2026ರ ಏಷ್ಯಾಡ್‌ನಲ್ಲಿ ತೇಲುವ ಕ್ರೀಡಾ ಗ್ರಾಮ!

KannadaprabhaNewsNetwork |  
Published : May 16, 2025, 01:45 AM ISTUpdated : May 16, 2025, 06:30 AM IST
cricket stadium lights

ಸಾರಾಂಶ

ಜಪಾನ್‌ನ ಐಚಿ-ನಗೊಯಾದಲ್ಲಿ ನಡೆಯಲಿರುವ 2026ರ ಏಷ್ಯನ್‌ ಗೇಮ್ಸ್‌ನಲ್ಲಿ ತೇಲುವ ಕ್ರೀಡಾ ಗ್ರಾಮ ಇರಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ನವದೆಹಲಿ: ಜಪಾನ್‌ನ ಐಚಿ-ನಗೊಯಾದಲ್ಲಿ ನಡೆಯಲಿರುವ 2026ರ ಏಷ್ಯನ್‌ ಗೇಮ್ಸ್‌ನಲ್ಲಿ ತೇಲುವ ಕ್ರೀಡಾ ಗ್ರಾಮ ಇರಲಿದೆ ಎಂದು ಆಯೋಜಕರು ತಿಳಿಸಿದ್ದಾರೆ. ಹಣಕಾಸು ಉಳಿತಾಯಕ್ಕಾಗಿ ಕಟ್ಟಡಗಳನ್ನು ಕಟ್ಟುವ ಬದಲು ಐಷಾರಾಮಿ ಕ್ರೂಸ್‌ ಹಡಗಿನಲ್ಲಿ 4600 ಅಥ್ಲೀಟ್ಸ್‌, ಅಧಿಕಾರಿಗಳನ್ನು ಉಳಿಸಲು ಆಯೋಜಕರ ಯೋಜನೆ ಹಾಕಿಕೊಂಡಿದ್ದಾರೆ. 

ಈ ಹಡಗಿನಲ್ಲೇ ಕ್ರೀಡಾಪಟುಗಳಿಗೆ ಬೇಕಿರುವ ಜಿಮ್‌ ಸೇರಿ ಎಲ್ಲಾ ವ್ಯವಸ್ಥೆ ಮಾಡುವುದಾಗಿ ತಿಳಿಸಿದ್ದಾರೆ. ಕ್ರೀಡಾಕೂಟದಲ್ಲಿ 45 ರಾಷ್ಟ್ರಗಳ ಅಥ್ಲೀಟ್ಸ್‌, ಕೋಚ್‌, ಅಧಿಕಾರಿಗಳು ಸೇರಿ ಒಟ್ಟು 15000 ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. 

ಇದೇ ವೇಳೆ, ಸುಮಾರು 2400ಕ್ಕೂ ಹೆಚ್ಚಿನ ಮಂದಿಗೆ ಹಡಗುಕಟ್ಟೆಯ ಮೇಲಿರುವ ರೆಸಾರ್ಟ್‌ಗಳಲ್ಲಿ ಕೊಠಡಿಗಳ ವ್ಯವಸ್ಥೆ ಮಾಡಲು ಉದ್ದೇಶಿಸಲಾಗಿದೆ. ಇನ್ನುಳಿದವರಿಗೆ ಹಡಗು ಕಂಟೇನರ್‌ಗಳಲ್ಲಿ ತಾತ್ಕಾಲಿಕ ಕೊಠಡಿಗಳ ನಿರ್ಮಾಣ ಮಾಡಲು ಆಯೋಜಕರು ನಿರ್ಧರಿಸಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. 2026ರ ಸೆ.19ರಿಂದ ಅ.4ರ ವರೆಗೂ ಕ್ರೀಡಾಕೂಟ ನಡೆಯಲಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಉತ್ತರದ ಮಹಿಳೆಯರು ಬರೀ ಮನೆಗೆಲಸಕ್ಕೆ ಸೀಮಿತ: ದಯಾನಿಧಿ
ಶೀಘ್ರ ಇರಾನ್‌ ತೊರೆಯಿರಿ : ಭಾರತೀಯರಿಗೆ ಸೂಚನೆ