ಕರ್ನಾಟಕದ ಪ್ರಾಂಜಲ್‌ ಸೇರಿ 80 ಮಂದಿಗೆ ಶೌರ್ಯ ಪ್ರಶಸ್ತಿ

KannadaprabhaNewsNetwork |  
Published : Jan 26, 2024, 01:51 AM ISTUpdated : Jan 26, 2024, 07:33 AM IST
ಪ್ರಾಂಜಲ್‌ | Kannada Prabha

ಸಾರಾಂಶ

ಜೀವದ ಹಂಗು ತೊರೆದು ದೇಶ ಸೇವೆ ಸಲ್ಲಿಸಿದ ಕರ್ನಾಟಕದ ಯೋಧ ಪ್ರಾಂಜಲ್‌ ಸೇರಿದಂತೆ 80 ಮಂದಿ ಯೋಧರಿಗೆ 75ನೇ ಗಣರಾಜ್ಯೋತ್ಸವದ ಅಂಗವಾಗಿ ಶೌರ್ಯ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ.

ನವದೆಹಲಿ: ಜೀವದ ಹಂಗು ತೊರೆದು ದೇಶ ಸೇವೆ ಸಲ್ಲಿಸಿದ ಕರ್ನಾಟಕದ ಯೋಧ ಪ್ರಾಂಜಲ್‌ ಸೇರಿದಂತೆ 80 ಮಂದಿ ಯೋಧರಿಗೆ 75ನೇ ಗಣರಾಜ್ಯೋತ್ಸವದ ಅಂಗವಾಗಿ ಶೌರ್ಯ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ.

6 ಮಂದಿಗೆ ಕೀರ್ತಿ ಚಕ್ರ (3 ಮರಣೋತ್ತರ), 16 ಮಂದಿಗೆ ಶೌರ್ಯಚಕ್ರ (2 ಮರಣೋತ್ತರ), 53 ಮಂದಿಗೆ ಸೇನಾ ಪದಕ (7 ಮರಣೋತ್ತರ), ಒಬ್ಬರಿಗೆ ನೌಕಾಸೇನಾ ಪದಕ ಮತ್ತು 4 ಮಂದಿಗೆ ವಾಯುಸೇನಾ ಪದಕಗಳನ್ನು ಪ್ರಕಟಿಸಲಾಗಿದೆ. 

ಇದಲ್ಲದೇ 31 ಪರಮ ವಿಶಿಷ್ಟ ಸೇವಾ ಪದಕ, 4 ಉತ್ತಮ ಸೇವಾ ಪದಕ, 2 ಬಾರ್‌ ಟು ಅತಿ ವಿಶಿಷ್ಠ ಸೇವಾ ಪದಕ, 59 ಅತಿ ವಿಶಿಷ್ಠ ಸೇವಾ ಪದಕ, 10 ಯುದ್ಧ ಸೇವಾ ಪದಕ, ಕರ್ತವ್ಯ ಶ್ರದ್ಧೆ ವಿಭಾಗದಲ್ಲಿ 8 ಬಾರ್‌ ಟು ಸೇನಾ ಪದಕ, 38 ಸೇನಾ ಪದಕ, 10 ನೌಕಾ ಸೇನಾ ಪದಕ, 5 ಬಾರ್‌ ಟು ವಿಶಿಷ್ಠ ಸೇವಾ ಪದಕ ಮತ್ತು 130 ವಿಶಿಷ್ಠ ಸೇವಾ ಪದಕಗಳನ್ನು ಪ್ರಕಟಿಸಲಾಗಿದೆ.

ಪ್ರಾಂಜಲ್‌ ವೀರಮರಣ?
ರಾಷ್ಟ್ರೀಯ ರೈಫಲ್ಸ್‌ನ 63ನೇ ಬೆಟಾಲಿಯನ್‌ನಲ್ಲಿ ಯೋಧರಾಗಿದ್ದ ಕ್ಯಾಪ್ಟನ್‌ ಎಂ.ವಿ.ಪ್ರಾಂಜಲ್‌ ಮಂಗಳೂರಿನವರಾಗಿದ್ದು, ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿ ಸೇನೆಗೆ ಸೇರ್ಪಡೆಯಾಗಿದ್ದರು. ಕಳೆದ ವರ್ಷ ನ.22ರಂದು ಜಮ್ಮು ಕಾಶ್ಮೀರದ ರಜೌರಿಯಲ್ಲಿ ಉಗ್ರರ ಜೊತೆ ನಡೆದ ಗುಂಡಿನ ಕಾಳಗದಲ್ಲಿ ಹುತಾತ್ಮರಾಗಿದ್ದರು.

ಗಣರಾಜ್ಯೋತ್ಸವದ ಪ್ರಯುಕ್ತ ಶೌರ್ಯ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. ಈಟ್ಟ್ಟಿಯಲ್ಲಿ ಒಟ್ಟು 80 ಮಂದಿಗೆ ಪ್ರಶಸ್ತಿ ಪ್ರಕಟವಾಗಿದ್ದು, ಕರ್ನಾಟಕದ ವೀರಯೋಧ ಕ್ಯಾಪ್ಟನ್ ಪ್ರಾಂಜಲ್‌ಗೂ ಮರಣೋತ್ತರವಾಗಿ ಪ್ರಶಸ್ತಿ ಪ್ರಕಟಿಸಲಾಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಇಯು, ಅಮೆರಿಕ ಬಳಿಕ ಇನ್ನೂ 11 ದೇಶದ ಜತೆ ಟ್ರೇಡ್‌ ಡೀಲ್‌
ಆ್ಯಂಥ್ರೋಪಿಕ್‌ ಎಐನಿಂದ ವಿಶ್ವ ಟೆಕ್‌ ಲೋಕದಲ್ಲಿ ಬಿರುಗಾಳಿ!