ಬೆಂಗಳೂರು ಸ್ಟಾರ್ಟಪ್‌ ಬೈಜೂಸ್‌ ರವೀಂದ್ರನ್‌ಗೆ 6 ತಿಂಗಳು ಜೈಲು ಶಿಕ್ಷೆ

KannadaprabhaNewsNetwork |  
Published : May 28, 2026, 01:45 AM IST
byjus

ಸಾರಾಂಶ

ಬೆಂಗಳೂರು ಮೂಲದ ಶೈಕ್ಷಣಿಕ ಸ್ಟಾರ್ಟಪ್‌ ಬೈಜೂಸ್‌ನ ಸಂಸ್ಥಾಪಕ ರವೀಂದ್ರನ್‌ಗೆ ಸಿಂಗಾಪುರದ ನ್ಯಾಯಾಲಯವೊಂದು 6 ತಿಂಗಳು ಜೈಲು ಶಿಕ್ಷೆ ಮತ್ತು ನ್ಯಾಯಾಲಯದ ವೆಚ್ಚವಾಗಿ 45 ಲಕ್ಷ ರು. ದಂಡ ವಿಧಿಸಿದೆ. ಕೆಲವೊಂದು ಮಾಹಿತಿಗಳನ್ನು ಮುಚ್ಚಿಟ್ಟ ಪ್ರಕರಣದಲ್ಲಿ ನ್ಯಾಯಾಲಯ ಈ ಆದೇಶ ಹೊರಡಿಸಿದೆ.

ನವದೆಹಲಿ: ಬೆಂಗಳೂರು ಮೂಲದ ಶೈಕ್ಷಣಿಕ ಸ್ಟಾರ್ಟಪ್‌ ಬೈಜೂಸ್‌ನ ಸಂಸ್ಥಾಪಕ ರವೀಂದ್ರನ್‌ಗೆ ಸಿಂಗಾಪುರದ ನ್ಯಾಯಾಲಯವೊಂದು 6 ತಿಂಗಳು ಜೈಲು ಶಿಕ್ಷೆ ಮತ್ತು ನ್ಯಾಯಾಲಯದ ವೆಚ್ಚವಾಗಿ 45 ಲಕ್ಷ ರು. ದಂಡ ವಿಧಿಸಿದೆ. ಕೆಲವೊಂದು ಮಾಹಿತಿಗಳನ್ನು ಮುಚ್ಚಿಟ್ಟ ಪ್ರಕರಣದಲ್ಲಿ ನ್ಯಾಯಾಲಯ ಈ ಆದೇಶ ಹೊರಡಿಸಿದೆ.  

ಈ ನಡುವೆ ಆದೇಶವನ್ನು ನಿರಾಶಾದಾಯ ಎಂದು ಬಣ್ಣಿಸಿರುವ ರವೀಂದ್ರನ್‌, ಇದು ಯಾವುದೇ ವಂಚನೆ ಪ್ರಕರಣದಲ್ಲಿ ಹೊರಡಿಸಿದ ತೀರ್ಪಲ್ಲ. ಬದಲಾಗಿ ಕಾರ್ಯವಿಧಾನಕ್ಕೆ ಸಂಬಂಧಿಸಿದ್ದು, ಜೊತೆಗೆ ಇದರ ವಿರುದ್ಧ ಮೇಲ್ಮನವಿ ಅವಕಾಶವೂ ನಮ್ಮ ಮುಂದಿದೆ ಎಂದಿದ್ದಾರೆ. ಕೋವಿಡ್‌ಗೂ ಮುನ್ನ 45000 ಕೋಟಿ ರು.ಮಾರುಕಟ್ಟೆ ಮೌಲ್ಯದ ಮೂಲಕ ದೇಶದ ನಂ.1 ಸ್ಟಾರ್ಟಪ್‌ ಎಂಬ ಹಿರಿಮೆ ಹೊಂದಿದ್ದ ಬೈಜೂಸ್‌ ಕೋವಿಡ್‌ ಬಳಿಕ ಭಾರೀ ಪ್ರಮಾಣದ ಸಾಲದ ಸುಳಿಯಲ್ಲಿ ಸಿಕ್ಕಿಬಿದ್ದಿದೆ. 

