ಅಮೆರಿಕದಲ್ಲಿನ ಪ್ರಮುಖ ಮಾಧ್ಯಮ ಸಂಸ್ಥೆಗಳು ಹಾಗೂ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವಿನ ಸಮರ ತಾರಕಕ್ಕೇರಿದೆ. ಟೀವಿ ಚಾನೆಲ್‌ಗಳಿಗೆ ಸಡ್ಡು ಹೊಡೆದಿರುವ ಟ್ರಂಪ್, ತಮ್ಮದೇ ಆದ ‘ಟ್ರಂಪ್ ಟೀವಿ’ ಹೆಸರಿನ ಟೀವಿ ಚಾನೆಲ್ ಆರಂಭಿಸಿದ್ದಾರೆ.
ಇತ್ತೀಚೆಗೆ ಶ್ವೇತಭವನಕ್ಕೆ 3 ಚಾನೆಲ್‌ಗಳಿಗೆ ನಿರ್ಬಂಧ
ಇದಕ್ಕೆ ಪ್ರತಿಯಾಗಿ ಟ್ರಂಪ್ ಕಾರ್ಯಕ್ರಮ ಪ್ರಸಾರ ಸ್ಥಗಿತ
ಸಿಟ್ಟಿಗೆಟ್ಟ ಟ್ರಂಪ್‌ರಿಂದ ಹೊಸ ಟ್ರಂಪ್ ಟೀವಿ ಚಾನೆಲ್ ಶುರು
ಯುಟ್ಯೂಬ್ ಮೂಲಕ ದಿನದ24 ಗಂಟೆ ಟ್ರಂಪ್ ಸುದ್ದಿ ಪ್ರಸಾರ
ಈ ಹಿಂದೆ ಟ್ವೀಟರ್‌ಗೆ ಬದಲಿಯಾಗಿ ಟ್ರುತ್ ಎಂಬ ಜಾಲತಾಣ ಆರಂಭಿಸಿದ್ದ ಅಮೆರಿಕ ಅಧ್ಯಕ್ಷ
ವಾಷಿಂಗ್ಟನ್: ಅಮೆರಿಕದಲ್ಲಿನ ಪ್ರಮುಖ ಮಾಧ್ಯಮ ಸಂಸ್ಥೆಗಳು ಹಾಗೂ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವಿನ ಸಮರ ತಾರಕಕ್ಕೇರಿದೆ. ಟೀವಿ ಚಾನೆಲ್‌ಗಳಿಗೆ ಸಡ್ಡು ಹೊಡೆದಿರುವ ಟ್ರಂಪ್, ತಮ್ಮದೇ ಆದ ‘ಟ್ರಂಪ್ ಟೀವಿ’ ಹೆಸರಿನ ಟೀವಿ ಚಾನೆಲ್ ಆರಂಭಿಸಿದ್ದಾರೆ.
ಈ ಹಿಂದೆ ಅವರು ಟ್ವೀಟರ್‌ಗೆ ಸಡ್ಡು ಹೊಡೆದು ‘ಟ್ರುತ್ ಸೋಷಿಯಲ್’ ಎಂಬ ತಮ್ಮದೇ ಆದ ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರಂ ಆರಂಭಿಸಿದ್ದರು ಎಂಬುದು ಗಮನಾರ್ಹ.
ಪ್ರತ್ಯೇಕ ಟೀವಿ ಏಕೆ?:
ತಮ್ಮ ಬಗ್ಗೆ ಸರಿಯಾಗಿ ವರದಿ ಮಾಡುತ್ತಿಲ್ಲ ಎಂದು ಆರೋಪಿಸಿ ಸಿಎನ್‌ಎನ್ ಸೇರಿದಂತೆ 3 ಚಾನೆಲ್‌ಗಳಿಗೆ ಟ್ರಂಪ್ ಇತ್ತೀಚೆಗೆ ಶ್ವೇತಭವನ ಪ್ರವೇಶ ನಿರ್ಬಂಧಿಸಿದ್ದರು. ಇದನ್ನು ಪ್ರಶ್ನಿಸಿ, ಬಹುತೇಕ ಟೀವಿ ಚಾನೆಲ್‌ಗಳು ಮಂಗಳವಾರ ಟ್ರಂಪ್ ಅವರ ಶ್ವೇತಭವನ ಕಾರ್ಯಕ್ರಮಗಳ ಪ್ರಸಾರ ನಿರ್ಬಂಧಿಸಿದವು.
ಆದರೆ, ಇದಕ್ಕೆ ಟಕ್ಕರ್ ನೀಡಿರುವ ಟ್ರಂಪ್ ಇದೀಗ ದಿನದ 24 ಗಂಟೆಯೂ ಅಮೆರಿಕದ ಅಧ್ಯಕ್ಷೀಯ ಕಾರ್ಯಕ್ರಮಗಳ ಎಕ್ಸ್‌ಕ್ಲೂಸಿವ್ ಪ್ರಸಾರಕ್ಕೆ ಮುಂದಾಗಿದ್ದಾರೆ ಹಾಗೂ ʼಟ್ರಂಪ್ ಟೀವಿʼ ಎಂಬ ಯೂಟ್ಯೂಬ್ ಸ್ಟ್ರೀಮಿಂಗ್ ಫ್ಲಾಟ್‌ಫಾರ್ಮ್ ಅನ್ನು ಅಧಿಕೃತವಾಗಿ ಆರಂಭಿಸಿದ್ದಾರೆ.
ವಿರೋಧಿ ಮಮ್ದಾನಿ ಭೇಟಿ:
ಈ ನಡುವೆ, ನ್ಯೂಯಾರ್ಕ್‌ಗೆ ವಿಶ್ವಸಂಸ್ಥೆ ಸಾಮಾನ್ಯ ಸಭೆಗಾಗಿ ಆಗಮಿಸಿದ ಟ್ರಂಪ್, ತಮ್ಮ ರಾಜಕೀಯ ಕಡುವೈರಿ ಹಾಗೂ ನ್ಯೂಯಾರ್ಕ್ ಮೇಯರ್ ಜೋಹ್ರಾನ್ ಮಮ್ದಾನಿ ಅವರನ್ನು ಸೌಹಾರ್ದಯುತವಾಗಿ ಭೇಟಿ ಮಾಡಿದರು.
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.