ಇಬ್ಬರು ಠಾಕ್ರೆ ಆಪ್ತರು ಶಿಂಧೆ ಶಿವಸೇನೆಗೆ

KannadaprabhaNewsNetwork |  
Published : Jun 22, 2026, 01:15 AM IST
Shivasene

ಸಾರಾಂಶ

ಠಾಕ್ರೆ ಬಣದ 6 ಶಿವಸೇನಾ (ಯುಬಿಟಿ) ಸಂಸದರು ಬಂಡಾಯ ಎದ್ದಿದ್ದಾರೆ ಎಂಬ ಸುದ್ದಿಗಳ ಬೆನ್ನಲ್ಲೇ ಇಬ್ಬರು ಸಂಸದರು ಭಾನುವಾರ ಬಹಿರಂಗವಾಗಿ ಶಿಂಧೆ ಬಣದ ಶಿವಸೇನೆ ಸೇರ್ಪಡೆ ಘೋಷಣೆ ಮಾಡಿದ್ದಾರೆ. ಓಂ ರಾಜೆ ನಿಂಬಾಳ್ಕರ್‌ ಹಾಗೂ ನಾಗೇಶ್ ಪಾಟೀಲ್ ಅಷ್ಟಿಕರ್ ಅವರೇ ಆ ಸಂಸದರು.

 ಸಂಭಾಜಿನಗರ :  ಠಾಕ್ರೆ ಬಣದ 6 ಶಿವಸೇನಾ (ಯುಬಿಟಿ) ಸಂಸದರು ಬಂಡಾಯ ಎದ್ದಿದ್ದಾರೆ ಎಂಬ ಸುದ್ದಿಗಳ ಬೆನ್ನಲ್ಲೇ ಇಬ್ಬರು ಸಂಸದರು ಭಾನುವಾರ ಬಹಿರಂಗವಾಗಿ ಶಿಂಧೆ ಬಣದ ಶಿವಸೇನೆ ಸೇರ್ಪಡೆ ಘೋಷಣೆ ಮಾಡಿದ್ದಾರೆ. ಓಂ ರಾಜೆ ನಿಂಬಾಳ್ಕರ್‌ ಹಾಗೂ ನಾಗೇಶ್ ಪಾಟೀಲ್ ಅಷ್ಟಿಕರ್ ಅವರೇ ಆ ಸಂಸದರು.

ಆಪರೇಷನ್‌ ಸಕ್ಸಸ್‌. ಪೇಷಂಟ್‌ ಹೆಲ್ದಿ

ಇದರ ನಡುವೆಯೇ, ‘ಆಪರೇಷನ್‌ ಸಕ್ಸಸ್‌. ಪೇಷಂಟ್‌ ಹೆಲ್ದಿ’ (ಸಂಸದರ ಸೆಳೆವ ಕಾರ್ಯಾಚರಣೆ ಯಶಸ್ವಿ ಆಗಿದೆ) ಎಂದು ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್‌ ಸೂಚ್ಯವಾಗಿ ಹೇಳಿದ್ದಾರೆ. ಶಿಂಧೆ ಶಿವಸೇನೆ ಮುಖ್ಯಸ್ಥ, ಡಿಸಿಎಂ ಏಕನಾಥ ಶಿಂಧೆ ಕೂಡ ಈ ಮಾತು ಅನುಮೋದಿಸಿದ್ದಾರೆ.

ಭಾನುವಾರ ವಿಡಿಯೋ ಸಂದೇಶ ಬಿಡುಗಡೆ ಮಾಡಿರುವ ಅಷ್ಟಿಕರ್‌, ‘ಜೂನ್ 18 ರವರೆಗೆ ಪಕ್ಷಾಂತರ ನಿರ್ಧಾರ ಮಾಡಿರಲಿಲ್ಲ. ಆದರೆ ನನ್ನ ವಿರುದ್ಧ ಅವಾಚ್ಯ ಬೈಗುಳ ಅಂದು ಕೇಳಿಬಂತು. ಆಗಲೇ ಪಕ್ಷ ಬಿಡಲು ನಿರ್ಧರಿಸಿದೆವು’ ಎಂದರು. ಈ ಮೂಲಕ ತಮ್ಮನ್ನು ‘ಗಾಂ**’ ಎಂದು ಅವಾಚ್ಯ ಶಬ್ದದಿಂದ ಬೈದ ಉದ್ಧವ್‌ ಠಾಕ್ರೆ ಆಪ್ತ ಸಂಜಯ ರಾವುತ್‌ ಬಗ್ಗೆ ಕಿಡಿಕಾರಿದರು.