ಲಾಹೋರ್‌ ಸ್ಥಳಗಳಿಗೆ ಹಿಂದೂ ಹೆಸರು ಬೇಡ: ಸರ್ಕಾರಕ್ಕೆ ಉಗ್ರರು 

ಲಾಹೋರ್‌: ಪಾಕಿಸ್ತಾನದ ವಾಣಿಜ್ಯ ರಾಜಧಾನಿ ಲಾಹೋರ್‌ನಲ್ಲಿ ಕೆಲವು ಪುರಾತನ ಸ್ಥಳಗಳಿಗೆ ಹಿಂದೂ, ಸಿಖ್‌ ಹೆಸರಿಡಲು ಮುಂದಾದ ಪಂಜಾಬ್‌ ಸರ್ಕಾರದ ನಿರ್ಧಾರಕ್ಕೆ ಉಗ್ರಗಾಮಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಬೆನ್ನಲ್ಲೇ ಸರ್ಕಾರ ನಿಲುವು ಬದಲಿಸಿದೆ. ವಾರಗಳ ಹಿಂದೆ ಪಂಜಾಬ್ ಸಿಎಂ ಮರಿಯಮ್‌ ನವಾಜ್‌ ನೇತೃತ್ವದ ಸರ್ಕಾರ ಸಂಪುಟ ಸಭೆಯಲ್ಲಿ ಲಾಹೋರ್‌ನಲ್ಲಿರುವ ಬ್ರಿಟಿಷ್‌ ಕಾಲದ ಹೆಗ್ಗುರುತುಗಳನ್ನು ಪುನಃ ಸ್ಥಾಪಿಸಿ ಸಿಖ್‌ ಮತ್ತು ಹಿಂದೂ ಹೆಸರುಗಳನ್ನಿಡಲು ನಿರ್ಧಾರ ಅಂಗೀಕರಿಸಿತ್ತು. ಇದಕ್ಕೆ ಉಗ್ರಗಾಮಿಗಳು ಮತ್ತು ವ್ಲಾಗರ್‌ಗಳಿಂದ ಟೀಕೆ ವ್ಯಕ್ತವಾಗಿದೆ. ಈ ಬೆನ್ನಲ್ಲೇ ಸರ್ಕಾರ ಯೂಟರ್ನ್‌ ತೆಗೆದುಕೊಂಡಿದೆ. ಈ ಕ್ರಮವನ್ನು ರದ್ದುಗೊಳಿಸಿದ್ದು ‘ ಇನ್ನು ಅಂತಹ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಮೆರಿಕಕ್ಕೆ ಹೊರಟಿದ್ದ ಏರಿಂಡಿಯಾ 8 ತಾಸಿನ ಬಳಿಕ ಮರಳಿ ದೆಹಲಿಗೆ! 

ನವದೆಹಲಿ: ದೆಹಲಿಯಿಂದ ಅಮೆರಿಕದ ಸ್ಯಾನ್‌ಫ್ರಾನ್ಸಿಸ್ಕೋಗೆ ಹೊರಟಿದ್ದ ಏರಿಂಡಿಯಾ ವಿಮಾನದಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಾರ್ಗ ಮಧ್ಯದಲ್ಲೇ ಸಂಚಾರ ರದ್ದುಪಡಿಸಿ ದೆಹಲಿಗೆ ಮರಳಿದ ಘಟನೆ ಬುಧವಾರ ನಡೆದಿದೆ. ವಿಮಾನ ಅದಾಗಲೇ 3 ಗಂಟೆ ಪ್ರಯಾಣ ನಡೆಸಿ ಚೀನಾ ವಾಯುವಲಯದಲ್ಲಿ ಹಾರಾಟ ನಡೆಸುತ್ತಿದ್ದ ವೇಳೆ ತಾಂತ್ರಿಕ ಸಮಸ್ಯೆ ಕಂಡುಬಂದಿದೆ. ಹೀಗಾಗಿ ವಿಮಾನವನ್ನು ಮರಳಿ ಭಾರತದತ್ತ ತಿರುಗಿಸಲಾಗಿದೆ. ಹೀಗೆ ಒಟ್ಟು 8 ಗಂಟೆ ಸಂಚಾರ ನಡೆಸಿದ ಬಳಿಕ 230 ಪ್ರಯಾಣಿಕರನ್ನು ವಿಮಾನ ದೆಹಲಿಯಲ್ಲಿ ಸುರಕ್ಷಿತವಾಗಿ ಬಂದಿಳಿದಿದೆ. ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ ಎಂದು ಸಂಸ್ಥೆ ಹೇಳಿದೆ. 

