ಸೋನಿಯಾ ಕಾರಣಕ್ಕೆ ಇಂದು ಕ್ರಿಸ್ಮಸ್‌ ಅವಕಾಶ : ರೇವಂತ್‌

KannadaprabhaNewsNetwork |  
Published : Dec 22, 2025, 02:00 AM ISTUpdated : Dec 22, 2025, 05:05 AM IST
Revant reddy

ಸಾರಾಂಶ

‘ಇಂದು ರಾಜ್ಯದಲ್ಲಿ ಕ್ರಿಸ್ಮಸ್‌ ಆಚರಣೆ ಸಾಧ್ಯವಾಗಿದ್ದರೆ ಅದು ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿ ಅವರ ತ್ಯಾಗದಿಂದ’ ಎಂದು ತೆಲಂಗಾಣದ ಮುಖ್ಯಮಂತ್ರಿ ರೇವಂತ್‌ ರೆಡ್ಡಿ ಹೇಳಿದ್ದಾರೆ. ಅವರ ಈ ಹೇಳಿಕೆ ಕ್ರೈಸ್ತ ಸಮುದಾಯಕ್ಕೆ ಮಾಡಿದ ಅವಮಾನ. ಚಮಚಾಗರಿಯಲ್ಲಿ ಅವರು ನಂ.1 ಎಂದು ಬಿಜೆಪಿ ಕಿಡಿ ಕಾರಿದೆ.

ಹೈದ್ರಾಬಾದ್‌: ‘ಇಂದು ರಾಜ್ಯದಲ್ಲಿ ಕ್ರಿಸ್ಮಸ್‌ ಆಚರಣೆ ಸಾಧ್ಯವಾಗಿದ್ದರೆ ಅದು ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿ ಅವರ ತ್ಯಾಗದಿಂದ’ ಎಂದು ತೆಲಂಗಾಣದ ಮುಖ್ಯಮಂತ್ರಿ ರೇವಂತ್‌ ರೆಡ್ಡಿ ಹೇಳಿದ್ದಾರೆ. ಅವರ ಈ ಹೇಳಿಕೆ ಕ್ರೈಸ್ತ ಸಮುದಾಯಕ್ಕೆ ಮಾಡಿದ ಅವಮಾನ. ಚಮಚಾಗರಿಯಲ್ಲಿ ಅವರು ನಂ.1 ಎಂದು ಬಿಜೆಪಿ ಕಿಡಿ ಕಾರಿದೆ.

ಹೈದ್ರಾಬಾದ್‌ನ ಲಾಲ್‌ ಬಹದ್ದೂರ್‌ ಸ್ಟೇಡಿಯಂನಲ್ಲಿ ಶನಿವಾರ ರಾಜ್ಯ ಸರ್ಕಾರ ಆಯೋಜಿಸಿದ್ದ ಕ್ರಿಸ್ಮಸ್‌ ಆಚರಣೆ ವೇಳೆ ಮಾತನಾಡಿದ ರೆಡ್ಡಿ, ‘ಸೋನಿಯಾ ಅವರ ತ್ಯಾಗದಿಂದಾಗಿ ಇಂದು ತೆಲಂಗಾಣದಲ್ಲಿ ಕ್ರಿಸ್ಮಸ್‌ ಆಚರಿಸಲು ಸಾಧ್ಯವಾಗಿದೆ. ಅವರ ಜನ್ಮದಿನ ಮತ್ತು ತೆಲಂಗಾಣ ರಚನೆಯಾಗಿರುವುದು ಕ್ರಿಸ್ಮಸ್‌ ತಿಂಗಳಲ್ಲಿ ಎಂಬುದು ವಿಶೇಷ’ ಎಂದು ಹೇಳಿದ್ದರು. ಕೇಂದ್ರದಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿದ್ದ ಸಮಯದಲ್ಲಿ ತೆಲಂಗಾಣ ರಚನೆಯ ನಿರ್ಧಾರ ತೆಗೆದುಕೊಳ್ಳಲಾಗಿದ್ದ ಕಾರಣ ರೆಡ್ಡಿ ಹೀಗೆ ಹೇಳಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

ಬಿಜೆಪಿ ಕಿಡಿ:

ರೇವಂತ್‌ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ ವಕ್ತಾರ ಶೆಹಜಾದ್‌ ಪೂನಾವಾಲಾ, ‘ಚಮಚಾಗಿರಿಯೂ ಕ್ರೀಡೆಯಿದ್ದರೆ ರೆಡ್ಡಿ ಒಲಿಪಿಕ್‌ ಚಿನ್ನದ ಪದಕ ತರುತ್ತಿದ್ದರು. ಸೋನಿಯಾರ ಗುಣಗಾನ ಮಾಡುವ ಭರದಲ್ಲಿ ಎಲ್ಲಾ ಮಿತಿಗಳನ್ನು ಅವರು ಮೀರಿದ್ದಾರೆ. ಇದರಿಂದ ಕಿಸ್ತ ಹಾಗೂ ಕ್ರೈಸ್ತರಿಗೆ ಅವಮಾನವಾಗಿದೆ. ಒಂದು ಪರಿವಾರದ ಪ್ರತಿ ಕುರುಡುಭಕ್ತಿ ಇದ್ದರೆ ಹೀಗೇ ಆಗೋದು’ ಎಂದು ತಿವಿದಿದ್ದಾರೆ.

ಜನಪತ್‌ನಲ್ಲಿ ಕ್ರಿಸ್ಮಸ್‌ ಆಚರಣೆ

ಇನ್ನೋರ್ವ ವಕ್ತಾರ ಆರ್‌.ಪಿ.ಸಿಂಗ್‌ ಪ್ರತಿಕ್ರಿಯಿಸಿ, ‘ಸೋನಿಯಾ ಅಧಿಕಾರದಲ್ಲಿದ್ದಾಗ ಅವರ ನಿವಾಸವಾಗಿದ್ದ ಜನಪತ್‌ನಲ್ಲಿ ಕ್ರಿಸ್ಮಸ್‌ ಆಚರಣೆ ನಡೆಯುತ್ತಿತ್ತು. ಆದರೆ ದೀಪಾವಳಿಯನ್ನು ಆಚರಿಸಲಾಗುತ್ತಿರಲಿಲ್ಲ’ ಎಂದಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ರಾಜಕೀಯ ಪಕ್ಷಗಳಿಗೆ ₹3811 ಕೋಟಿ ಫಂಡ್‌ : ಬಿಜೆಪಿಗೇ 82%!
ಕಾಂಗ್ರೆಸ್‌ನಿಂದ ದೇಶ ವಿರೋಧಿ ಚಟುವಟಿಕೆ : ಮೋದಿ ಮತ್ತೆ ತರಾಟೆ