ಹರಿದ್ವಾರದಲ್ಲಿ ಸದಾರಾಮ್‌ ಎಂದು ಹೆಸರು ಬದಲಿಸಿ ಕೋಲಿ ವಾಸ

KannadaprabhaNewsNetwork |  
Published : Sep 20, 2026, 02:45 AM IST
Koli

ಸಾರಾಂಶ

ಗುರುವಾರ ಇಲ್ಲಿಆತ್ಮ*ತ್ಯೆಗೆ ಶರಣಾದ ನಿಠಾರಿ ಹತ್ಯಾಕಾಂಡ ಪ್ರಕರಣದ ಆರೋಪಿ ಸುರಿಂದರ್‌ ಕೋಲಿ, ಕೇಸಿಂದ ಖುಲಾಸೆ ಬಳಿಕ ಹರಿದ್ವಾರದಲ್ಲಿ ತನ್ನ ಹೆಸರನ್ನು ಸದಾರಾಮ್‌ ಎಂದು ಬದಲಿಸಿಕೊಂಡು ವಾಸವಿದ್ದ ಎಂದು ತಿಳಿದುಬಂದಿದೆ.

ಹರಿದ್ವಾರ: ಗುರುವಾರ ಇಲ್ಲಿಆತ್ಮ*ತ್ಯೆಗೆ ಶರಣಾದ ನಿಠಾರಿ ಹತ್ಯಾಕಾಂಡ ಪ್ರಕರಣದ ಆರೋಪಿ ಸುರಿಂದರ್‌ ಕೋಲಿ, ಕೇಸಿಂದ ಖುಲಾಸೆ ಬಳಿ ಹರಿದ್ವಾರದಲ್ಲಿ ತನ್ನ ಹೆಸರನ್ನು ಸದಾರಾಮ್‌ ಎಂದು ಬದಲಿಸಿಕೊಂಡು ವಾಸವಿದ್ದ ಎಂದು ತಿಳಿದುಬಂದಿದೆ.

2025ರಲ್ಲಿ ನಿಠಾರಿ ಕೇಸಿಂದ ದೋಷಮುಕ್ತ

2025ರಲ್ಲಿ ನಿಠಾರಿ ಕೇಸಿಂದ ದೋಷಮುಕ್ತ ಬಳಿಕ ಹರಿದ್ವಾರದಲ್ಲಿ ಉಳಿದುಕೊಳ್ಳಲು ಸ್ಥಳದ ಹುಡುಕಾಟದಲ್ಲಿದ್ದ. ತಿಂಗಳ ಹಿಂದೆ ಹರಿದ್ವಾರದಲ್ಲಿ ಜೈ ಕಶ್ಯಪ್‌ ಎನ್ನುವವರಿಗೆ ತಾನು ಸದಾ ರಾಮ್‌, ಅಲ್ಮೋರಾ ನಿವಾಸಿ, ತನಗೆ ಮನೆಯ ಅವಶ್ಯಕತೆಯಿದೆ ಎಂದು ಪರಿಚಯಿಸಿಕೊಂಡಿದ್ದ.

ಪುರಾವೆ ಕೇಳಿದ ಬಳಿಕ ಆತ ಮನೆ ಖಾಲಿ ಮಾಡಿದ್ದ

ಅವರು ಆತನಿಗೆ ಹರಿದ್ವಾರದಿಂದ 15 ಕಿ.ಮೀ ದೂರದ ರೋಶನಾಬಾದ್‌ನಲ್ಲಿ ಎಂಬ ಮನೆ ಕೊಡಿಸಿದ್ದರು. ಅಲ್ಲಿ ಕೆಲ ದಿನ ಆತ ವಾಸವಿದ್ದ. ಆದರೆ ಮನೆ ಮಾಲೀಕರು ಗುರುತಿನ ಪುರಾವೆ ಕೇಳಿದ ಬಳಿಕ ಆತ ಮನೆ ಖಾಲಿ ಮಾಡಿದ್ದ. ಬಳಿಕ ಕೋಲಿ ಹರಿದ್ವಾರಕ್ಕೆ ಸ್ಥಳಾಂತರಗೊಂಡು 2 ಕಡೆ ಸೆಕ್ಯೂರಿಟಿ ಗಾರ್ಡ್‌ ಕೆಲಸಕ್ಕೆ ಸೇರಿ, ಅದನ್ನೂ ಬಿಟ್ಟಿದ್ದ. ಸಾಯುವುದಕ್ಕೆ ಮೂರು ದಿನಗಳ ಹಿಂದಷ್ಟೇ ಭೂಪತ್ವಾಲಾದಲ್ಲಿ ಚಹಾ ಅಂಗಡಿ ತೆರೆದಿದ್ದ ಎಂಬುದು ತನಿಖೆ ವೇಳೆ ತಿಳಿದುಬಂದಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಗ್ರೀನ್‌ಲ್ಯಾಂಡ್ ಅಮೆರಿಕ ವಶ ಸನ್ನಿಹಿತ
ಪರೀಕ್ಷೇಲಿ ಚಾಟ್‌ಜಿಪಿಟಿ ಬಳಕೆ : ಐಐಟಿ ವಿದ್ಯಾರ್ಥಿ ಆತ್ಮಹತ್ಯೆ