ಈ ವರ್ಷದ ಅಂತಾರಾಷ್ಟ್ರೀಯ ಯೋಗ ದಿನ ಕೋಲ್ಕತಾದಲ್ಲಿ

 ನವದೆಹಲಿ: ಈ ವರ್ಷದ ಅಂತಾರಾಷ್ಟ್ರೀಯ ಯೋಗ ದಿನದ (ಜೂ.21) ಮುಖ್ಯ ಕಾರ್ಯಕ್ರಮವನ್ನು ಇತ್ತೀಷೆಗಷ್ಟೇ ಬಿಜೆಪಿ ಪಾಲಾದ ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತಾದಲ್ಲಿ ಆಚರಿಸಲಾಗುವುದು ಎಂದು ಕೇಂದ್ರ ಆಯುಷ್‌ ಸಚಿವ ಪ್ರತಾಪ್‌ರಾವ್‌ ಜಾಧವ್‌ ಬುಧವಾರ ಘೋಷಿಸಿದ್ದಾರೆ.

ದೈಹಿಕ, ಮಾನಸಿಕ ಸ್ವಾಸ್ಥ್ಯ ರಕ್ಷಣೆ ಉದ್ದೇಶದಿಂದ, ‘ಆರೋಗ್ಯಕರ ವೃದ್ಧಾಪ್ಯಕ್ಕೆ ಯೋಗ’ ಥೀಂನಲ್ಲಿ ಈ ಬಾರಿಯ ಯೋಗದಿನವನ್ನು ಆಚರಿಸಲಾಗುವುದು. ಈ ಬಗ್ಗೆ, ಮಧ್ಯಪ್ರದೇಶದ ಖಜುರಾಹೊನಲ್ಲಿ ಆಯೋಜಿಸಲಾಗಿದ್ದ ಯೋಗ ಮಹೋತ್ಸವದಲ್ಲಿ ಮಾಹಿತಿ ನೀಡಿರುವ ಜಾಧವ್‌, ‘ಯೋಗವು ಭಾರತದ ಪ್ರಾಚೀನ ಬುದ್ಧಿವಂತಿಕೆಯನ್ನು ಪ್ರತಿನಿಧಿಸುತ್ತದೆ ಮತ್ತು ಸಮತೋಲಿತ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ದೇಶದ ಸಾಂಪ್ರದಾಯಿಕ ಪರಂಪರೆ ಮತ್ತು ಆಧ್ಯಾತ್ಮಿಕ ಪ್ರಜ್ಞೆಗೆ ಹೆಸರಾಗಿರುವ ಕೋಲ್ಕತ್ತಾದಲ್ಲಿ ಈ ಬಾರಿಯ ಯೋಗ ದಿನಾಚರಣೆಯನ್ನು ಆಯೋಜಿಸಲಾಗುವುದು’ ಎಂದು ಹೇಳಿದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

3 ಬಾರಿ ನೀಟ್‌ ಸೋರಿಕೆ ಆದ್ರೂ ಚರ್ಚೆಗೇಕೆ ತಡ? : ಕೇಂದ್ರದ ವಿರುದ್ಧ ಅಣ್ಣಾಮಲೈ ಆಕ್ರೋಶ
ನೀಟ್‌ ಕುರಿತು ಸಮಗ್ರ ಚರ್ಚೆಗೆ ಸಿದ್ಧ : ಸರ್ಕಾರ