ಎನ್‌ಡಿಎ ಕ್ಷೇತ್ರ ಪುನರ್ವಿಂಗಡಣೆ ಮಸೂದೆಗೆ ಎನ್‌ಸಿಪಿ (ಎಸ್ಪಿ) ಬೆಂಬಲ?

KannadaprabhaNewsNetwork |  
Published : Jul 16, 2026, 03:30 AM IST
Supriya

ಸಾರಾಂಶ

ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಮಸೂದೆ, ಕಳೆದ ಅಧಿವೇಶನದಲ್ಲಿ ಸೋಲು ಕಂಡಿದ್ದ ಕ್ಷೇತ್ರ ಪುನರ್ವಿಂಗಡಣೆ ಮಸೂದೆಗೆ ಇಂಡಿಯಾ ಮೈತ್ರಿಕೂಟದ ಶರದ್‌ ಪವಾರ್‌ ನೇತೃತ್ವದ ಎನ್‌ಸಿಪಿ ಬೆಂಬಲಿಸುವ ಸುಳಿವು ನೀಡಿದೆ.

ಮುಂಬೈ: ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಮಸೂದೆ, ಕಳೆದ ಅಧಿವೇಶನದಲ್ಲಿ ಸೋಲು ಕಂಡಿದ್ದ ಕ್ಷೇತ್ರ ಪುನರ್ವಿಂಗಡಣೆ ಮಸೂದೆಗೆ ಇಂಡಿಯಾ ಮೈತ್ರಿಕೂಟದ ಶರದ್‌ ಪವಾರ್‌ ನೇತೃತ್ವದ ಎನ್‌ಸಿಪಿ ಬೆಂಬಲಿಸುವ ಸುಳಿವು ನೀಡಿದೆ.

ಈ ಬಗ್ಗೆ ಮಾತನಾಡಿದ ಎನ್‌ಸಿಪಿ-ಎಸ್ಪಿ ನಾಯಕಿ ಸುಪ್ರಿಯಾ ಸುಳೆ, ‘ರಾಜ್ಯಗಳ ಲೋಕಸಭಾ ಕ್ಷೇತ್ರಗಳು ಶೇ.50ರಷ್ಟು ಹೆಚ್ಚಾಗಬೇಕು. ಮಸೂದೆಯಲ್ಲಿ ಆ ಅಂಶ ಇರಬೇಕು ಎಂಬುದು ನಮ್ಮ ಬೇಡಿಕೆ. ಮಸೂದೆ ಇನ್ನೂ ನಮ್ಮ ಬಳಿ ಲಭ್ಯವಿಲ್ಲ.ಶೇ.50ರಷ್ಟು ಕ್ಷೇತ್ರ ಪುನರ್ವಿಂಗಡಣೆ ಮಸೂದೆಯ ಷರತ್ತುಗಳ ಬಗ್ಗೆ ಕಾಗದದಲ್ಲಿ ನಮೂದಿಸಿ. ಬಳಿಕ ಆ ಬಗ್ಗೆ ಚರ್ಚಿಸುತ್ತೇವೆ’ ಎಂದರು.

ಇದರ ನಡುವೆಯೇ ಎನ್‌ಸಿಪಿ ಎಸ್ಪಿ ನಾಯಕರು ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್‌ ಅವರನ್ನು ಭೇಟಿಯಾಗಿ ಚರ್ಚಿಸಿರುವುದು ಮತ್ತಷ್ಟು ಊಹಾಪೋಹಕ್ಕೆ ನಾಂದಿ ಹಾಡಿದೆ. ಒಂದು ವೇಳೆ ಎನ್‌ಸಿಪಿ ಬೆಂಬಲಿಸಿದರೆ, ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಕಾಂಗ್ರೆಸ್‌ ನೇತೃತ್ವದ ಇಂಡಿಯಾ ಕೂಟಕ್ಕೆ ಮತ್ತೊಂದು ಹೊಡೆತ ಬೀಳಲಿದೆ.

ಸೋತ ಮಸೂದೆಗಳಿಗೆ ವಿಪಕ್ಷಗಳ ಸೆಳೆಯಲು ಎನ್‌ಡಿಎ ತಂತ್ರ: ಚಿದು

ನವದೆಹಲಿ: ‘ಎನ್‌ಡಿಎ ಸರ್ಕಾರವು, ಕಳೆದ ಅಧಿವೇಶನದಲ್ಲಿ ಸೋಲು ಕಂಡಿದ್ದ ಮಸೂದೆಗಳನ್ನು ಮತ್ತೆ ಜಾರಿಗೊಳಿಸಲು ವಿಪಕ್ಷಗಳಾದ ಎನ್‌ಸಿಪಿ (ಎಸ್‌ಪಿ) ಮತ್ತು ಡಿಎಂಕೆ ಪಕ್ಷಗಳನ್ನು ಓಲೈಸುತ್ತಿದೆ. ಆ ಎರಡೂ ಪಕ್ಷಗಳು ಮಸೂದೆಯನ್ನು ಬೆಂಬಲಿಸಬಾರದು’ ಎಂದು ಕೇಂದ್ರದ ಮಾಜಿ ವಿತ್ತ ಸಚಿವ, ಕಾಂಗ್ರೆಸ್‌ ನಾಯಕ ಪಿ.ಚಿದಂಬರಂ ಹೇಳಿದ್ದಾರೆ. 

