ಏಕೈಕ ರಾಜ್ಯಸಭಾ ಸ್ಥಾನ ಕಾಂಗ್ರೆಸ್‌ಗೆ ಬಿಟ್ಟುಕೊಟ್ಟ ಮುಖ್ಯಮಂತ್ರಿ ವಿಜಯ್‌

KannadaprabhaNewsNetwork |  
Published : Jun 05, 2026, 01:15 AM ISTUpdated : Jun 05, 2026, 04:41 AM IST
vijay congress

ಸಾರಾಂಶ

ಅಚ್ಚರಿಯ ಬೆಳವಣಿಗೆಯೊಂದರಲ್ಲಿ ತನ್ನ ಪಾಲಿಗೆ ಒದಗಿಬಂದಿದ್ದ ಏಕೈಕ ರಾಜ್ಯಸಭಾ ಸ್ಥಾನವನ್ನು ತಮಿಳುನಾಡಿನಲ್ಲಿ ಅಧಿಕಾರದಲ್ಲಿರುವ ಟಿವಿಕೆ ಪಕ್ಷವು ಮಿತ್ರಪಕ್ಷ ಕಾಂಗ್ರೆಸ್‌ಗೆ ನೀಡಿದೆ. ಈ ಸೀಟನ್ನು ಕಾಂಗ್ರೆಸ್‌, ಚುನಾವಣಾ ತಂತ್ರಗಾರ ಪ್ರವೀಣ್ ಚಕ್ರವರ್ತಿಗೆ ನೀಡುವ ಸಾಧ್ಯತೆ ಇದೆ.

ಚೆನ್ನೈ: ಅಚ್ಚರಿಯ ಬೆಳವಣಿಗೆಯೊಂದರಲ್ಲಿ ತನ್ನ ಪಾಲಿಗೆ ಒದಗಿಬಂದಿದ್ದ ಏಕೈಕ ರಾಜ್ಯಸಭಾ ಸ್ಥಾನವನ್ನು ತಮಿಳುನಾಡಿನಲ್ಲಿ ಅಧಿಕಾರದಲ್ಲಿರುವ ಟಿವಿಕೆ ಪಕ್ಷವು ಮಿತ್ರಪಕ್ಷ ಕಾಂಗ್ರೆಸ್‌ಗೆ ನೀಡಿದೆ.

ಪ್ರವೀಣ್ ಚಕ್ರವರ್ತಿಗೆ ನೀಡುವ ಸಾಧ್ಯತೆ

 ಈ ಸೀಟನ್ನು ಕಾಂಗ್ರೆಸ್‌, ಚುನಾವಣಾ ತಂತ್ರಗಾರ ಪ್ರವೀಣ್ ಚಕ್ರವರ್ತಿಗೆ ನೀಡುವ ಸಾಧ್ಯತೆ ಇದೆ. ತಮಿಳ್ನಾಡಲ್ಲಿ ವಿಜಯ್‌ ಸರ್ಕಾರ ರಚನೆಗೆ ಕಾಂಗ್ರೆಸ್‌ ಬೆಂಬಲ ನೀಡಿತ್ತು, ಜೊತೆಗೆ ಟಿವಿಕೆ-ಕಾಂಗ್ರೆಸ್‌ ಮೈತ್ರಿಕೂಟ ರಚನೆಯಲ್ಲಿ ಪ್ರವೀಣ್‌ ಚಕ್ರವರ್ತಿ ಮಹತ್ವದ ಪಾತ್ರವಹಿಸಿದ್ದರು. ಇದನ್ನು ಗಮನದಲ್ಲಿಟ್ಟುಕೊಂಡು ವಿಜಯ್‌ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. 

ಷಣ್ಮುಗಂರಿಂದ ತೆರವಾಗಿದ್ದ 1ರಾಜ್ಯಸಭಾ ಸ್ಥಾನ

ಇತ್ತೀಚೆಗೆ ನಡೆದಿದ್ದ ಅಸೆಂಬ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿರುವ ಎಐಎಡಿಎಂಕೆಯ ಷಣ್ಮುಗಂರಿಂದ ತೆರವಾಗಿದ್ದ 1ರಾಜ್ಯಸಭಾ ಸ್ಥಾನಕ್ಕೆ ಜೂ.18ರಂದು ಚುನಾವಣೆ ನಡೆಯಲಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಸಸ್ಪೆನ್ಸ್ ಅಂತ್ಯ: ನಾಳೆ ಕ್ಸಿ ಭಾರತಕ್ಕೆ
ಈ ದಶಕದ ಅಂತ್ಯದ ವೇಳೆ ಎಐನಿಂದ ಮಾನವರ ನಾಶ!