ಇಂದು ಮೋದಿ-ಟ್ರಂಪ್‌ ದ್ವಿಪಕ್ಷೀಯ ಸಭೆ

KannadaprabhaNewsNetwork |  
Published : Jun 17, 2026, 02:00 AM IST
ಮೋದಿ | Kannada Prabha

ಸಾರಾಂಶ

ಫ್ರಾನ್ಸ್‌ನಲ್ಲಿ ಆರಂಭವಾಗಿರುವ ಜಿ 7 ಶೃಂಗಸಭೆಯ ವೇಳೆ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಬುಧವಾರ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.

- ಜಿ7 ಶೃಂಗದ ವೇಳೆ ಫ್ರಾನ್ಸಲ್ಲಿ ಮಾತುಕತೆ

- ಇರಾನ್‌ ಯುದ್ಧದ ನಂತರ ಮೊದಲ ಭೇಟಿ

- ಭಾರತದ ನಾವಿಕರ ಸಾವಿನ ಬಗ್ಗೆ ಪ್ರಸ್ತಾಪಿಸ್ತಾರಾ ಮೋದಿ?ಪ್ಯಾರಿಸ್: ಫ್ರಾನ್ಸ್‌ನಲ್ಲಿ ಆರಂಭವಾಗಿರುವ ಜಿ 7 ಶೃಂಗಸಭೆಯ ವೇಳೆ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಬುಧವಾರ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.

ಉಭಯ ನಾಯಕರು ಜಿ7 ಶೃಂಗಸಭೆ ಆರಂಭದಲ್ಲಿ ಮಂಗಳವಾರ ಸಂಜೆ ಪರಸ್ಪರ ಭೇಟಿಯಾಗಿ ಹಸ್ತಲಾಘವ ಮಾಡಿದರು. ಇದು 16 ತಿಂಗಳ ನಂತರ ಇವರ ಮೊದಲ ಭೇಟಿಯಾಗಿತ್ತು. ಇನ್ನು ಬುಧವಾರ ಇಬ್ಬರ ನಡುವೆ ದ್ವಿಪಕ್ಷೀಯ ಸಭೆ ಏರ್ಪಾಡಾಗಿದೆ.

ಯಾವ ಬಗ್ಗೆ ಮಾತುಕತೆ?:

ಭಾರತ ಹಾಗೂ ಅಮೆರಿಕ ನಡುವಿನ ವ್ಯಾಪಾರ ಒಪ್ಪಂದ ಇನ್ನೂ ಸಂಪೂರ್ಣ ಜಾರಿಗೆ ಬಂದಿಲ್ಲ. ಈ ಬಗ್ಗೆ ಮಾತುಕತೆ ನಡೆವ ನಿರೀಕ್ಷೆಯಿದೆ.

ಇನ್ನು ಇರಾನ್‌-ಅಮೆರಿಕ ಸಮರದಿಂದ ಭಾರತಕ್ಕೆ ತೈಲ ಹಾಗೂ ಅನಿಲದ ಸಮಸ್ಯೆಯಾಗಿದೆ. ಅಲ್ಲದೆ, ಹೋರ್ಮುಜ್‌ ಜಲಸಂಧಿಯಲ್ಲಿ ನಡೆದ ದಾಳಿಗಳಲ್ಲಿ ಭಾರತದ ಹಡಗುಗಳಲ್ಲಿದ್ದ 3 ನಾವಿಕರು ಸಾವನ್ನಪ್ಪಿದ್ದಾರೆ. ಈ ಬಗ್ಗೆ ಭಾರತ ಈಗಾಗಲೇ ಅಮೆರಿಕ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಖುದ್ದು ಮೋದಿ ಟ್ರಂಪ್‌ ಎದುರು ಈ ವಿಷಯ ಪ್ರಸ್ತಾಪಿಸುವರೇ ಎಂದು ಕಾದು ನೋಡಬೇಕಿದೆ.

ಈಗಾಗಲೇ ಭಾರತದಲ್ಲಿ ಕಾಂಗ್ರೆಸ್‌ ಸೇರಿದಂತೆ ಪ್ರತಿಪಕ್ಷಗಳು ನಾವಿಕರ ಸಾವಿನ ಬಗ್ಗೆ ಟ್ರಂಪ್‌ ಮುಂದೆ ಮೋದಿ ಮೌನ ಮುರಿಯಬೇಕು ಎಂದು ಅಗ್ರಹಿಸುತ್ತಲೇ ಇವೆ.

