ನವದೆಹಲಿ: ರಾಷ್ಟ್ರಗೀತೆಗೆ ಇರುವ ಶಿಷ್ಟಾಚಾರದ ನಿಯಮವನ್ನೂ ವಂದೇಮಾತರಂಗೂ ವಿಸ್ತರಣೆ ಮಾಡುವ ಬಗ್ಗೆ ಕೇಂದ್ರ ಸರ್ಕಾರ ಗಂಭೀರ ಚಿಂತನೆ ನಡೆಸಿದ್ದು, ಶೀಘ್ರವೇ ಈ ಕುರಿತು ಅದು ತನ್ನ ನಿರ್ಧಾರ ಪ್ರಕಟಿಸಲಿದೆ ಎಂದು ಮೂಲಗಳು ತಿಳಿಸಿವೆ.
ಒಂದು ವೇಳೆ ಈ ಚಿಂತನೆ ಕಾರ್ಯರೂಪಕ್ಕೆ ಬಂದರೆ ‘ರಾಷ್ಟ್ರಗೀತೆ ಜನಗಣಮನ ಗಾಯನದ ವೇಳೆ ಜನತೆ ಎದ್ದು ನಿಂತು ಗೌರವಿಸಬೇಕು’ ಎಂಬ ನಿಯಮ 150ನೇ ವರ್ಷಾಚರಣೆಯಲ್ಲಿರುವ ವಂದೇ ಮಾತರಂಗೂ ಅನ್ವಯವಾಗಲಿದೆ.
ಪ್ರಸ್ತುತ ಜನಗಣಮನ ಗಾಯನದ ವೇಳೆ ಜನರು ಎದ್ದು ನಿಂತು ಗೌರವ ಸಲ್ಲಿಸುವುದು ಕಡ್ಡಾಯ. ಇದನ್ನು ಉಲ್ಲಂಘಿಸಿದವರಿಗೆ ರಾಷ್ಟ್ರ ಗೌರವ 1971 ಹಾಗೂ ವಿಧಿ 51(ಎ) ಅಡಿಯಲ್ಲಿ 3 ವರ್ಷಗಳವರೆಗೆ ಶಿಕ್ಷೆ ವಿಧಿಸಲಾಗುತ್ತದೆ. ಇದೇ ನಿಯಮವನ್ನು ವಂದೇ ಮಾತರಂ ಗೀತೆಗೂ ಜಾರಿ ತರುವ ಸಾಧ್ಯತೆಗಳ ಕುರಿತು ಕೇಂದ್ರ ಗೃಹ ಸಚಿವಾಲಯವು ಚರ್ಚೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಒಂದು ವೇಳೆ ಜಾರಿಯಾದರೆ, ವಂದೇ ಮಾತರಂಗೂ ಎದ್ದು ನಿಂತು ಗೌರವ ಸಲ್ಲಿಕೆ ಕಡ್ಡಾಯವಾಗಲಿದೆ.
ಆದರೆ, ವಂದೇಮಾತರಂನಲ್ಲಿ ಒಂದು ಧರ್ಮದ ಗುಣಗಾನ ಮಾಡಲಾಗಿದೆ ಎಂದು ಆರೋಪಿಸಿ ಕೆಲವು ಪಕ್ಷಗಳು ಹಾಗೂ ಕೆಲವು ಧಾರ್ಮಿಕ ಸಂಘಟನೆಗಳು ಅದರ ಗೀತ ಗಾಯನವನ್ನು ವಿರೋಧಿಸುತ್ತಿವೆ. ಇದರ ನಡುವೆಯೇ ಈ ವಿದ್ಯಾಮನ ನಡೆದಿದೆ.
ವಂದೇಮಾತರಂಗೆ 150 ವರ್ಷ ಹಿನ್ನೆಲೆಯಲ್ಲಿ ಇತ್ತೀಚೆಗೆ ಸಂಸತ್ತಿನಲ್ಲಿ ವಿಶೇಷ ಚರ್ಚೆ
ಈ ವೇಳೆಗೆ ಕಾಂಗ್ರೆಸ್ ಅವಧಿಯಲ್ಲಿ ಗೀತೆಗೆ ಅವಮಾನ ಎಂದು ಪ್ರಧಾನಿ ವಾಗ್ದಾಳಿ
ಈಗ ಸ್ವಾತಂತ್ರ್ಯ ಚಳವಳಿಗೆ ಸ್ಪೂರ್ತಿ ತುಂಬಿದ ಗೀತೆ ಸ್ಥಾನಮಾನ ಹೆಚ್ಚಳಕ್ಕೆ ಚಿಂತನೆ
ಈ ಕುರಿತು ಉನ್ನತ ಮಟ್ಟದ ಸಭೆ. ವಿವಿಧ ವಿಷಯ ಚರ್ಚೆ. ಶೀಘ್ರ ಹೊಸ ಸ್ಥಾನಮಾನ?