗಳ ಉದ್ಘಾಟನೆಗಾಗಿ ಅಯೋಧ್ಯೆಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಉಪಮುಖ್ಯಮಂತ್ರಿ ಕೇಶವಪ್ರಸಾದ್‌ ಮೌರ್ಯ ಅವರು ಮಂಗಳವಾರ ಮಂದಿರ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿದರು. ಈ ವೇಳೆ ವಿವಿಧ ಕಾಮಗಾರಿಗಳ ಪರಿಶೀಲನೆ ನಡೆಸಿದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಇಸ್ರೋ ಹೊಸ ಮೈಲುಗಲ್ಲು-6100 ಕೆಜಿ ತೂಕದ ಉಪಗ್ರಹ 15 ನಿಮಿಷದಲ್ಲಿ ಕಕ್ಷೆಗೆ
ಶತ್ರು- ಮಿತ್ರರಿಗೆ ಮಹಾ ಸಹೋದರರ ಸವಾಲ್‌!