ತ.ನಾಡು ದೇಗುಲದ ಮೋಕ್ಷ ಮಾರ್ಗದಲ್ಲಿ ನುಸುಳಿ ಭಕ್ತ ಸಾವು, ಇನ್ನೊಬ್ಬಾಕೆ ಪಾರು

KannadaprabhaNewsNetwork |  
Published : Jul 30, 2026, 04:15 AM IST
Temple

ಸಾರಾಂಶ

ಮೋಕ್ಷ ಪ್ರಾಪ್ತಿಗೆಂದು ಅರುಣಾಚಲ ಗಿರಿಯ ಅಣ್ಣಾಮಲೈಯಾರ್ ದೇವಾಲಯದಲ್ಲಿರುವ ಕಿರಿದಾದ ಕಿಂಡಿಯ ಮೂಲಕ ನುಸುಳಲು ಯತ್ನಿಸಿದ ಆಂಧ್ರಪ್ರದೇಶದ ಭಕ್ತರೊಬ್ಬರು ಸಾವನ್ನಪ್ಪಿದ್ದಾರೆ. ಇದೇ ಸಾಹಸಕ್ಕಿಳಿಸಿದ್ದ ಇನ್ನೊಬ್ಬ ಮಹಿಳೆ ಅದೃಷ್ಟವಶಾತ್‌ ಪಾರಾಗಿ ಹೊರಬಂದಿದ್ದಾರೆ.

ತಿರವಣ್ಣಾಮಲೈ: ಮೋಕ್ಷ ಪ್ರಾಪ್ತಿಗೆಂದು ಅರುಣಾಚಲ ಗಿರಿಯ ಅಣ್ಣಾಮಲೈಯಾರ್ ದೇವಾಲಯದಲ್ಲಿರುವ ಕಿರಿದಾದ ಕಿಂಡಿಯ ಮೂಲಕ ನುಸುಳಲು ಯತ್ನಿಸಿದ ಆಂಧ್ರಪ್ರದೇಶದ ಭಕ್ತರೊಬ್ಬರು ಸಾವನ್ನಪ್ಪಿದ್ದಾರೆ.  

ಮಹಿಳೆ ಅದೃಷ್ಟವಶಾತ್‌ ಪಾರಾಗಿ ಹೊರಬಂದಿದ್ದಾರೆ

ಇದೇ ಸಾಹಸಕ್ಕಿಳಿಸಿದ್ದ ಇನ್ನೊಬ್ಬ ಮಹಿಳೆ ಅದೃಷ್ಟವಶಾತ್‌ ಪಾರಾಗಿ ಹೊರಬಂದಿದ್ದಾರೆ. ಕೆಲ ದಿನಗಳ ಹಿಂದೆ ಈ ಕಿಂಡಿಯ ಮೂಲಕ ನುಸುಳಲೆತ್ನಿಸಿದ್ದ ಮಣಿಕುಮಾರ್‌(36) ಎಂಬುವವರಿಗೆ ಉಸಿರಾಟದಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು.  

ಘಟನೆಗಳು ಮರುಕಳಿಸುತ್ತಿರುವುದಕ್ಕೆ ಕಳವಳ

ಅಗ್ನಿಶಾಮಕ ಮತ್ತು ತುರ್ತು ಸೇವಾ ಸಿಬ್ಬಂದಿಯ ನೆರವಿನಿಂದ ಅವರನ್ನು ಹೊರಗೆಳೆದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಮೃತಪಟ್ಟಿದ್ದರು. ಇಂತಹ ಘಟನೆಗಳು ಮರುಕಳಿಸುತ್ತಿರುವುದಕ್ಕೆ ಕಳವಳ ವ್ಯಕ್ತವಾಗುತ್ತಿದ್ದು, ಅಗತ್ಯ ಸೂಚನಾ ಫಲಕಗಳ ಅಳವಡಿಕೆ, ಭದ್ರತಾ ಸಿಬ್ಬಂದಿ ನಿಯೋಜನೆಯ ಆಗ್ರಹ ಕೇಳಿಬರುತ್ತಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಮಂಗ್ಳೂರು ಪಬ್ಬಲ್ಲಿ ಮಹಿಳೆ ಮೇಲೆ ಹಲ್ಲೆ ಮಾಡಿದವನಿಗೆ ಜೋಶಿ ಮಣೆ: ಪ್ರಿಯಾಂಕಾ
ಜಾರ್ಖಂಡ್‌: ₹2.2 ಕೋಟಿ ಇನಾಮು ಹೊಂದಿದ್ದ ನಕ್ಸಲ್‌ ಬೆಸ್ರಾ ಬಂಧನ