22 ಪ್ರಾದೇಶಿಕ ಪಕ್ಷಗಳಿಗೆ ₹ 5221 ಕೋಟಿ ದೇಣಿಗೆ

KannadaprabhaNewsNetwork |  
Published : Mar 16, 2024, 01:47 AM ISTUpdated : Mar 16, 2024, 11:33 AM IST
ಬಾಂಡ್‌ | Kannada Prabha

ಸಾರಾಂಶ

2019 ಏಪ್ರಿಲ್‌ ಮತ್ತು 2024ರ ಜನವರಿ ನಡುವೆ ಚುನಾವಣಾ ಬಾಂಡ್‌ಗಳ ಮೂಲಕ 22 ಪ್ರಾದೇಶಿಕ ಪಕ್ಷಗಳು ಒಟ್ಟು 5,221 ಕೋಟಿ ರು. ಹೆಚ್ಚು ದೇಣಿಗೆಗಳನ್ನು ಸಂಗ್ರಹಿಸಿವೆ.

ನವದೆಹಲಿ: 2019 ಏಪ್ರಿಲ್‌ ಮತ್ತು 2024ರ ಜನವರಿ ನಡುವೆ ಚುನಾವಣಾ ಬಾಂಡ್‌ಗಳ ಮೂಲಕ 22 ಪ್ರಾದೇಶಿಕ ಪಕ್ಷಗಳು ಒಟ್ಟು 5,221 ಕೋಟಿ ರು. ಹೆಚ್ಚು ದೇಣಿಗೆಗಳನ್ನು ಸಂಗ್ರಹಿಸಿವೆ. ವಿಶೇಷವೆಂದರೆ ಈ ಮೊತ್ತ ಇದೇ ಅವಧಿಯಲ್ಲಿ ಬಿಜೆಪಿಗೆ ನೀಡಲಾದ 6060.51 ಕೋಟಿ ರು.ಗಳಿಗಿಂತ ಕಡಿಮೆ.

4 ವರ್ಷಗಳ ಅವಧಿಯಲ್ಲಿ ಚುನಾವಣಾ ಬಾಂಡ್‌ಗಳ ಮೂಲಕ ಸಂಗ್ರಹವಾದ ಒಟ್ಟು 16,518 ಕೋಟಿ ರು. ಗಳಲ್ಲಿ ಬಿಜೆಪಿ 6060 ಕೋಟಿ ರು., ಕಾಂಗ್ರೆಸ್ 1421 ಕೋಟಿ ರು. ಮತ್ತು ಆಪ್‌ 65.45 ಕೋಟಿ ರು. ದೇಣಿಗೆಯನ್ನು ಸಂಗ್ರಹಿಸಿವೆ.

22 ಪ್ರಾದೇಶಿಕ ಪಕ್ಷಗಳಲ್ಲಿ, ಟಿಎಂಸಿ 1,609 ಕೋಟಿ ರು., ಭಾರತ ರಾಷ್ಟ್ರ ಸಮಿತಿ ಪಕ್ಷ 1,214 ಕೋಟಿ ರು., ಬಿಜೆಡಿ 775 ಕೋಟಿ ರು., ಡಿಎಂಕೆ 639 ಕೋಟಿ ರು. ಹಾಗೂ ವೈಎಸ್‌ಆರ್‌ಸಿಪಿ ಪಕ್ಷ 337 ಕೋಟಿ ರು.ಗಳನ್ನು ಸಂಗ್ರಹಿಸಿದೆ.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
ಭಾರತ-ಇಂಗ್ಲೆಂಡ್‌ ಸರಣಿ ಕ್ಲೈಮ್ಯಾಕ್ಸ್‌ ಇಂದು !