ಹಾಲಿನ ಬೆಲೆ ಹೆಚ್ಚಳವಾದರೂ ಚಹಾ-ಕಾಫಿ ಬೆಲೆ ಹೆಚ್ಚಿಸುವುದಿಲ್ಲ ಎಂದು ನಗರದ ಹೊಟೆಲ್ ಉದ್ಯಮ ತಿಳಿಸಿದೆ.
ಬೆಂಗಳೂರು: ಹಾಲಿನ ಬೆಲೆ ಹೆಚ್ಚಳವಾದರೂ ಚಹಾ-ಕಾಫಿ ಬೆಲೆ ಹೆಚ್ಚಿಸುವುದಿಲ್ಲ ಎಂದು ನಗರದ ಹೊಟೆಲ್ ಉದ್ಯಮ ತಿಳಿಸಿದೆ.
ಪ್ರಸ್ತುತ ನಗರದ ಸಾಧಾರಣ, ಮಧ್ಯಮ ಹೊಟೆಲ್‌ಗಳಲ್ಲಿ ಚಹಾ-ಕಾಫಿ ಬೆಲೆ ₹ 10 ರಿಂದ ₹ 22 ವರೆಗಿದೆ. ಕೋಂಪ್ಲೇನ್, ಬೂಸ್ಟ್, ಬದಾಮಿ ಹಾಲಿಗೂ ವಿವಿಧೆಡೆ ಇದೇ ದರವಿದೆ. ಬೆಲೆ ಹೆಚ್ಚಳದ ಜೊತೆಗೆ ಪ್ಯಾಕೇಟ್ ಹಾಲಿನ ಪ್ರಮಾಣ ಕೂಡ ಹೆಚ್ಚಿಸಲಾಗಿದೆ. ಹೀಗಾಗಿ ಪೇಯಗಳ ದರವನ್ನು ಹೆಚ್ಚಿಸುವ ಅಗತ್ಯ ಬರಲಾರದು. ಆದರೆ, ಮುಂದಿನ ದಿನಗಳಲ್ಲಿ ಗ್ಯಾಸ್ ಸಿಲಿಂಡರ್ ಸೇರಿ ಇತರೆ ವಸ್ತುಗಳ ದರ ಹೆಚ್ಚಾದರೆ ಬೆಲೆ ಪರಿಷ್ಕರಣೆ ಬಗ್ಗೆ ಯೋಚಿಸುತ್ತೇವೆ. ಆದರೆ ಸದ್ಯಕ್ಕೆ ಅಂತಹ ಯೋಚನೆಗಳಿಲ್ಲ ಎಂದು ಹೊಟೆಲ್ ಮಾಲೀಕರು ಹೇಳಿದರು.
ಹೊಟೆಲ್ ಉದ್ಯಮವೇ ನಂದಿನಿ ಬ್ರಾಂಡ್‌ನಿಂದ ಹೆಚ್ಚಿನ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಖರೀದಿಸಿ ಪ್ರೋತ್ಸಾಹಿಸುತ್ತಿದೆ. ರೈತರಿಗೆ ಸಹಕರಿಸುವ ಸಲುವಾಗಿ 50ಎಂಎಲ್ ಹಾಲು ಹೆಚ್ಚಿಸಿ ₹ 2 ದರ ಏರಿಕೆ ಮಾಡಿರುವುದು ನಮ್ಮ ಉದ್ಯಮಕ್ಕೆ ಹೊರೆಯಾಗುತ್ತಿಲ್ಲ. ಹೀಗಾಗಿ ಕಾಫಿ ಮತ್ತು ಟೀ ಬೆಲೆ ಏರಿಕೆ ಮಾಡುತ್ತಿಲ್ಲ ಎಂದು ಬೃಹತ್ ಬೆಂಗಳೂರು ಹೊಟೆಲ್‌ಗಳ ಸಂಘದ ಅಧ್ಯಕ್ಷ ಪಿ.ಸಿ.ರಾವ್ ತಿಳಿಸಿದ್ದಾರೆ.