‘ನಾನು ಸಿದ್ಧಾಂತದಲ್ಲಿ ರಾಜಿ ಆಗಿಲ್ಲ/ ಒಂದು ಶಿವಸೇನೆಯಿಂದ ಇನ್ನೊಂದಕ್ಕೆ ಹೋಗುತ್ತಿದ್ದೇನೆ ಅಷ್ಟೆ. ವಿಪಕ್ಷದಲ್ಲಿ ಇದ್ದ ಕಾರಣ 5 ಕೋಟಿ ರು. ಸಂಸದೀಯ ಅನುದಾನ ಬಿಟ್ಟು ಬೇರೇನೂ ಬರುತ್ತಿರಲಿಲ್ಲ. ಅಭಿವೃದ್ಧಿ ಕಾರ್ಯ ಕೈಗೊಳ್ಳುವುದೇ ಕಷ್ಟವಾಗಿತ್ತು. ಹೀಗಾಗಿ ಶಿಂಧೆ ಬಣದ ಶಿವಸೇನೆ ಸೇರುತ್ತಿದ್ದೇನೆ’ ಎಂದು ಸ್ಪಷ್ಟಪಡಿಸಿದರು.ನಿಂಬಾಳ್ಕರ್‌ ಕೂಡ ಗುಡ್‌ಬೈ:ಈ ನಡುವೆ, 6 ಬಂಡಾಯ ಯುಬಿಟಿ ಶಿವಸೇನೆ ಸಂಸದರಲ್ಲಿದ್ದಾರೆ ಎನ್ನಲಾಗಿದ್ದ ಸಂಸದ ಓಂಪ್ರಕಾಶ್ ರಾಜೇ ನಿಂಬಾಳ್ಕರ್ ಕ್ಷೇತ್ರದ ಜನಸಂಪರ್ಕ ಸಭೆ ಬಳಿಕ ಮಾತಾಡಿ, ಶಿಂಧೆ ಸೇನೆ ಸೇರುವ ಘೋಷಣೆ ಮಾಡಿದರು.ಬಂಡಾಯ ಸಂಸದರು ಸಂಪರ್ಕದಲ್ಲಿ:‘ಈ ನಡುವೆ ಅತೃಪ್ತ ಸಂಸದರು ತಮ್ಮ ಕ್ಷೇತ್ರದಲ್ಲಿ ಜನರ ಆಕ್ರೋಶಕ್ಕೆ ಹೆದರಿದ್ದಾರೆ. ಇನ್ನೂ ಕೆಲವರು ಶಿವಸೇನೆ ಜತೆಗೆ ಸಂಪರ್ಕದಲ್ಲಿದ್ದಾರೆ’ ಎಂದು ಶಿವಸೇನೆ (ಯುಬಿಟಿ) ಸಂಸದ ಸಂಜಯ್‌ ರಾವುತ್‌ ಹೇಳಿದ್ದಾರೆ.

ನಮ್ಮದೇ ನೈಜ ಶಿವಸೇನೆ: ಶಾಗೆ ಠಾಕ್ರೆ ತಿರುಗೇಟು

ಮುಂಬೈ: ‘ಈಗ ಇರುವುದೊಂದೇ ಶಿವಸೇನೆ. ಅದು ಶಿಂಧೆ ಶಿವಸೇನೆ’ ಎಂದು ಕೊಲ್ಹಾಪುರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿದ ಹೇಳಿಕೆಗೆ ಶಿವಸೇನೆ (ಯುಬಿಟಿ) ಅಧ್ಯಕ್ಷ ಉದ್ಧವ್ ಠಾಕ್ರೆ ತಿರುಗೇಟು ನೀಡಿದ್ದು, ‘ಶಿವಸೇನೆ ಎಂದರೆ ಅದು ನಮ್ಮದು ಮಾತ್ರ. 2 ಶಿವಸೇನೆ ಇರಲು ಸಾಧ್ಯವಿಲ್ಲ’ ಎಂದು ಗುಡುಗಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಚರ್ಚೆಯೇ ನಡೆಯದ ಸಂಸತ್‌ನ ಮುಂಗಾರು ಅಧಿವೇಶನ ಅಂತ್ಯ!
ಖರ್ಗೆ ಭಾಷಣ ಮಾಡಿದ ಸ್ಥಳದಲ್ಲಿ ಹೋಮ ಮಾಡಿ ಶುದ್ಧೀಕರಣ!