ಎನ್‌ಸಿಪಿ (ಎಸ್‌ಪಿ) ಬೆಂಬಲಿಸಲಿದೆ ಎನ್ನುವ ವದಂತಿ

ಕ್ಷೇತ್ರ ಪುನರ್ವಿಗಂಡಣೆ ಮಸೂದೆಗೆ ಎನ್‌ಸಿಪಿ (ಎಸ್‌ಪಿ) ಬೆಂಬಲಿಸಲಿದೆ ಎನ್ನುವ ವದಂತಿಗಳ ಬೆನ್ನಲ್ಲೇ ಚಿದಂಬರಂ ಈ ಬಗ್ಗೆ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ.‘ಕಳೆದ ಏಪ್ರಿಲ್‌ನಲ್ಲಿನ ಸಂಸತ್ತಿನ ಅಧಿವೇಶನದಲ್ಲಿ ವಿಫಲವಾದ 131ನೇ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಮರಳಿ ತರಲು ಬಿಜೆಪಿ ಯೋಜಿಸುತ್ತಿದೆ. ಟಿಎಂಸಿಯನ್ನು ವಿಭಜಿಸಿದ ನಂತರ, ಇದೀಗ ವಿಫಲವಾದ ಮಸೂದೆಯ ಹೊಸ ಆವೃತ್ತಿ ತರಲು ನಿರ್ಣಾಯಕ ಮತಗಳಿಗಾಗಿ ಎನ್‌ಸಿಪಿ (ಎಸ್‌ಪಿ) ಮತ್ತು ಡಿಎಂಕೆಯನ್ನು ಸೆಳೆಯುತ್ತಿದೆ. ಆದರೆ ಅವುಗಳು ಬೆಂಬಲ ನೀಡಬಾರದು. ಹಾಗೆ ಮಾಡಿದರೆ ಆತ್ಮಸಾಕ್ಷಿಗೆ ದ್ರೋಹ ಮಾಡಿಕೊಂಡಂತೆ’ ಎಂದಿದ್ದಾರೆ.ಕ್ಷೇತ್ರ ಪುನರ್ವಿಗಂಡಣೆ ಮಸೂದೆಗೆ ಎನ್‌ಸಿಪಿ (ಎಸ್‌ಪಿ) ಬೆಂಬಲಿಸಲಿದೆ ಎನ್ನುವ ವದಂತಿಗಳ ಬೆನ್ನಲ್ಲೇ ಚಿದಂಬರಂ ಈ ಬಗ್ಗೆ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ.

‘ಕಳೆದ ಏಪ್ರಿಲ್‌ನಲ್ಲಿನ ಸಂಸತ್ತಿನ ಅಧಿವೇಶನದಲ್ಲಿ ವಿಫಲವಾದ 131ನೇ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಮರಳಿ ತರಲು ಬಿಜೆಪಿ ಯೋಜಿಸುತ್ತಿದೆ. ಟಿಎಂಸಿಯನ್ನು ವಿಭಜಿಸಿದ ನಂತರ, ಇದೀಗ ವಿಫಲವಾದ ಮಸೂದೆಯ ಹೊಸ ಆವೃತ್ತಿ ತರಲು ನಿರ್ಣಾಯಕ ಮತಗಳಿಗಾಗಿ ಎನ್‌ಸಿಪಿ (ಎಸ್‌ಪಿ) ಮತ್ತು ಡಿಎಂಕೆಯನ್ನು ಸೆಳೆಯುತ್ತಿದೆ. ಆದರೆ ಅವುಗಳು ಬೆಂಬಲ ನೀಡಬಾರದು. ಹಾಗೆ ಮಾಡಿದರೆ ಆತ್ಮಸಾಕ್ಷಿಗೆ ದ್ರೋಹ ಮಾಡಿಕೊಂಡಂತೆ’ ಎಂದಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

9,911 ಹೊಸ ಎಂಬಿಬಿಎಸ್‌ ಸೀಟು ಘೋಷಣೆ
ವಾಂಗ್ಚುಕ್‌ಗೆ 2 ದಿನದಲ್ಲಿ ಸಾವಿನ ಅಪಾಯ : ಹೈಕೋರ್ಟ್‌ಗೆ ಅರ್ಜಿ