==

ಹೈದರಾಬಾದ್‌ನ ‘ಟ್ರಂಪ್‌’

ರಸ್ತೆ ಜೂ.23ಕ್ಕೆ ಉದ್ಘಾಟನೆ

ಹೈದರಾಬಾದ್: ಇಲ್ಲಿ ನಿರ್ಮಾಣವಾಗಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೆಸರಿನ ರಸ್ತೆಯನ್ನು ಜೂ.23ರಂದು ಉದ್ಘಾಟಿಸಲು ರೇವಂತ್‌ ರೆಡ್ಡಿ ನೇತೃತ್ವದ ತೆಲಂಗಾಣ ಸರ್ಕಾರ ಸಿದ್ಧತೆ ನಡೆಸಿದೆ.ರೀಜನಲ್‌ ರಿಂಗ್‌ ರೋಡ್‌ ಯೋಜನೆಯಡಿ ಹಲವು ಉನ್ನತ ದರ್ಜೆಯ ರಸ್ತೆಗಳಿಗೆ ಅಧ್ಯಕ್ಷ ಟ್ರಂಪ್‌, ಉದ್ಯಮಿ ದಿ. ರತನ್‌ ಟಾಟಾ ಹಾಗೂ ಗೂಗಲ್ ಕಂಪನಿಯ ಹೆಸರಿಡಲು ಕಳೆದ ಡಿಸೆಂಬರ್‌ನಲ್ಲಿ ಸರ್ಕಾರ ನಿರ್ಧರಿಸಿತ್ತು. ಈ ರಸ್ತೆಗಳು ಈಗ ಉದ್ಘಾಟನೆಗೆ ಸಿದ್ಧವಾಗಿವೆ. ರಾಜ್ಯವನ್ನು ನಾವೀನ್ಯತೆ-ಚಾಲಿತ ಅಭಿವೃದ್ಧಿ ಕೇಂದ್ರವಾಗಿಸುವ ಉದ್ದೇಶದಿಂದ ರಸ್ತೆಗಳಿಗೆ ಜಾಗತಿಕ ನಾಯಕರ ಹಾಗೂ ಕಂಪನಿಗಳ ಹೆಸರಿಟ್ಟು ಗೌರವಿಸಲು ಸರ್ಕಾರ ಮುಂದಾಗಿದೆ.

==

ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಸ್ಥಾನ: ಸ್ಲೊವಾಕಿಯಾ ಆಗ್ರಹ

ಬ್ರಾಟಿಸ್ಲಾವಾ: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಕಾಯಂ ಸದಸ್ಯತ್ವ ನೀಡಬೇಕು ಎಂದು ಸ್ಲೊವಾಕಿಯಾ ಆಗ್ರಹಿಸಿದೆ.ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಸ್ಲೋವಾಕ್ ಪ್ರಧಾನಿ ರಾಬರ್ಟ್ ಫಿಕೊ ನಡುವಿನ ಮಾತುಕತೆ ನಂತರ ಬಿಡುಗಡೆ ಮಾಡಿದ ಜಂಟಿ ಹೇಳಿಕೆಯಲ್ಲಿ, ವಿಶ್ವಸಂಸ್ಥೆ ಮತ್ತು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸೇರಿದಂತೆ ಬಹುಪಕ್ಷೀಯ ಸಂಸ್ಥೆಗಳು ಸುಧಾರಣೆ ಆಗಬೇಕು ಎಂದು ಆಗ್ರಹಿಸಲಾಯಿತು. ಈ ವೇಳೆ, ಬದಲಾದ ಜಗತ್ತಿನಲ್ಲಿ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಕಾಯಂ ಸದಸ್ಯತ್ವ ನೀಡಬೇಕು ಎಂದು ಫಿಕೊ ಆಗ್ರಹಿಸಿದರು.

ಸದ್ಯ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ರಷ್ಯಾ, ಚೀನಾ, ಅಮೆರಿಕ, ಫ್ರಾನ್ಸ್‌ ಹಾಗೂ ಬ್ರಿಟನ್ ಮಾತ್ರ ಸ್ಥಾನ ಪಡೆದಿವೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ತಮ್ಮ ವಿರುದ್ಧ ಸುವೇಂದು ಗೆಲುವು ಪ್ರಶ್ನಿಸಿ ದೀದಿ ಹೈಕೋರ್ಟ್‌ಗೆ
ಪ್ರಿಸ್ಕ್ರಿಪ್ಷನ್‌ ಇಲ್ಲದೆ ಕೆಮ್ಮಿನ ಸಿರಪ್‌ ಮಾರಾಟ ನಿಷಿದ್ಧ